ಬೆಂಗಳೂರು –
ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಗಾಗಿ ಶೀಘ್ರದಲ್ಲೇ ಕೆಲವೊಂದಿಷ್ಟು ನಿಯಮಗಳನ್ನು ಬದಲಾವಣೆ ಮಾಡಿ ಪರಿಷ್ಕ್ರತ ಮಾಡಿ ಆದೇಶವನ್ನು ಹೊರಡಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.ಬೆಂಗ ಳೂರಿನಲ್ಲಿ ಮಾತನಾಡಿದ ಅವರು ಈ ಕುರಿತಂತೆ ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದ್ದು ಈ ಹಿಂದೆ ನೇಮಕಾತಿಯಲ್ಲಿ ಇದ್ದ ನಿಯಮಗಳನ್ನು ಬದಲಾವಣೆ ಮಾಡಿ ಬಿಟಿ ಪದವೀಧರರಿಗೂ ಅವಕಾಶ ನೀಡಲಾಗುತ್ತಿದೆ ಎಂದರು.
ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಮೊದಲು ಪರಿಷ್ಕೃತ ಆದೇಶ ಹೊರಡಿಸಲಾಗುವುದು ಎಂದರು ಟಿಇಟಿ ಪಾಸಾಗಿರುವ ಬಯೋಟೆಕ್ನಾಲಜಿ ಪದವೀಧರರಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸಿಇಟಿ ಪರೀಕ್ಷೆಗೆ ಅವಕಾಶ ನೀಡುವುದಾಗಿ ಹೇಳಿದರು.ಆರರಿಂದ ಎಂಟನೇ ತರಗತಿ ಶಿಕ್ಷಕರ ನೇಮಕಾತಿಗೆ ಸರ್ಕಾರ ರೂಪಿಸಿದ ವೃಂದ ಮತ್ತು ನೇಮಕಾತಿ ಪ್ರಕಟಣೆಯಲ್ಲಿ ಬಯೋಟೆಕ್ನಾಲಜಿ ಪದವಿ ಪಡೆದ ಬಿಎಡ್,ಡಿಎಡ್ ಅಭ್ಯರ್ಥಿಗಳನ್ನು ಕಡೆಗಣಿ ಸಲಾಗಿತ್ತು.ಇದರಿಂದಾಗಿ ಬಯೋಟೆಕ್ನಾಲಜಿಯಲ್ಲಿ ಪದವಿ ಪಡೆದ ಸಾವಿರಾರು ಅಭ್ಯರ್ಥಿಗಳು ಟಿಇಟಿ ಪಾಸಾಗಿದ್ದರೂ ಶಿಕ್ಷಕರ ನೇಮಕಾತಿ ವಂಚಿತರಾಗುವಂತಾಗಿತ್ತು.ಈಗ ನಿಯ ಮಗಳನ್ನು ಬದಲಿಸಿ ಪರಿಷ್ಕೃತ ಆದೇಶ ಹೊರಡಿಸುವು ದಾಗಿ ಸಚಿವರು ಹೇಳಿರುವುದರಿಂದ ಅವರಿಗೆ ಅವಕಾಶ ಸಿಗಲಿದ್ದು ಇನ್ನೂ ಪ್ರಮುಖವಾಗಿ ವರ್ಗಾವಣೆ ನಿಯಮಗ ಳಲ್ಲಿ ಬದಲಾವಣೆ ಮಾಡಿ ಒಂದು ಬಾರಿ ಸ್ವಂತ ಜಿಲ್ಲೆಗೆ ವರ್ಗಾವಣೆ ಮಾಡಿ ಎಂದು ಹಲವಾರು ವರ್ಷಗಳಿಂದ ಶಿಕ್ಷಕರು ಕೇಳುತ್ತಲೆ ಇದ್ದಾರೆ ಆದರೂ ಕೂಡಾ ಈವರೆಗೆ ಮಾತ್ರ ಬದಲಾವಣೆ ಮಾಡದೇ ನೇಮಕಾತಿಗಾಗಿ ನಿಯಮ ಗಳನ್ನು ಬದಲಾವಣೆ ಮಾಡಿ ವರ್ಗಾವಣೆಗೆಗಾಗಿ ಮಾಡದಿ ರುವುದು ಬೇಸರದ ಸಂಗತಿಯಾಗಿದ್ದು ಇನ್ನೂ ಇದನ್ನೇ ಲ್ಲವನ್ನು ನೋಡುತ್ತಾ ಸಂಘಟನೆಯ ನಾಯಕರು ಮಾತ್ರ ಮೌನವಾಗಿದ್ದಾರೆ.