ಧಾರವಾಡ –
ಬಿಗ್ ಮಿಶ್ರಾ ಗೆ ಡಿಜಿಟಲ್ ಟಚ್ ನೀಡಿದ ಸಂಜಯ ಮಿಶ್ರಾ – ರಾಜ್ಯದಲ್ಲಿಯೇ ಮೊದಲ ಬಾರಿಗೆ ಯರಿಕೊಪ್ಪ ಬಿಗ್ ಮಿಶ್ರಾದಲ್ಲಿ Smart Card ಪರಿಚಯಿಸಿ ಸಾರ್ವಜನಿಕರಿಗೆ ಕಿರಿಕಿರಿ ತಪ್ಪಿಸಿದ ಸಂಜಯ ಮಿಶ್ರಾ…..
ಧಾರವಾಡ ಪೇಢಾ ಮೂಲಕ ಹೆಸರಾಗಿರುವ ಬಿಗ್ ಮಿಶ್ರಾ ಸಧ್ಯ ಭಾರತೀಯ ಸಿಹಿತಿಂಡಿ ತಿನಿಸುಗಳಲ್ಲಿ ದೊಡ್ಡದೊಂದು ಮೈಲಿಗಲ್ಲನ್ನು ನಿರ್ಮಿಸಿದೆ.ಸಂಜಯ ಮಿಶ್ರಾ ಅವರ ಮಾಲೀಕತ್ವದ ಈ ಒಂದು ಸಂಸ್ಥೆ ರಾಜ್ಯ ವಲ್ಲದೇ ದೇಶದ ಮೂಲೆ ಮೂಲೆಗಳಲ್ಲಿ ತನ್ನ ಹೆಜ್ಜೆ ಗುರುತನ್ನು ನಿರ್ಮಿಸುತ್ತಿದೆ.ಈ ಒಂದು ನಿಟ್ಟಿನಲ್ಲಿ ಸಧ್ಯ ದೇಶದ ನಾಲ್ಕೈದು ರಾಜ್ಯಗಳಲ್ಲಿ ತನ್ನದೇಯಾದ ಮಳಿಗೆಗಳನ್ನು ತೆರೆದಿದೆ.
ಈವರೆಗೆ ಸಿಹಿ ತಿಂಡಿ ತಿನಿಸು ಗಳಿಗೆ ಅಷ್ಟೇ ಸಿಮೀತ ವಾಗಿದ್ದ ಬಿಗ್ ಮಿಶ್ರಾ ಸಧ್ಯ ಹೊಟೇಲ್ ಉಧ್ಯಮಕ್ಕೂ ತನ್ನದೇಯಾದ ಜಾಲವನ್ನು ವಿಸ್ತರಿಸುತ್ತಿದ್ದು ಧಾರವಾಡ ದ ಹೊರವಲಯದ ಯರಿಕೊಪ್ಪದಲ್ಲಿ ವಿಶಾಲವಾದ ಮಳೆಗೆಗೆ ಕಾಲಿಟ್ಟರೆ ಸಾಕು ಒಂದೇ ಸೂರಿನಡಿಯಲ್ಲಿ ತಿಂಡಿ ತಿನಿಸುಗಳ ಸ್ವರ್ಗವನ್ನೇ ಸಂಜಯ ಮಿಶ್ರಾ ಅವರು ಸಾರ್ವಜನಿಕರಿಗೆ ಒದಗಿಸಿದ್ದಾರೆ.ಒಂದು ಕಡೆ ತಮ್ಮದೆ ಯಾದ ಸಿಹಿ ತಿನಿಸುಗಳ ಮಳೆಗೆ ಇನ್ನೊಂದು ಕಡೆಗೆ ರಾಜಸ್ಥಾನ ಥಾಲಿ,ಜವಾರಿ ರೊಟ್ಟಿ ಥಾಲಿ,ಮತ್ತೊಂದೆಡೆ ಜೂಸ್,ಸ್ನ್ಯಾಕ್ಸ್, ಐಸ್ ಕ್ರೀಮ್ ಹೀಗೆ ಎಲ್ಲವೂಗಳು ಒಂದೆ ಕಡೆಯಲ್ಲಿ ಸಿಗುವಂತೆ ವ್ಯವಸ್ಥೆಯನ್ನು ಸಂಜಯ ಮಿಶ್ರಾ ಅವರು ಮಾಡಿದ್ದಾರೆ.
ಇಲ್ಲಿಗೆ ಒಮ್ಮೆ ಕಾಲಿಟ್ಟರೆ ಸಾಕು ದೇಶದ ಮೂಲೆಗಳಲ್ಲಿ ಸಿಗುವ ತಿಂಡಿ ತಿನಿಸುಗಳ ಸವಿರುಚಿಯನ್ನು ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದಲ್ಲಿ ಸಿಗುವಂತೆ ಮಾಡಿ ದ್ದಾರೆ.ಆರಂಭಗೊಂಡು ಈವರೆಗೆ ಇಲ್ಲಿಗೆ ಪ್ರತಿನಿತ್ಯ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರು ಇಲ್ಲಿಗೆ ಬಂದು ಸವಿರುಚಿಯನ್ನು ಸವಿಯುತ್ತಿದ್ದು ಇವೆಲ್ಲದರ ನಡುವೆ ಸಧ್ಯ ಇಲ್ಲಿ ಡಿಜಿಟಲ್ ಟಚ್ ನ್ನು ನೀಡಲಾಗಿದೆ.ಹೌದು ಮೊದಲು ಏನೇ ಬೇಕಾದರೂ ಹಣ ಪಾವತಿ ಮಾಡ ಬೇಕಾಗಿತ್ತು ಪ್ರತಿಯೊಂದಕ್ಕೂ ಹಣ ಪಾವತಿ ಮಾಡಿ ಕೊಪನ್ ತಗೆದುಕೊಂಡು ತಿನ್ನುವ ವ್ಯವಸ್ಥೆ ಇತ್ತು
ಸಧ್ಯ ಸಾರ್ವಜನಿಕರಿಗೆ ಆಗುತ್ತಿರುವ ಕಿರಿಕಿರಿಯನ್ನು ಅರಿತುಕೊಂಡಿರುವ ಸಂಜಯ ಮಿಶ್ರಾ ಅವರು ಬದಲಾ ವಣೆ ಮಾಡಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಪರಿಚ. ಯಿಸಿದ್ದಾರೆ.ಹೌದು ಒಳಗೆ ಬರುತ್ತಿದ್ದಂತೆ ನಿಮ್ಮ ಪೊನ್ ನಂಬರ್ ನೊಂದಾಯಿಸಿ ಸ್ಮಾರ್ಟ್ ಕಾರ್ಡ್ ತಗೆದು ಕೊಂಡರೆ ಸಾಕು ಮಳಿಗೆಯ ತುಂಬೆಲ್ಲಾ ನಿಮಗೆ ಏನು ಬೇಕು ಅದನ್ನು ತಗೆದುಕೊಂಡು ಕಾರ್ಡ್ ನಲ್ಲಿ ತಿನ್ನಬ ಹುದು
ಪದೇ ಪದೇ ಹಣ ಕೊಡುವ ಕಿರಿಕಿರಿ ಒಂದು ಕಡೆಯಾ ದರೆ ಇನ್ನೂ ಚಿಲ್ಲರೆ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳಿಗೆ ಗುಡ್ ಬೈ ಹೇಳಿರುವ ಬಿಗ್ ಮಿಶ್ರಾ ಸಂಸ್ಥೆಯವರಿಗೆ ಹೊಸದೊಂದು ಪ್ಲಾನ್ ಪರಿಚಯಿಸಿದ್ದು ರಾಜ್ಯದಲ್ಲಿಯೇ ಮೊದಲ ಬಾರಿಗೆ ಇದನ್ನು ಇಲ್ಲಿ ಪರಿಚಯಿಸುವ ಮೂಲಕ ಸಂಜಯ ಮಿಶ್ರಾ ಅವರು ಸಾರ್ವಜನಿಕರ ಸ್ನೇಹಿಯಾಗಿ ತಮ್ಮ ಬಿಗ್ ಮಿಶ್ರಾ ಸಂಸ್ಥೆಯನ್ನು ಮಾಡಿದ್ದಾರೆ ಇದಕ್ಕೆ ಸಾರ್ವಜನಿಕರಿಂ ದಲೂ ಕೂಡಾ ಉತ್ತಮವಾದ ಸ್ಪಂದನೆ ಸಿಕ್ಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..