ಬೆಂಗಳೂರು –
ವೇತನ ಪರಿಷ್ಕರಣಿಗೆ ಬೇಕು 12 ಸಾವಿರ ಕೋಟಿ ರೂ ನಿಂದ 18,000 ಕೋಟಿ – ನೌಕರರ ವೇತನ ಪರಿಷ್ಕರಣೆಯಿಂದ ಆಗಬಹುದಾದ ಆರ್ಥಿಕ ಹೊರೆ ನಿರ್ವಹಿಸಲು ಇರುವ ಮಾರ್ಗಗಳ ಬಗ್ಗೆ CM ಗೆ ಸಲಹೆ ನೀಡಿದ 7ನೇ ವೇತನ ಆಯೋಗದ ಟೀಮ
ಹೌದು ರಾಜ್ಯದ ಸಮಸ್ತ ಸರ್ಕಾರಿ ನೌಕರರ ವೇತನ ಪರಿಷ್ಕ್ರರಣೆಗಾಗಿ ಈಗಾಗಲೇ 7ನೇ ವೇತನ ಆಯೋಗವನ್ನು ರಚನೆ ಮಾಡಲಾಗಿದ್ದು ಇನ್ನೇನು ಎರಡು ತಿಂಗಳ ಒಳಗಾಗಿ ಈ ಒಂದು ಆಯೋಗವು ವರದಿಯನ್ನು ನೀಡಲಿದೆ.ಈ ಮಧ್ಯೆ ಈ ಒಂದು 7ನೇ ವೇತನ ಆಯೋಗವು ಜಾರಿ ಯಾದರೆ ವಾರ್ಷಿಕವಾಗಿ ವೇತನ ಪರಿಷ್ಕ್ರರಣೆಗೆ 12 ಸಾವಿರ ಕೋಟಿ ರೂಪಾಯಿಂದ 18 ಸಾವಿರ ಕೋಟಿ ರೂಪಾಯಿ ಬೇಕಾಗಲಿದೆ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಈ ಒಂದು ಪ್ರಮುಖವಾದ ಅಂಶವನ್ನು ಈಗಾಗಲೇ ಆಯೋಗವು ತನ್ನ ವರದಿಯಲ್ಲಿ ಉಲ್ಲೇಖವನ್ನು ಮಾಡಿದ್ದು ಇದನ್ನು ಮುಖ್ಯ ಮಂತ್ರಿ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮನವರಿ ಕೆಯನ್ನು ಮಾಡಲಾಗಿದೆ.
ಇದರೊಂದಿಗೆ ವೇತನ ಹೆಚ್ಚಳ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರಿಗೆ ಭರ್ಜರಿ ಸುದ್ದಿ ಸಿಗಲಿದೆ. ಇನ್ನೂ ಪ್ರಮುಖವಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗಾಗಿ ಹಣವನ್ನು ಹೊಂದಿಸಲು ಪರದಾಡುತ್ತಿದ್ದು ಹೀಗಾಗಿ ಈ ಒಂದು ಅಂಶವನ್ನು ಪ್ರಮುಖವಾಗಿ ಮುಂದಿಟ್ಟುಕೊಂಡಿರುವ 7ನೇ ವೇತನ ಆಯೋಗದ ಟೀಮ್ ನವರು ಮುಖ್ಯಮಂತ್ರಿ ಸೇರಿದಂತೆ ಆರ್ಥಿಕ ಇಲಾಖೆಯ ಅಧಿಕಾರಿ ಗಳೊಂದಿಗೆ 7ನೇ ವೇತನ ಆಯೋಗದ ಅಧ್ಯಕ್ಷರು ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದರು.
ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಾಣಿಕೆ ಸವಾಲು ಎದುರಿಸುತ್ತಿದೆ ನೌಕರರ ವೇತನ ಪರಿಷ್ಕರಿಸಿದಲ್ಲಿ ಆಗಬಹುದಾದ ಆರ್ಥಿಕ ಹೊರೆ ನಿರ್ವಹಿಸಲು ಇರುವ ಮಾರ್ಗಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ ಕೆಲವೊಂದಿಷ್ಟು ಸಲಹೆ ಸೂಚನೆಗಳನ್ನು ನೀಡಲಾಗಿದೆ. ವೇತನ ಪರಿಷ್ಕ ರಣಿಗೆ ವಾರ್ಷಿಕ 12 ಸಾವಿರ ಕೋಟಿ ರೂ. ನಿಂದ 18,000 ಕೋಟಿ ರೂ. ಅಗತ್ಯವಿದ್ದು ಏನೇನು ಮಾಡಬೇಕು ಎಂಬ ವಿಚಾರ ಕುರಿತಂತೆ ಕಂಪ್ಲೀಟ್ ಮಾಹಿತಿಯನ್ನು ಆಯೋಗವು ಮುಖ್ಯ ಮಂತ್ರಿ ಮತ್ತ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..