ಬೆಂಗಳೂರು –
ಶಿಕ್ಷಕರ ವರ್ಗಾವಣೆ ವಿಷಯದಲ್ಲಿ ಶೇಕಡ 25 ವರ್ಗಾವಣೆ ನಿಯಮ ಅವೈಜ್ಞಾನಿಕವಾಗಿದ್ದು ಇದು ಶಿಕ್ಷಕರಿಗೆ ಕಂಟಕವಾಗಿದೆ ಹೀಗಾಗಿ ಇದನ್ನು ರದ್ದು ಪಡಿಸುವಂತೆ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ಒತ್ತಾಯವನ್ನು ಮಾಡಿದೆ.ಸುಮಾರು ತಾಲ್ಲೂಕಿನ ಶಿಕ್ಷಕರು ವರ್ಗಾವಣೆಯಿಂದ ವಂಚಿತ ರಾಗುತ್ತ ಬಂದಿದ್ದಾರೆ ಇದರ ಬಗ್ಗೆ ಸಾಕಷ್ಟು ಸಲ ಪತ್ರಿಕೆ ಹೇಳಿಕೆ ಸಚಿವರಿಗೆ ವಿಧಾನ ಪರಿಷತ್ ಸದಸ್ಯರು ಗಳಿಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿ ದರು ಈ ಕಾಯ್ದೆಯನ್ನು ರದ್ದು ಮಾಡದೆ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದಾರೆ. ವಿಧಾನ ಪರಿಷತ್ತಿನ ಸದಸ್ಯರುಗಳು ಸಚಿವರಿಗೆ ಕೇಳಿದರೆ ಶಾಲೆ ಕೀಲಿ ಹಾಕಬೇಕಾಗುತ್ತದೆ ಎಂದು ಹೇಳುತ್ತಾರೆ ಸಚಿವರು ಯಾವ ರೀತಿ ಅರ್ಥ ಮಾಡಿಕೊಂಡಿದ್ದಾರೋ ಗೊತ್ತಿಲ್ಲ ಆದರೆ ಯಾವ ಶಾಲೆಯೂ ಕೀಲಿ ಬೀಳುವು ದಿಲ್ಲ ಶೇಕಡಾ ವರ್ಗಾವಣೆ ನಿಯಮ ಮಾಡಿದೆ ಮೇಲೆ ತಾಲ್ಲೂಕಿನಿಂದ ಹತ್ತು ಅಥವಾ ಹದಿನೈದು ಶಿಕ್ಷಕರು ಮಾತ್ರ ವರ್ಗಾವಣೆ ಆಗುತ್ತಾರೆ ಶೇಕಡಾ ಮಿತಿ ಇದ್ದ ಮೇಲೆ ಈ ನಿಯಮ ಅವೈಜ್ಞಾನಿಕ ಅನ್ವಯ ಮಾಡುವುದು ಎಷ್ಟು ಸರಿ ? ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಪವಾಡೆಪ್ಪ ಪ್ರಶ್ನೆ ಮಾಡಿ ದ್ದಾರೆ.

ಪ್ರಜ್ಞಾವಂತರು ವಿಚಾರ ಮಾಡುವಂಥ ವಿಷಯ ಏಕೆಂದರೆ ಕಡಿಮೆ ಸೇವೆ ಸಲ್ಲಿಸಿದ ಶಿಕ್ಷಕರು ವರ್ಗಾ ವಣೆಯಾಗುತ್ತಾರೆ ಈ ನಿಯಮಕ್ಕೆ ಒಳಪಡುವ ತಾಲೂಕಿನ ಶಿಕ್ಷಕರು ಇಪ್ಪತ್ತು ವರ್ಷ ಮೂವತ್ತು ವರ್ಷ ಸೇವೆ ಸಲ್ಲಿಸಿದರು ವರ್ಗಾವಣೆ ಆಗಲ್ಲ ಅದಕ್ಕಾಗಿ ಶೇಕಡ 25 ವರ್ಗಾವಣೆ ನಿಯಮದ ಅಡಿಯಲ್ಲಿ ವರ್ಗಾವಣೆ ಮಾಡಿದರೆ ಅವೈಜ್ಞಾನಿಕ ಇದು ಶಿಕ್ಷಕರಿಗೆ ಅನ್ಯಾಯ ಈ ನಿಯಮವನ್ನು ರದ್ದು ಪಡಿಸಿ ವರ್ಗಾವಣೆ ಮಾಡಬೇಕು ಎಂದು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಪವಾ ಡೆಪ್ಪ ಪ್ರಧಾನ ಕಾರ್ಯದರ್ಶಿ ಭೀಮಾಶಂಕರ ಬಡಿ ಗೇರ್ ಕಾರ್ಯಾಧ್ಯಕ್ಷ ಕೆ ಬಿ ಕುರಹಟ್ಟಿ ರಾಜ್ಯ ಕೋಶಾ ಧ್ಯಕ್ಷ ರಾದ ರವಿಕುಮಾರ ಬಡಿಗೇರ ಆಗ್ರಹ ಪಡಿಸಿ ದ್ದಾರೆ