ಬೆಂಗಳೂರು –
ಈಗಾಗಲೇ ಬಿಟ್ಟು ಬಿಡಲಾರದೇ ಕಾಡುತ್ತಿರುವ ಮಹಾಮಾರಿ ಕರೋನಾ ರಾಜ್ಯದಲ್ಲಿ ಅದೇಷ್ಟೋ ಶಿಕ್ಷಕರನ್ನು ಬಲಿ ತಗೆದುಕೊಂಡಿದ್ದು ಇನ್ನೂ ಕೂಡಾ ತಗೆದಕೊಳ್ಳುತ್ತಿದ್ದು ಇದರಿಂದ ನಾಡಿನ ಶಿಕ್ಷಕರು ಕಂಗಾಲಾಗಿದ್ದಾರೆ.ಈಗಾಗಲೇ ಇದರಿಂದ ಸಾಕಷ್ಟು ಭಯಗೊಂಡಿರುವ ಶಿಕ್ಷಕರಿಗೆ ರಾಜ್ಯ ಸರ್ಕಾರ ಶಿಕ್ಷಣ ಸಚಿವರು ಮತ್ತೊಂದು ದೊಡ್ಡ ಶಾಕ್ ನೀಡಿದ್ದಾರೆ.

ಹೌದು ಹತ್ತು ಹಲವಾರು ಸಮಸ್ಯೆಯಿಂದ ದಾರಿ ಕಾಣದಾಗಿರುವ ನಮ್ಮ ಶಿಕ್ಷಕರಿಗೆ ಈಗ ಮತ್ತೊಂದು ತಲೆನೋವು ಶುರುವಾಗಿದೆ.ರಾಜ್ಯದಲ್ಲಿನ ಅನುದಾನ ರಹಿತ ಶಾಲಾ- ಕಾಲೇಜು ಬೋಧಕ ಮತ್ತು ಬೋಧ ಕೇತರ ಸಿಬ್ಬಂದಿಗೆ ವಿಶೇಷ ಪ್ಯಾಕೇಜ್ ಘೋಷಿಸಲು ರಾಜ್ಯ ಸರ್ಕಾರ ಮುಂದಾಗಿದೆ ಅದು ಸರ್ಕಾರಿ ಶಾಲೆ ಕಾಲೇಜಿನ ಶಿಕ್ಷಕರು ಉಪನ್ಯಾಸಕರ ವೇತನದ ಹಣದಿಂದ.ಹೌದು ಈ ಒಂದು ನಿಟ್ಟಿನಲ್ಲಿ ಈಗಾಗಲೇ ಈ ಕುರಿತಂತೆ ಸಭೆಗಳನ್ನು ಮಾಡಿ ಚಿಂತಿಸಿದ್ದು ಇವರಿ ಗೆ ಪ್ಯಾಕೇಜ್ ನೀಡುವ ವಿಚಾರದಲ್ಲಿ ಈಗ ಸರ್ಕಾರ ಶಿಕ್ಷಣ ಇಲಾಖೆ ಖಾತೆಗಳಿಂದ ಹಣವನ್ನು ನೀಡದೆ ರಾಜ್ಯದ ಸರ್ಕಾರಿ ಶಿಕ್ಷಕರ ವೇತನದಲ್ಲಿಯೇ ಹಣವ ನ್ನು ತಗೆದುಕೊಂಡು ನೀಡುತ್ತಿದೆ.ಈಗಾಗಲೇ ಈ ಕುರಿತಂತೆ ಸರ್ಕಾರ ಶಿಕ್ಷಣ ಸಚಿವರು ಈ ನಿಟ್ಟಿನಲ್ಲಿ ಅಂತಿಮವನ್ನು ಮಾಡಿದ್ದು ಸರ್ಕಾರಿ ಮತ್ತು ಅನುದಾ ನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಮತ್ತು ಪಿಯು ಉಪ ನ್ಯಾಸಕರ ಕೆಲವು ದಿನಗಳ ವೇತನ ಕಡಿತಗೊಳಿಸಿ ಆ ಹಣದಿಂದ ಪ್ಯಾಕೇಜ್ ನೀಡುವ ಬಗ್ಗೆ ಸಚಿವ ಎಸ್. ಸುರೇಶ್ ಕುಮಾರ್ ಇಂಗಿತ ವ್ಯಕ್ತಪಡಿಸಿದ್ದಾರೆ.

ಇನ್ನೂ ಈ ಕುರಿತಂತೆ ಸರ್ಕಾರಿ ಶಿಕ್ಷಕರು ಅಸಮಧಾ ನಗೊಂಡಿದ್ದಾರೆ ಈ ಒಂದು ನಿರ್ಧಾರವನ್ನು ವಿರೋ ಧಿಸಿದ್ದಾರೆ.ಇನ್ನೂ ಇವೆಲ್ಲದರ ನಡುವೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಖಾಸಗಿ ಶಾಲೆಗಳ ಒಕ್ಕೂಟ ದ ಮುಖಂಡ ಶಶಿಕುಮಾರ್ ಸರ್ಕಾರಿ ಶಾಲೆಗಳ ಶಿಕ್ಷಕರ ಸಂಘಟನೆ ಗಳ ಕುರಿತಂತೆ ತುಂಬಾ ತುಂಬಾ ಹಗುರವಾಗಿ ಮಾತನಾಡಿದ್ದರು. ಕೀಳವಾಗಿ ಮಾತ ನಾಡಲು ಸರ್ಕಾರಿ ಶಿಕ್ಷಕರು ಸಂಘಟನೆಗಳು ಬೇಕು ಆದರೆ ಆ ಶಿಕ್ಷಕರ ವೇತನಕ್ಕಾಗಿ ಈ ಸರ್ಕಾರಿ ಶಿಕ್ಷಕರು ಬೇಕಾ ಇದೆಂಥಾ ನ್ಯಾಯ ಸ್ವಾಮಿ ಶಶಿಕುಮಾರ್ ಅವರೇ ಶಿಕ್ಷಣ ಸಚಿವರೇ ಇದು ಸರಿನಾ ನಿವೇ ಹೇಳಿ.ಇನ್ನೂ ಇಷ್ಟೇಲ್ಲ ಬೆಳವಣಿಗೆ ಆಗುತ್ತಿದ್ದರು ಕೂಡಾ ನಮ್ಮ ರಾಜ್ಯದಲ್ಲಿನ ಶಿಕ್ಷಕರ ಸಂಘಟನೆಗಳ ಮಹಾನ್ ನಾಯಕರು ಏನು ಮಾಡತಾ ಇದ್ದಾರೆ ಎಲ್ಲಿದ್ದಾರೆ ಎಂಬ ಪ್ರಶ್ನೆಯನ್ನು ನಾಡಿನ ಶಿಕ್ಷಕರು ಕೇಳುತ್ದಿದ್ದಾರೆ.

ಇನ್ನೂ ಈಗಾಗಲೇ ಈ ಸಂಬಂಧ ಪತ್ರ ಬರೆದಿರುವ ಅವರು ಶಿಕ್ಷಣ ಇಲಾಖೆ ವತಿಯಿಂದ ನಡೆಸಲಾಗುವ ವಿವಿಧ ಪರೀಕ್ಷಾ ಪ್ರಕ್ರಿಯೆಗಳಲ್ಲಿನ ಸಂಗ್ರಹವಾಗಿ ರುವ ಪರೀಕ್ಷಾ ಶುಲ್ಕದ ಸಂಚಿತ ನಿಧಿಯಸಂಪೂರ್ಣ ವಿವರ,ಸರ್ಕಾರಿ ಹಾಗೂ ಅನುದಾನಿತ ಶಾಲಾ ಶಿಕ್ಷಕ ರು ಮತ್ತು ಪಿಯು ಉಪನ್ಯಾಸಕರಿಂದ ಸಂಗ್ರಹವಾ ಗುವ ವೇತನ ವಂತಿಗೆಯನ್ನು ಖಾಸಗಿ ಶಾಲಾ – ಕಾಲೇಜುಗಳ ಬೋಧಕ,ಬೋಧಕೇತರ ಸಿಬ್ಬಂದಿಗೆ ನೀಡಲಾಗುವುದು ಎಂದಿದ್ದಾರಂತೆ.ಈ ಸಂಬಂಧ ಅರ್ಹ ಫಲಾನುಭವಿಗಳ ಮಾಹಿತಿಯನ್ನು ಕೂಡಲೇ ಸಲ್ಲಿಸುವಂತೆ ಸಚಿವರು ಇಲಾಖೆಯ ಆಯುಕ್ತರು, ಡಿಡಿಪಿಯು, ಡಿಡಿಪಿಐ ಅವರಿಗೆ ಸೂಚನೆ ನೀಡಿದ್ದು ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡ ಬೇಕು.
