ಬೆಂಗಳೂರು –
ಶಿಕ್ಷಕರ ವರ್ಗಾವಣೆ ಸೇರಿದಂತೆ ಶಿಕ್ಷಕರು ಎದುರಿಸು ತ್ತಿರುವ ಸಮಸ್ಯೆಗಳ ಕುರಿತಂತೆ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರನ್ನು ಭೇಟಿಯಾದರು.

ಬೆಂಗಳೂರಿ ನಲ್ಲಿ ಸಂಘದ ಮತ್ತು ಗ್ರಾಮೀಣ ಶಿಕ್ಷಕರ ಧ್ವನಿಯಾ ಗಿ ಸಂಗಮೇಶ ಖನ್ನಿನಾಯ್ಕರ ನೇತ್ರತ್ವದಲ್ಲಿ ಶಿಕ್ಷಣ ಸಚಿವರನ್ನು ಭೇಟಿಯಾದರು.

ಮೊದಲು ಸಂಘದ ಪರವಾಗಿ ನೂತನ ಶಿಕ್ಷಣ ಸಚಿವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.ನಂತರ ಒಂದು ಗಂಟೆಗಳ ಕಾಲ ಕುಳಿತುಕೊಂಡು ಸಧ್ಯ ನಾಡಿನ ಶಿಕ್ಷಕರು ಎದುರಿಸುತ್ತಿರುವ ಶಿಕ್ಷಕರ ವರ್ಗಾವಣೆ ಸೇರಿದಂತೆ ಹಲವಾರು ವಿಷಯಗಳ ಕುರಿತಂತೆ ಚರ್ಚೆಯನ್ನು ಮಾಡಿ ಮಾತುಕತೆ ನಡೆಸಿದರು.

ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಇಲ್ಲಿಯವ ರೆಗೂ ಯಾರು ಯಾವ ಸರ್ಕಾರಗಳು ಸರಿಯಾಗಿ ಸಮರ್ಪಕವಾಗಿ ಮಾಡಿಲ್ಲ.ನಿಮ್ಮಿಂದಾದಲೂ ಸರಿಯಾಗಿ ಆಗಲಿ ವರ್ಗಾವಣೆಗೆ ಅರ್ಜಿ ಹಾಕಿದರು ಬರುತ್ತಿಲ್ಲ ಕೇವಲ ಎ ವಲಯದಲ್ಲಿ ಇದ್ದವನರನ್ನು ಮಾತ್ರ ಗಮನಕ್ಕೆ ತಗೆದುಕೊಳ್ಳಲಾಗುತ್ತಿಲ್ಲ ಇದರೊಂ ದಿಗೆ ಸಿ ಮತ್ತು ಆರ್ ರೂಲ್ ಬೇಗೆ ಜಾರಿಗೆ ಬರಲಿ, ಏಳನೇಯ ವೇತನ ಆಯೋಗ ಜಾರಿಗೆ ಬರಲಿ ಎನ್ ಪಿಎಸ್ ತಗೆದು ಓಪಿಎಸ್ ಜಾರಿಗೆ ಬರಲಿ ಜೊತೆಯ ಲ್ಲಿ ಹಳ್ಳಿಯಲ್ಲಿ ಇರುವ ಶಿಕ್ಷಕರಿಗೆ ಈ ಕೂಡಲೇ ವಿಶೇಷವಾದ ಭತ್ಯೆಯನ್ನು ಕೊಡಿಸುವಂತೆ ಒತ್ತಾಯವನ್ನು ಮಾಡಿದರು.

ಗ್ರಾಮೀಣ ಶಿಕ್ಷಕರ ಸಂಘದವರ ಮನವಿಗೆ ಬೇಡಿಕೆಗಳಿಗೆ ಶಿಕ್ಷಣ ಸಚಿವರ ಸಕಾರಾತ್ಮಕವಾಗಿ ಸ್ಪಂದಿಸಿ ಈಡೇರಿಸುವ ಭರವಸೆಯನ್ನು ನೀಡಿದರು. ಸಂಗಮೇಶ ಖನ್ನಿನಾಯ್ಕರ್ ಜೊತೆಗೆ ಸಂಘದ ಸದಸ್ಯರು ಶಿಕ್ಷಕರಾದ ಬಸವರಾಜ ಹೂಗಾರ, ಬಾಲೇಶ ನಾಯ್ಕ,ಅಣ್ಣಾಸಾಹೇಬ್ ಅಡಳ್ಳಿ, ಸೇರಿದಂತೆ ಹಲವರು ಈ ಒಂದು ಸಮಯದಲ್ಲಿ ಉಪಸ್ಥಿತರಿದ್ದರು.