ಹಟ್ಟಿ ಚಿನ್ನದ ಗಣಿ –
ರಾಜ್ಯ ಮಟ್ಟದ ಪ್ರಶಸ್ತಿ ಗೆ ಆಯ್ಕೆಯಾದ ಗ್ರಾಮೀಣ ಸರ್ಕಾರಿ ಶಾಲೆ – ಮಾದರಿ ಸರ್ಕಾರಿ ಶಾಲೆಯ ಸಾಧನೆಯ ಹಿಂದೆ ಇದೆ ಶಿಕ್ಷಕ ಬಂಧುಗಳ ಪರಿಶ್ರಮ ಹೌದು
ಸರ್ಕಾರಿ ಶಾಲೆಯ ಶಿಕ್ಷಕರು ಮನಸ್ಸು ಮಾಡಿದರೆ ಏನೆಲ ರಿ ಮಾಡಬಹುದು ಎಂಬೊದಕ್ಕೆ ಈ ಒಂದು ಶಾಲೆಯೆ ಸಾಕ್ಷಿಯಾಗಿದೆ ಹೌದು ಹಟ್ಟಿ ಚಿನ್ನದ ಗಣಿಯ ಬಾಗಿಡದ ದೊಡ್ಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ‘ಹಸಿರು ಮತ್ತು ನೈರ್ಮಲ್ಯ’ ರಾಜ್ಯ ಪ್ರಶಸ್ತಿ ಲಭಿಸಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್‌ನವರು ಪ್ರಶಸ್ತಿಗೆ ಈ ಒಂದು ಶಾಲೆಯನ್ನು ಆಯ್ಕೆ ಮಾಡಿದ್ದಾರೆ. ಜು.27ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಶಾಲೆಯ ಮುಖ್ಯಶಿಕ್ಷಕರು ತಿಳಿಸಿದ್ದಾರೆ.
ಶಾಲೆಯ ಆವರಣ ಹಸಿರಿನಿಂದ ಕಂಗೊಳಿಸು ತ್ತಿದ್ದು, ಗುರುಗುಂಟಾ ಹೋಬಳಿಯಲ್ಲಿಯೇ ಇದು ಮಾದರಿ ಶಾಲೆಯಾಗಿದೆ. ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲೂ ಮಕ್ಕಳನ್ನು ತೊಡಗಿಸಲಾಗುತ್ತಿದೆ. ಮಕ್ಕಳು ಪರಿಸರದಲ್ಲಿ ಅಕ್ಷರಾಭ್ಯಾಸ ಮಾಡುತ್ತಾರೆ.
ಗುಡ್ಡಗಾಡು ಪ್ರದೇಶದ ಶಾಲೆಯನ್ನು ಗುರುತಿಸಿ ಹಸಿರು ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ ನಮ್ಮ ದೊಡ್ಡಿ ಶಾಲೆಯನ್ನು ರಾಜ್ಯಕ್ಕೆ ಪರಿಚಯಿಸಿದ ಕೀರ್ತಿ ಇಲ್ಲಿನ ಮುಖ್ಯಶಿಕ್ಷಕ ಚಂದ್ರು ಅವರಿಗೆ ಸಲ್ಲುತ್ತದೆ’ ಎನ್ನುತ್ತಾರೆ ಎಸ್‌ಡಿ ಎಂಸಿ ಅಧ್ಯಕ್ಷ ದುರುಗಪ್ಪ.
ಶಾಲೆ ಸ್ವಚ್ಛತೆ, ಪರಿಸರ, ಕ್ರೀಡೆ, ಕಲೆ, ಸಾಂಸ್ಕೃತಿಕ ಚಟುವಟಿಕೆ ಸೇರಿ 22 ಅಂಶಗಳನ್ನು ಮಾನಡಂಡ ವಾಗಿ ಪರಿಗಣಿಸಿ ಸರ್ಕಾರಿ ಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಿರುವುದು ಸಂತಸದ ವಿಷಯ ಎಂದು ಮುಖ್ಯಶಿಕ್ಷಕ ಚಂದ್ರು ಕಬ್ಬಲಿಗೇರ್ ತಿಳಿಸಿದರು.
ಗುಡ್ಡಗಾಡು ಪ್ರದೇಶದಲ್ಲಿ ಇರುವ ಸರ್ಕಾರಿ ಶಾಲೆಗೆ ರಾಜ್ಯ ಮಟ್ಟದ ಪ್ರಶಸ್ತಿ ದೊರಕಿರುವುದು ಸಂತಸದ ವಿಷಯ. ಇಂಥ ಅನೇಕ ಪ್ರಶಸ್ತಿಗಳು ಈ ಶಾಲೆಯನ್ನು ಅರಿಸಿ ಬರಲಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ಹೇಳಿದರು.
ಸುದ್ದಿ ಸಂತೆ ನ್ಯೂಸ್ ಹಟ್ಟಿ ಚಿನ್ನದ ಗಣಿ…..