ನವಲಗುಂದ –
ಶಾಸಕ ಎನ್ ಹೆಚ್ ಕೋನರಡ್ಡಿ ಯವರ ಮನವಿಗೆ ಸ್ಪಂದಿಸಿದ ರಾಜ್ಯ ಸರ್ಕಾರ – ನವಲ ಗುಂದ ವಿಧಾನ ಸಭಾ ಕ್ಷೇತ್ರದ ಅಣ್ಣಿಗೇರಿ ಬರಗಾಲ ಪೀಡಿತ ಪ್ರದೇಸ ಪಟ್ಟಿಯಲ್ಲಿ ಸೇರ್ಪಡೆ ಹೊರಬೀತ್ತು ಆದೇಶ. ಹೌದು ರಾಜ್ಯದಲ್ಲಿನ ಬರಗಾಲ ಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿದ್ದ ಬೆನ್ನಲ್ಲೇ ಮತ್ತೆ ಕೆಲವೊಂದಿಷ್ಟು ತಾಲ್ಲೂಕುಗಳನ್ನು ಸೇರ್ಪಡೆ ಮಾಡಲಾಗಿದೆ
ಹೌದು ಧಾರವಾಡ ಜಿಲ್ಲೆಯಲ್ಲೂ ಕೂಡಾ ಸಾಕಷ್ಟು ಪ್ರದೇಶಗಳು ಕೂಡಾ ಈ ಒಂದು ಬರಗಾಲ ಪಟ್ಟಿಯಿಂದ ದೂರವಾಗಿದ್ದವು ಹೀಗಾಗಿ ಈ ಒಂದು ವಿಚಾರ ಕುರಿತಂತೆ ಶಾಸಕ ಎನ್ ಹೆಚ್ ಕೋನರಡ್ಡಿ ಹಾಗೂ ಇತ್ತ ಕಲಘಟಗಿ ಯಲ್ಲಿ ರೈತರು ಕೂಡಾ ಬೀದಿಗಿಳಿದು ಹೋರಾಟ. ವನ್ನು ಮಾಡಿದ್ದರು.ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಕೂಡಾ ನಿರಂತವಾಗಿ ರಾಜ್ಯ ಸರ್ಕಾರಕ್ಕೆ ಒತ್ತಡವನ್ನು ಹೇರಿದ್ದರು.
ಇವೆಲ್ಲದರ ಪರಿಣಾಮವಾಗಿ ಸಧ್ಯ ರಾಜ್ಯ ಸರ್ಕಾರ ಧಾರವಾಡ ಜಿಲ್ಲೆಯ ಮೂರು ಪ್ರದೇಶ ಗಳನ್ನು ಮತ್ತೆ ಬರಗಾಲ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆ ಮಾಡಿ ಘೋಷಣೆ ಮಾಡಿದೆ. ನವಲಗುಂದ ವಿಧಾನಸಭಾ ಕ್ಷೇತ್ರದ ಅಣ್ಣಿಗೇರಿ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಲು ಸರ್ಕಾರಕ್ಕೆ ಶಾಸಕ ಎನ್ ಹೆಚ್ ಕೋನರಡ್ಡಿಯವರು ಮನವಿ ಮಾಡಿದ್ದರು.ಇವರ ಮನವಿಗೆ ಸ್ಪಂದಿಸಿದ ಸರ್ಕಾರ
ಅಣ್ಣಿಗೇರಿ ತಾಲ್ಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿ ಆದೇಶಿಸಿದೆ ಮುಖ್ಯಮಂತ್ರಿ ಸಿದ್ದರಾ ಮಯ್ಯ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಬರಗಾಲ ಘೋಷ ಣೆಯ ಉಪಸಂಪುಟ ಸಮಿತಿಯ ಅಧ್ಯಕ್ಷರಾ ಗಿದ್ದು ಕಂದಾಯ ಸಚಿವರಾದ ಕೃಷ್ಣೆ ಬೈರೇಗೌಡ, ಕೃಷಿ ಸಚಿವ ಚೆಲುವನಾರಾಯ ಸ್ವಾಮಿ ಗ್ರಾಮೀಣ ಅಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ, ಹಾಗೂ ಸರ್ಕಾರದ ಎಲ್ಲಾ ಸಚಿವರಿಗೆ ಶಾಸಕ ಎನ್ ಹೆಚ್ ಕೋನರಡ್ಡಿ ಯವರು ಈ ಭಾಗದ ಜನತೆಯ ಪರವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ನವಲಗುಂದ…..