ಸಂತೋಷ ಆತ್ಮಹತ್ಯೆ ಪ್ರಕರಣ – ಹೊಸ ಸಿಕ್ರೇಟ್ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ

Suddi Sante Desk

ವಿಜಯಪುರ –

ಮುಖ್ಯಮಂತ್ರಿ ಯಡಿಯೂರಪ್ಪ ಆಪ್ತ ಕಾರ್ಯದರ್ಶಿ ಸಂತೋಷ ಆತ್ಮಹತ್ಯೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಹೊಸ ಬಾಂಬ್ ಸಿಡಿಸಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಅವರು ಆತ್ಮಹತ್ಯೆ ಯಾಕೇ ಮಾಡಿಕೊಂಡಿದ್ದಾರೆ ಎಲ್ಲವೂ ಗೊತ್ತಿದೆ ಸಮಯ ಬರಲಿ ಎನ್ನುತ್ತಾ ಹೊಸ ಬಾಂಬ್ ಸಿಡಿಸಿದ್ದಾರೆ. ಆತ್ಮಹತ್ಯೆಗೆ ಯತ್ನ ವಿಚಾರದ ಹಿಂದೆ ಬೇರೆ ಇದೆ ಎನ್ನುತ್ತಾ ಹೊಸ ಸಿಕ್ರೇಟ್ ಬಾಂಬ್ ಸಿಡಿಸಿದ್ದಾರೆ ಬಿಜೆಪಿ ಶಾಸಕ ಯತ್ನಾಳ್. ಇದು ದೊಡ್ಡ ಕಥೆ ಇದೆ ಎಂದ ಯತ್ನಾಳ್.ಎಲ್ಲ ಘಟನಾವಳಿಗಳು ನನಗೆ ಗೊತ್ತಿದೆ.ಕಾಲ ಬಂದಾಗ ಎಲ್ಲವನ್ನು ನಾನು ಹೇಳ್ತೇನೆ ಇದು ಬಹಳ ದೊಡ್ಡ ಕಥೆ ಇದೆ. ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡಲಿ. ವಿಸ್ತರಣೆ ಮಾಡಿದ ಕೂಡಲೇ ಆಮೇಲೆ ಎಲ್ಲವನ್ನು ಬಹಿರಂಗ ಪಡೆಸುತ್ತಾ ಎಲ್ಲಾ ವಿಚಾರ ಹೇಳುವೆ ಎಂದು ಯತ್ನಾಳ್ ಸಿಕ್ರೇಟ್ ಬಾಂಬ್ ನ ಮಾತುಗಳನ್ನು ಮುಗಿಸಿದ್ರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.