ಧಾರವಾಡ –
ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದ ಆರ್ ಎಸ್ ಬುರುಡಿ ಯವರು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರಾಗಿ ಪದೋನ್ನತಿ ಯೊಂದಿಗೆ ಅಧಿಕಾರ ವನ್ನು ವಹಿಸಿಕೊಂಡಿದ್ದಾರೆ ಹೌದು ಈ ಒಂದು ಪದೊನ್ನತಿ ಯನ್ನು ಪಡೆದಿರುವುದು ಸಮಾಜಕ್ಕೆ ಹೆಮ್ಮೆ ಮತ್ತು ಗೌರವವನ್ನು ತಂದಿದೆ.
ನೇರ, ದಿಟ್ಟ ಮತ್ತು ದಕ್ಷ ಪ್ರಾಮಾಣಿಕ ಅಧಿಕಾರಿಗಳಾದ ಇವರು ಸಮಾಜದ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿರುವವರು.ಸರಳತೆ ಅವರ ಹುಟ್ಟು ಗುಣ. ಬಡವ-ಶ್ರೀಮಂತರೆಂಬ ಬೇಧ-ಭಾವವಿಲ್ಲದ ಹೃದಯ ಶ್ರೀಮಂತಿಕೆಯುಳ್ಳವರು. ಜಾಗೃತ ಮನಸ್ಥಿತಿಯ ವೈಚಾರಿಕ ಪ್ರಜ್ಞೆಯನ್ನು ಹೊಂದಿರುವ ಅಧಿಕಾರಿಗಳಾದ ಅವರು, ಸೂಕ್ಷ್ಮ ಅವಲೋಕನದೊಂದಿಗೆ ಸಮಾಜಕ್ಕಾ ಗುವ ಯಾವುದೇ ನಷ್ಟವನ್ನು ತನ್ನ ಸಮಾಜದ ಜನರಲ್ಲಿ ಜಾಗೃತಿಯನ್ನುಂಟು ಮಾಡುವ ಮೂಲಕ.
ಆಗುವ ಹಾನಿಯನ್ನು ಕಡಿಮೆ ಮಾಡಲು ಶ್ರಮಿಸುವರು. ಸಮಾಜದ ಗುಂಪುಗಳಲ್ಲಿ ಕ್ರಿಯಾಶೀಲರಾಗಿದ್ದು… ಅಗತ್ಯವೆನಿಸಿದಲ್ಲಿ ಸಂದರ್ಭಾನುಸಾರ ಸೂಕ್ತ ಮಾರ್ಗದರ್ಶನವನ್ನು ಮಾಡುವವರು. ಅಂಥವರು ಈಗ ಜಿಲ್ಲಾ ಉಪನಿರ್ದೇಶಕರಾಗಿವುದು ಸಮಾಜಕ್ಕೆ ತುಂಬಾ ಸಂತೋಷವನ್ನುಂಟು ಮಾಡಿದೆ.
ಆ ಭಗವಂತ ಆಯುರಾರೋಗ್ಯ, ಸಿರಿ, ಸಂಪತ್ತು, ಸಕಲ ಸೌಭಾಗ್ಯಗಳನ್ನು ಕೊಟ್ಟು ಇನ್ನೂ ಹೆಚ್ಚಿನ ಹುದ್ದೆಗಳನ್ನು ದಯಪಾಲಿಸಲಿ ಎಂದು *ಕರ್ನಾಟಕ ರಾಜ್ಯ ಆದಿ ಜಾಂಬವ ಮಹಾಸಭಾ ಧಾರವಾಡದ ಕಾರ್ಯಕಾರಿ ಸಮಿತಿಯ ಅಧ್ಯಕ್ಷ,ಉಪಾಧ್ಯಕ್ಷ ಮತ್ತು ಕಾರ್ಯದರ್ಶಿ ಗಳು ಹಾಗೂ ಆದಿ ಜಾಂಬವ ಸರ್ಕಾರಿ ನೌಕರರ ಸಂಘ ಕರ್ನಾಟಕ ರಾಜ್ಯ ಇವರು ಹೇಳಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..