ಶಿಕ್ಷಕರ ವರ್ಗಾವಣೆ ಕುರಿತು ಶಿಕ್ಷಣ ಸಚಿವರನ್ನು ಭೇಟಿಯಾದ ಗ್ರಾಮೀಣ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕ ಸಂಘದವರು.

Suddi Sante Desk

ಯಾದಗಿರಿ –

ಶಿಕ್ಷಕರ ವರ್ಗಾವಣೆ ವಿಚಾರ ಕುರಿತು ಗ್ರಾಮೀಣ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದವರು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ಭೇಟಿಯಾದರು.ಯಾದಗಿರಿ ಯಲ್ಲಿ ಭೇಟಿಯಾಗಿ ಚರ್ಚೆ ನಡೆಸಿದರು.

ಪ್ರಮುಖವಾಗಿ ಒಂದು ಬಾರಿಗೆ ವರ್ಗಾವಣೆ ಬೇಡಿಕೆ ಶಿಕ್ಷಕರು ಪಡುತ್ತಿರುವ ಕಷ್ಟ ನಷ್ಟಗಳನ್ನು ಶಿಕ್ಷಣ ಸಚಿವರಿಗೆ ಮನವರಿಕೆ ಮಾಡಿಕೊಡಲಾಯಿತು. ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸಚಿವರಿಗೆ ಭೇಟಿ ಯಾಗಲಾಯಿತು 500-600 ಕಿಲೋ ಮೀಟರ್ ದೂರದಲ್ಲಿ ಇರುವ ಶಿಕ್ಷಕರು ಪಡುತ್ತಿರುವ ಕಷ್ಟಗಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಕೇಳಲಾಯಿ ತು ಸಮಸ್ತ ಯಾದಗಿರಿ ಸುತ್ತ ಮುತ್ತಲಿನ ಗ್ರಾಮೀಣ ಸರಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರ ಸಂಘದ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು.

ಪ್ರಮುಖವಾಗಿ ಸ್ವಂತ ಜಿಲ್ಲೆಗೆ ವರ್ಗಾವಣೆ ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಕರ ನೇಮಕಾತಿ ಶೇಕಡಾ ಇಪ್ಪತ್ತು ವರ್ಗಾವಣೆ ನಿಯಮ ರದ್ದು ಗ್ರಾಮೀಣ ಭತ್ಯೆ ಇತರ ಬೇಡಿಕೆಗಳ ಪಟ್ಟಿಯನ್ನು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕದಿಂದ ಹಾಗೂ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕದಿಂದ ಕಳಿಸಲಾದ ಬೇಡಿಕೆ ಪಟ್ಟಿಯನ್ನು ಮಾನ್ಯ ಸಚಿವರಿಗೆ ನೀಡಿ ಶಿಕ್ಷಕರ ಸಮಸ್ಯೆ ಗಳನ್ನು ಸವಿಸ್ತಾರವಾಗಿ ವಿವರಿಸಿ ಸ್ಪಂದನೆ ಮಾಡುವಂತೆ ಮನವಿ ಮಾಡಿದರು

ಶಿವಕುಮಾರ್ ಕಟ್ಟಿಮನಿ ಕಲಬುರಗಿ ಜಿಲ್ಲಾ ಸಂಘಟನಾ ಚತುರರು ಬೆಂಗಳೂರು ಚಲೋ ವೇದಿಕೆ ಮುಖಂಡರು ಹಾಗೂ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ರವೀಂದ್ರ ಉಪಾಧ್ಯಕ್ಷರಾದ ಸುರೇಶ ಅಲ್ಲದೆ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ಸುಭಾಷ್ ರೆಡ್ಡಿ ಪೊಲೀಸ್ ಪಾಟೀಲ್ ಪ್ರಧಾನ ಕಾರ್ಯದರ್ಶಿಗಳಾದ ಬಂಗಾರಪ್ಪ ಯರಗೇೂಳ ಉಪಾಧ್ಯಕ್ಷರಾದ ವಸಂತ ಕುಮಾರ್ ಹಲವಾರು ನಮ್ಮ ಗ್ರಾಮೀಣ ಸಂಘದ ಪದಾಧಿಕಾರಿಗಳು ಹಾಜರಿದ್ದರು

ಇನ್ನೂ ಈ ಒಂದು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಿಕ್ಷಕ ಬಳಗಕ್ಕೆ ಗ್ರಾಮೀಣ ಪ್ರೌಢಶಾಲಾ ರಾಜ್ಯ ಘಟಕ ಹುಬ್ಬಳ್ಳಿ ಹಾಗೂ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಹುಬ್ಬಳ್ಳಿ ಇಂದ ತುಂಬು ಹೃದಯದ ಧನ್ಯವಾದಗಳನ್ನು ಹೇಳಲಾಯಿತು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.