ವಿಜಯಪುರ –
ಮಹಾಮಾರಿ ಕೋವಿಡ್ ಗೆ ರಾಜ್ಯದಲ್ಲಿ ಅತಿ ಹೆಚ್ಚು ಮೃತರಾದವರಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ಇದ್ದಾರೆ. ಹೀಗಿರುವಾಗ ಈಗಾಗಲೇ ಇದರಿಂದಾಗಿ ಆತಂಕಗೊಂಡಿರುವ ಶಿಕ್ಷಕರಿಗೆ ಮತ್ತೊಂದು ಆತಂಕ ಎದುರಾಗಿದೆ.

ಸಾಲು ಸಾಲು ಸಾವಿನಿಂದಾಗಿ ಈಗಾಗಲೇ ಭಯದ ಲ್ಲಿರು ಶಿಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಸಿಕ್ಕಿಲ್ಲ ಮತ್ತೊಂದು ಕಡೆಗೆ ಶಾಲೆಗಳು ಆರಂಭವಾಗಿ ದ್ದು ಇದರ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆ ಕೂಡಾ ಬಂದಿದ್ದು ಇದು ಒಂದೆಡೆಯಾದರೆ ಈಗಾ ಗಲೇ ರಾಜ್ಯದಲ್ಲಿ ಕೋವಿಡ್ ಕರ್ತವ್ಯಕ್ಕೆ ನಿಯೋಜನೆ ಮಾಡಿರುವ ಶಿಕ್ಷಕರನ್ನು ಕೂಡಲೇ ಸೇವೆಯಿಂದ ಮುಕ್ತಗೊಳಿಸುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆದೇಶವನ್ನು ಮಾಡಿದ್ದು ಇದೇಲ್ಲ ಒಂದೆಡೆಯಾದರೆ ಇದರ ನಡುವೆ ವಿಜಯಪುರ ಜಿಲ್ಲೆಯಲ್ಲಿ ಕೋವಿಡ್ ಕರ್ತವ್ಯಕ್ಕೆ ಮತ್ತೆ ಶಿಕ್ಷಕರನ್ನು ನೇಮಕ ಮಾಡಲಾಗಿದೆ.

ಹೌದು ಜಿಲ್ಲಾಧಿಕಾರಿ ಈ ಕುರಿತಂತೆ ಆದೇಶವನ್ನು ಮಾಡಿದ್ದು ಕೂಡಲೇ ಜಿಲ್ಲೆಯ ಗಡಿ ಪ್ರದೇಶದಲ್ಲಿ ಅಂತರ್ ರಾಜ್ಯಗಳಿಂದ ಆಗಮಿಸುತ್ತಿರುವ ಪ್ರಯಾ ಣಿಕರನ್ನು ಪರಿಶೀಲನೆ ಮಾಡಲು ಚೇಕ್ ಪೊಸ್ಟ್ ಗಳ ಲ್ಲಿ ಶಿಕ್ಷಕರನ್ನು ನೇಮಕ ಮಾಡಲಾಗಿದೆ.ಒಂದು ಕಡೆಗೆ ಶೈಕ್ಷಣಿಕ ಚಟುವಟಿಕೆಗಳ ತಯಾರಿ ಮಕ್ಕಳ ದಾಖ ಲಾತಿ ಆಂದೋಲನ ಎಸ್ ಎಸ್ ಎಲ್ ಸಿ ಪರೀಕ್ಷೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಸಿಗದ ಲಸಿಕೆ ವರ್ಗಾವಣೆಯ ಸಂದೇಶ ಹೀಗಿರುವಾಗ ಇನ್ನೂ ಕೂಡಾ ಅದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಶಿಕ್ಷಕರು ಮೃತರಾಗಿದ್ದರು ಕೂಡಾ ಮತ್ತೆ ಇದರೆಲ್ಲರ ನಡುವೆ ಜಿಲ್ಲಾಧಿಕಾರಿ ಕೋವಿಡ್ ಕರ್ತವ್ಯಕ್ಕೆ ಮತ್ತೆ ಶಿಕ್ಷಕರನ್ನು ನೇಮಕ ಮಾಡಿದ್ದಾರೆ. ಇದರಿಂದ ಜಿಲ್ಲೆಯಲ್ಲಿನ ಶಿಕ್ಷಕರು ಆತಂಕಗೊಂಡಿ ದ್ದಾರೆ.ಇನ್ನೂ ಇದನ್ನು ಪ್ರಶ್ನೆ ಮಾಡಬೇಕಾದ ಶಿಕ್ಷಕರ ಸಂಘಟನೆಯ ನಾಯಕರು ಮಾತ್ರ ಮೌನವಾಗಿದ್ದು ದುರಂತವೇ ಸರಿ
