ಬೆಂಗಳೂರು –
ಫೆ.1ರಿಂದ ರಾಜ್ಯದಲ್ಲಿ ಇ-ಆಫೀಸ್’ ಬಳಕೆ ಕಡ್ಡಾಯ ಪಾಲಿಸದಿದ್ರೇ ನೋಟಿಸ್ – ಕಂದಾಯ ಸಚಿವ ಕೃಷ್ಣಬೈರೇಗೌಡ ಖಡಕ್ ಎಚ್ಚರಿಕೆ ಹೌದು
ಬೆಂಗಳೂರು: ಈಗಾಗಲೇ ರಾಜ್ಯದ ಹಲವು ಇಲಾಖೆಗಳಲ್ಲಿ ಇ-ಆಫೀಸ್ ಜಾರಿಗೊಳಿಸಲಾಗಿದೆ. ಹೀಗಿದ್ರೂ ಕಂದಾಯ ಇಲಾಖೆಯಲ್ಲಿ ಕೆಲವರು ಭೌತಿಕ ಕಡತಗಳನ್ನು ನಿರ್ವಹಣೆ ಮಾಡ್ತಿದ್ದಾರೆ ಎಂಬ ದೂರು ಬಂಧಿತ್ತು.
ಈ ಹಿನ್ನಲೆಯಲ್ಲಿ ಫೆಬ್ರವರಿ.1ರಿಂದ ಇ-ಆಫೀಸ್ ಕಡ್ಡಾಯಗೊಳಿಸಲಾಗಿದೆ.ಒಂದು ವೇಳೆ ಇದನ್ನು ಪಾಲಿಸದೇ ಇದ್ರೆ ನೋಟಿಸ್ ನೀಡೋದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ಖಡಕ್ ಎಚ್ಚರಿಕೆ ನೀಡಿದ್ದಾರೆ.ಈ ಕುರಿತಂತೆ ಮಾಹಿತಿ ಹಂಚಿಕೊಂಡಿರುವಂತ ಅವರು, ಇ- ಆಫೀಸ್ ತಂತ್ರಾಂಶ ಬಳಕೆ ಮಾಡದೇ,
ಭೌತಿಕ ಕಡತಗಳನ್ನು ತೆರೆಯುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.ಇ- ಆಫೀಸ್ ತಂತ್ರಾಂಶ ಕುರಿತು ನಿಯಮಿತವಾಗಿ ವರದಿ ಸಲ್ಲಿಸುವಂತೆ ಹಿರಿಯ ಅಧಿಕಾರಿಗಳಿಗೆ ಸೂಚಿ ಸಲಾಗಿದೆ. ಭೌತಿಕ ಕಡತ ನಿರ್ವಹಣೆ ಮಾಡಿದ ವರಿಗೆ ನೋಟಿಸ್ ಜಾರಿಗೊಳಿಸಲಾಗುವುದು ಎಂದಿದ್ದಾರೆ.
ಕಂದಾಯ ಇಲಾಖೆಯ ಎಲ್ಲ ಹಂತದ ಕಚೇರಿಗ ಳಲ್ಲಿ ಫೆಬ್ರವರಿ.1ರಿಂದ ಇ-ಆಫೀಸ್ ತಂತ್ರಾಂಶದ ಮೂಲಕವೇ ಕಡತ ವಿಲೇವಾರಿ ಮಾಡುವುದನ್ನು ಕಡ್ಡಾಯಗೊಳಿಸಲಾಗುವುದು. ಭೌತಿಕ ಕಡತಗಳ ನಿರ್ವಹಣೆಯನ್ನು ಸಂಪೂರ್ಣವಾಗಿ ಸ್ಥಗಿತ ಗೊಳಿಸಲಾಗುವುದು.
ಟಪಾಲು ಸ್ವೀಕಾರ ಮತ್ತು ಮುಂದಿನ ಪ್ರಕ್ರಿಯೆ ಯೂ ಇ-ಆಫೀಸ್ ಮೂಲಕವೇ ನಡೆಯಲಿದೆ ಎಂದಿದ್ದು ಈಗಾಗಲೇ ಈ ಒಂದು ಪ್ರಕ್ರಿಯೆ ರಾಜ್ಯದಲ್ಲಿ ಪ್ರಾಯೋಗಿಕವಾಗಿ ಆರಂಭಗೊಂ ಡಿದ್ದು ಫೆಬ್ರವರಿ 1 ರಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..