ಕಲಘಟಗಿ –
ಜಮೀನು ವಿವಾದದ ಹಿನ್ನಲೆಯಲ್ಲಿ ಪ್ರೌಢ ಶಾಲೆಯೊಂದನ್ನು ಬಂದ್ ಮಾಡಲಾಗಿದೆ. ಹೌದು ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿನ ಸಂಗಮೇಶ್ವರ ಪ್ರೌಢ ಶಾಲೆಯನ್ನು ಇಬ್ಬರ ನಡುವಿನ ಜಾಗೆಯ ವಿವಾದದ ಹಿನ್ನಲೆಯಲ್ಲಿ ಬಂದ್ ಮಾಡಲಾಗಿದೆ.
ಸಧ್ಯ ಶಾಲೆಗೆ ಬಾಗಿಲು ಹಾಕಿದ್ದರಿಂದ ಬೇಸತ್ತು ಆಕ್ರೋಶಗೊಂಡ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಮೂಲ ಮಾಲೀಕರು ಸಂಸ್ಥೆಗೆ ಜಾಗೆಯನ್ನು ದಾನದ ರೂಪದಲ್ಲಿ ಈ ಹಿಂದೆ ಜಾಗೆಯನ್ನು ನೀಡಿದ್ದಾರೆ.
ಸಧ್ಯ ಕಳೆದ ಹಲವಾರು ವರುಷಗಳಿಂದ ಶಾಲೆ ನಡೆಯುತ್ತಿದ್ದು ಈಗ ಏಕಾಎಕಿಯಾಗಿ ದಿಢೀರನೇ ಈಗ ಪಾಟೀಲ ಎಂಬುವರು ಶಾಲೆಗೆ ಬಂದು ಈ ಒಂದು ಜಾಗೆ ನಮಗೆ ಸೇರಿದ್ದು ಇದನ್ನು ಬಂದ್ ಮಾಡುತ್ತೇವೆ ಎನ್ನುತ್ತಲೇ ಬಂದ್ ಮಾಡಿದ್ದಾರೆ.
ಶಾಲೆಗೆ ಬಾಗಿಲು ಹಾಕುತ್ತಿದ್ದಂತೆ ಆಕ್ರೋಶಗೊಂಡ ಮಕ್ಕಳು ಅಸಮಧಾನಗೊಂಡು ಶಾಲೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ.
ಯಾವುದೇ ಕಾರಣಕ್ಕೂ ಶಾಲೆಯನ್ನು ಆರಂಭ ಮಾಡುವವರೆ ನಾವು ಸ್ಥಳದಿಂದ ಹೊಗೊದಿಲ್ಲ ಎಂದು ಪಟ್ಟು ಹಿಡಿದು ಹೊರಾಟಕ್ಕೆ ಕುಳಿತು ಕೊಂಡಿದ್ದಾರೆ.
ಇನ್ನೂ ವಿಷಯ ತಿಳಿದ ಕಲಘಟಗಿ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡುತ್ತಿದ್ದಾರೆ.