RSS ಮುಖಂಡ ಹೃದಯಾಘಾತದಿಂದ ಸಾವು – ಕಾರಿನಲ್ಲೇ ಸಾವಿಗೀಡಾದ ಸಂಘ ಪರಿವಾದ ನಾಯಕನ ಸಾವಿಗೆ ಸಂತಾಪ.ಆರ್ ಎಸ್ ಎಸ್ ಮುಖಂಡರೊಬ್ಬರು ಹೃದಯಾಘಾತದಿಂದ ನಿಧನರಾದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ಸಿದ್ದು ಚಿಕ್ಕದಾನಿ ಮುಧೋಳ ಅವರೇ ಮೃತರಾದವರಾಗಿದ್ದಾರೆ.
ಕಾರಿಗೆ ಡಿಸೇಲ್ ಹಾಕಿಸಿಕೊಂಡು ಇನ್ನೇನು ಹೊರಡಬೇಕು ಎಂದುಕೊಂಡಿದ್ದ ಇವರಿಗೆ ಎದೆನೋವು ಕಾಣಸಿಕೊಂಡಿದೆ ಹೀಗಾಗಿ ಕಾರಿನಲ್ಲೇ ಮೃತಪಟ್ಟಿದ್ದಾರೆ ಲೋಕಾಪೂರ ಪಟ್ಟಣದ ಬಳಿ ನಡೆದಿದೆ.ಆರ್ಎಸ್ಎಸ್ನಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು
ಕಳೆದ ರಾತ್ರಿ ಬಾಗಲಕೋಟೆ ಹೋಗಿ ವಾಪಸ್ ಬರುವಾಗ ಈ ಒಂದು ಘಟನೆ ನಡೆದಿದೆ. ಮುಧೋಳ ಪಟ್ಟಣದ ನಿವಾಸಿಯಾಗಿರುವ ಇವರು ಶಿವಾಜಿ ಸರ್ಕಲ್ ಬಳಿ ಮಂಜುನಾಥ ಮೊಬೈಲ್ ಶಾಪ್ ಇಟ್ಟುಕೊಂಡು ವ್ಯವಹಾರ ನಡೆಸುತ್ತಿದ್ದರು.ಲೋಕಾಪೂರ ಪಟ್ಟಣದ ಸಮೀಪ ಇರುವ ಎಸ್‌ಆರ್ ಪೆಟ್ರೋಲ್ ಪಂಪ್ನಲ್ಲಿ ಡೀಸೆಲ್ ಹಾಕಿಸಿಕೊಂಡು ಹೊರಡುವ ಸಮಯದಲ್ಲಿ ಅವರಿಗೆ ಎದೆನೋವು ಕಾಣಿಸಿ ಕೊಂಡಿತ್ತು.
ಕೂಡಲೇ ಸ್ವಲ್ಪ ಸಮಯ ವಿಶ್ರಾಂತಿ ಪಡೆಯಲು ಕಾರನ್ನು ರಸ್ತೆ ಬದಿ ನಿಲ್ಲಿಸಿದ್ದಾರೆ ಆದರೆ ತೀವ್ರ ಹೃದಯಾಘಾತದಿಂದ ಅವರು ಕಾರಲ್ಲೇ ಮೃತಪ ಟ್ಟಿದ್ದಾರೆ.ಮುಂಜಾನೆ ಸಮಯದಲ್ಲಿ ಪೆಟ್ರೋಲ್ ಬಂಕ್ನ ಕೆಲಸಗಾರರು ಬಂದು ನೋಡಿದಾಗ ಸಿದ್ದು ಅವರು ಮೃತ ಪಟ್ಟಿರುವುದು ಖಾತ್ರಿ ಆಗಿದೆ ನಂತರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಲೋಕಾಪೂರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಮುಧೋಳ…..























