ಧಾರವಾಡ –
ವಾರ್ಡ್ 1 ರಲ್ಲಿ ಪೌರ ಕಾರ್ಮಿಕರಿಗಾಗಿ ವಿಶ್ರಾಂತಿ ಕೊಠಡಿ ಭೀಮಾಶ್ರಯ ಉದ್ಘಾಟನೆ – ಪಾಲಿಕೆಯ ಸದಸ್ಯೆ ಅನಿತಾ ಚಳಗೇರಿ ಉದ್ಘಾಟನೆ…..ಪಾಲಿಕೆಯ ಅಧಿಕಾರಿಗಳು ಪೌರ ಕಾರ್ಮಿಕರು ಸೇರಿದಂತೆ ಹಲವರು ಉಪಸ್ಥಿತಿ…..
ದಿನ ಬೆಳಗಾದರೆ ಸಾಕು ಬಿಡುವಿಲ್ಲದೇ ನಗರವನ್ನು ಅಂದ ಚೆಂದವಾಗಿ ಕಾಣುವಂತೆ ಕೆಲಸವನ್ನು ಮಾಡುತ್ತಿ ರುವ ಪೌರ ಕಾರ್ಮಿಕರಿಗಾಗಿ ಇದೇ ಮೊದಲ ಬಾರಿಗೆ ರಾಜ್ಯದಲ್ಲಿಯೇ ಮೊದಲ ಎಂಬಂತೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಿಶ್ರಾಂತಿ ಕೊಠಡಿಗಳನ್ನು ಆರಂಭ ಮಾಡಲಾಗಿದೆ.
ಹೌದು ಮಹಾನಗರ ಪಾಲಿಕೆಗೆ ಆಯುಕ್ತರಾಗಿ ಡಾ ಈಶ್ವರ ಉಳ್ಳಾಗಡ್ಡಿಯವರು ಬಂದ ಮೇಲೆ ಪೌರ ಕಾರ್ಮಿಕರ ಬೇಡಿಕೆಗಳ ಕುರಿತಂತೆ ಅದರಲ್ಲೂ ಪ್ರಮುಖವಾಗಿ ಪ್ರತಿದಿನ ತಪ್ಪದೇ ಸ್ವಚ್ಚತೆಯನ್ನು ಮಾಡುತ್ತಿರುವ ಪೌರ ಕಾರ್ಮಿಕರಿಗಾಗಿ ವಿಶ್ರಾಂತಿ ಪಡೆದುಕೊಳ್ಳಲು ಭೀಮಾಶ್ರಯ ಕೊಠಡಿಗಳನ್ನು ಆರಂಭ ಮಾಡಲಾಗಿದ್ದು ಹುಬ್ಬಳ್ಳಿ ಧಾರವಾಡದಲ್ಲಿ ಬಹುತೇಕ ಪ್ರಮಾಣದಲ್ಲಿ ಅಲ್ಲಲ್ಲಿ ತೆರೆಯಲಾಗಿದ್ದು
ಇತ್ತ ಧಾರವಾಡದ ವಲಯ ಕಚೇರಿ 3 ರ ವ್ಯಾಪ್ತಿಯಲ್ಲಿನ ವಾರ್ಡ್ 1 ರಲ್ಲಿ ಪೌರ ಕಾರ್ಮಿಕರಿಗಾಗಿ ವಿಶ್ರಾಂತಿ ಕೊಠಡಿಯನ್ನು ಉದ್ಘಾಟನೆ ಮಾಡಲಾಯಿತು. ಪಾಲಿಕೆಯ ಸದಸ್ಯೆ ಶ್ರೀಮತಿ ಅನಿತಾ ಚಳಗೇರಿಯವರು ಉದ್ಘಾಟನೆಯನ್ನು ಮಾಡಿದರು.ಇದೇ ವೇಳೆ ಈ ಒಂದು ವಿಶ್ರಾಂತಿ ಕೊಠಡಿಯನ್ನು ಸರಿಯಾಗಿ ಬಳಸಿಕೊಳ್ಳು ವಂತೆ ಇದರೊಂದಿಗೆ ಪೌರ ಕಾರ್ಮಿಕರ ಯಾವುದೇ ರೀತಿಯ ಸಮಸ್ಯೆ ಇದ್ದರೂ ಗಮನಕ್ಕೆ ತಗೆದುಕೊಂಡು ಬನ್ನಿ ನಿಮ್ಮೊಂದಿಗೆ ಸದಾ ನಾವು ಇರುತ್ತೇವೆ ಎಂಬ ಮಾತನ್ನು ಹೇಳಿದರು.
ಈ ಒಂದು ಸಂದರ್ಭದಲ್ಲಿ ಪಾಲಿಕೆಯ ಸಹಾಯಕ ಆಯುಕ್ತರಾದ ಅರವಿಂದ ಜಮಖಂಡಿ, ಆರೋಗ್ಯ ನಿರೀಕ್ಷರಾದ ಶ್ರೀಮತಿ ಪದ್ಮಾವತಿ ತುಂಬಗಿ,ಪೌರ ಕಾರ್ಮಿಕರ ಮೇಲ್ವಿಚಾರಕರಾದ ಭೀಮರಾಜು ಸಗಬಾಲ,ಮಧುಕೇಶ ಕೊಂಗವಾಡ,ವಾರ್ಡ್ ನ ಪ್ರಮುಖರಾದ ಪ್ರಭು ಹಿರೇಮಠ,ಬಸು ರುದ್ರಾಪೂರ,
ಜಯಶ್ರೀ ಗೌಳಿ,ಸಾವಿತ್ರಿ ಅಗಳಗಟ್ಟಿ, ಬಸವರಾಜ ಬಂಡಿವಡ್ಡರ, ನಾರಾಯಣ ಚಳಗೇರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ……