ಬೆಂಗಳೂರು –
ಕರೋನ ಸಂಕಷ್ಟದ ಪರಸ್ಥಿತಿಯ ನಡುವೆಯೂ ಕರ್ನಾಟಕ ಮುಖ್ಯಮಂತ್ರಿ ಮತ್ತು ಸಚಿವರ,ಶಾಸಕರ ವೇತನವನ್ನು ಶೇ.50 ಹೆಚ್ಚಳ ಮಾಡಲಾಗಿದೆ ಹೌದು ಶಾಸಕರು, ಸಭಾಧ್ಯ ಕ್ಷರು,ವಿಪಕ್ಷ ನಾಯಕ ಹಾಗೂ ಸಚೇತಕರಿಗೂ ಭತ್ಯೆ ಹೆಚ್ಚಿಸ ಲಾಗಿದೆ.

ಹೌದು ಮುಖ್ಯಮಂತ್ರಿಗಳ ತಿಂಗಳ ವೇತನ 50 ಸಾವಿರ ರೂಪಾಯಿ ಇತ್ತು.ಇದೀಗ 25 ಸಾವಿರ ಹೆಚ್ಚಾಗಿದ್ದು ಇನ್ಮುಂದೆ ತಿಂಗಳಿಗೆ 75 ಸಾವಿರ ರೂಪಾಯಿ ಸಿಗಲಿದೆ. ಸಂಪುಟ ದರ್ಜೆ ಮಂತ್ರಿಗಳಿಗೆ ತಿಂಗಳಿಗೆ 40 ಸಾವಿರ ರೂ. ಇದ್ದ ಸಂಬಳ,60 ಸಾವಿರ ರೂ.ಗೆ ಏರಿಕೆ ಆಗಿದೆ.ವರ್ಷಕ್ಕೆ 3 ಲಕ್ಷವಿದ್ದ ಆತಿಥ್ಯ ಭತ್ಯೆಯನ್ನು ನಾಲ್ಕೂವರೆ ಲಕ್ಷಕ್ಕೆ ಹೆಚ್ಚಿಸ ಲಾಗಿದೆ.ಮಂತ್ರಿಗಳ ಮನೆ ಬಾಡಿಗೆ 80 ಸಾವಿರದಿಂದ 1.20 ಲಕ್ಷ ರೂ.ಗೆ ಏರಿಸಲಾಗಿದೆ.20 ಸಾವಿರ ಇದ್ದ ಮನೆ ನಿರ್ವಹಣೆ ವೆಚ್ಚ 30 ಸಾವಿರ ರೂ.ಗೆ ಏರಿಕೆ ಮಾಡಿ ತಿಂಗಳಿಗೆ 1 ಸಾವಿರ ಲೀಟರ್ ಇದ್ದ ಪೆಟ್ರೋಲ್ ಸೌಲಭ್ಯ, ಈಗ 2 ಸಾವಿರ ಲೀ. ಪೆಟ್ರೋಲ್ ಸಿಗಲಿದೆ.



ಶಾಸಕರು,ಸಭಾಧ್ಯಕ್ಷರು, ವಿಪಕ್ಷ ನಾಯಕ,ಸಚೇತಕರಿಗೂ ಭತ್ಯೆ ಹೆಚ್ಚಳವನ್ನು ಮಾಡಲಾಗಿದೆ.
ಸಭಾಧ್ಯಕ್ಷರು/ಉಪಸಭಾಧ್ಯಕ್ಷ
ಸಂಬಳ: ತಿಂಗಳಿಗೆ 50 ಸಾವಿರ ರೂ.ನಿಂದ 75 ಸಾವಿರಕ್ಕೆ ಏರಿಕೆ
ಆತಿಥ್ಯ ವೇತನ ವಾರ್ಷಿಕ: 3 ಲಕ್ಷದಿಂದ 4 ಲಕ್ಷ ರೂ.ಗೆ ಏರಿಕೆ
ಮನೆ ಬಾಡಿಗೆ: 80 ಸಾವಿರದಿಂದ 1.60 ಲಕ್ಷ ರೂ.ಗೆ ಹೆಚ್ಚಳ
ಇಂಧನ ಭತ್ಯೆ: 1000 ಲೀಟರ್ ಪೆಟ್ರೋಲ್ನಿಂದ 2000 ಲೀ.ಗೆ ಏರಿಕೆ
ಪ್ರಯಾಣ ಭತ್ಯೆ: ಪ್ರತಿ ಕಿಲೋ ಮೀಟರ್ 30 ರೂ.ನಿಂದ 40 ರೂ.ಗೆ ಏರಿಕೆ
ದಿನ ಭತ್ಯೆ(ಪ್ರಯಾಣ): ದಿನಕ್ಕೆ 2 ಸಾವಿರದಿಂದ 3 ಸಾವಿರ ರೂ.ಗೆ ಏರಿಕೆ
ಹೊರ ರಾಜ್ಯ ಪ್ರವಾಸ: ದಿನಕ್ಕೆ 2500+5000 ರೂಪಾಯಿಂದ 3000+7000 ರೂಪಾಯಿಗೆ ಏರಿಕೆ


ವಿಪಕ್ಷ ನಾಯಕ
ಸಂಬಳ: 40 ಸಾವಿರ ರೂಪಾಯಿಂದ 60 ಸಾವಿರಕ್ಕೆ ಏರಿಕೆ
ಆತಿಥ್ಯ ವೇತನ ವಾರ್ಷಿಕ: 2 ಲಕ್ಷದಿಂದ 2.50 ಲಕ್ಷ ರೂ.ಗೆ ಏರಿಕೆ
ಇಂಧನ ಭತ್ಯೆ: 1000 ಲೀ. ಇದ್ದ ಪೆಟ್ರೋಲ್ ಸೌಲಭ್ಯ, 2000 ಲೀ.ಗೆ ಏರಿಕೆ
ದಿನ ಭತ್ಯೆ(ಪ್ರಯಾಣ): ದಿನಕ್ಕೆ 2000 ರೂಪಾಯಿಯಿಂದ 3000 ರೂ.ಗೆ ಏರಿಕೆ
ಹೊರ ರಾಜ್ಯ ಪ್ರವಾಸ: 5000 ರೂ.ನಿಂದ 7000 ರೂ.ಗೆ ಏರಿಕೆ.
ಶಾಸಕರ ಭತ್ಯೆ
ಸಂಬಳ: ತಿಂಗಳಿಗೆ 20 ಸಾವಿರದಿಂದ 40 ಸಾವಿರ ರೂಪಾಯಿಗೆ ಏರಿಕೆ
ಕ್ಷೇತ್ರದ ಭತ್ಯೆ: 40 ಸಾವಿರದಿಂದ 60 ಸಾವಿರ ರೂ.ಗೆ ಹೆಚ್ಚಳ
ಆತಿಥ್ಯ ವೇತನ (ವಾರ್ಷಿಕ): 2 ಲಕ್ಷದಿಂದ 2.50 ಲಕ್ಷ ರೂ. ಹೆಚ್ಚಳ
ಇಂಧನ ಭತ್ಯೆ: 1 ಸಾವಿರ ಲೀ. ಇದ್ದ ಪೆಟ್ರೋಲ್ ಸೌಲಭ್ಯ 2 ಸಾವಿರ ಲೀ.ಗೆ ಏರಿಕೆ
ಪ್ರಯಾಣ ಭತ್ತೆ: ಪ್ರತಿ ಕಿಲೋ ಮೀಟರ್ 25 ರಿಂದ 30 ರೂಪಾಯಿ
ದಿನ ಭತ್ಯೆ(ಪ್ರಯಾಣ): ದಿನಕ್ಕೆ 2 ಸಾವಿರದಿಂದ ಎರಡೂವರೆ ಸಾವಿರ ರೂಪಾಯಿಗೆ ಏರಿಕೆ
ಹೊರ ರಾಜ್ಯ ಪ್ರವಾಸ: 5 ಸಾವಿರದಿಂದ 7 ಸಾವಿರ ರೂ.ಗೆ ಏರಿಕೆ
ದೂರವಾಣಿ ವೆಚ್ಚ ಯತಾಸ್ಥಿತಿ ತಿಂಗಳಿಗೆ 20,000 ಕಾಯ್ದಿರಿಸಲಾಗಿದೆ. ಆಪ್ತಸಹಾಯಕನಿಗೆ ಮತ್ತು ರೂಮ್ ಬಾಯ್ ಸೇರಿ ತಿಂಗಳಿಗೆ 10 ಸಾವಿರ ರೂ.ನಿಂದ 20 ಸಾವಿರ ರೂ.ಗೆ ಹೆಚ್ಚಿಸಲಾಗಿದೆ.