ಬೆಂಗಳೂರು –
ಸರ್ಕಾರ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿ ಸಲು ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಿದ್ದು ಎರಡು ತಿಂಗಳೊಳಗಾಗಿ ಮುಗಿಯುವ ಶಿಕ್ಷಕರ ವರ್ಗಾವಣೆ ಒಂದು ಶೈಕ್ಷಣಿಕ ವರ್ಷವನ್ನು ನುಂಗಿ ಹಾಕಿದೆ ಇದು ಮಕ್ಕಳ ಶೈಕ್ಷಣಿಕ ಚಟುವಟಿಕೆ ಮೇಲೆ ಸಾಕಷ್ಟು ಪರಿಣಾಮ ಬೀರುವುದು ಹಾಗೂ ಅಧಿಕಾ ರಿಗಳು ಸಿಬ್ಬಂದಿ ವರ್ಗ ಇದರಲ್ಲಿ ಕಾಲಹರಣ ಮಾಡುವುದರಿಂದ ಇದು ಆಡಳಿತಾತ್ಮಕವಾಗಿ ತೊಂದರೆ ಆಗುತ್ತದೆ.

ಕಾರಣ ಮಾನ್ಯ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು 9 ತಿಂಗಳ ತನಕ ನಡೆಯುವ ಈ ಶಿಕ್ಷಕರ ವರ್ಗಾವಣೆ ವೇಳಾಪಟ್ಟಿಯನ್ನು ಕಡಿತಗೊಳಿಸಿ ತಕ್ಷಣ 2 ತಿಂಗಳೊಳಗಾಗಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿಸಲು ಆದೇಶಿಸಬೇಕೆಂದು ಗ್ರಾಮೀ ಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಹಾಗೂ ಪ್ರಧಾನ ಕಾರ್ಯದರ್ಶಿ ಭೀಮಾ ಶಂಕರ ಬಡಿಗೇರ ಹಾಗೂ ಕಾರ್ಯಾಧ್ಯಕ್ಷ ಕೆ ಬಿ ಕುರಹಟ್ಟಿ ರಾಜ್ಯ ಕೋಶಾಧ್ಯಕ್ಷರಾದ ರವಿಕುಮಾರ್ ಬಡಿಗೇರ್ ಆಗ್ರಹಪಡಿಸಿದ್ದಾರೆ