ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಪ್ರತಿಶತ 17 ರಷ್ಟು ವೇತನ ಹೆಚ್ಚಳ ಮಧ್ಯೆ ಈಗ ರಾಜ್ಯದ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ರಾಜ್ಯ ಸರ್ಕಾರದ ಮುಂದೆ ಹೊಸದೊಂದು ಬೇಡಿಕೆ ಯನ್ನು ಇಟ್ಟಿದ್ದಾರೆ.
ಹೌದು ರಾಜ್ಯ ಸರ್ಕಾರಿ ನೌಕರರ ಸರದಿ ವೇತನ ಹೆಚ್ಚಳವಾಗ್ತಿದ್ದಂತೆ ಮತ್ತೊಂದು ಬೇಡಿಕೆಗೆ ಸರ್ಕಾರಿ ನೌಕರರ ಆಗ್ರಹವನ್ನು ಮಾಡಿ ರಾಜ್ಯ ಸರ್ಕಾರದ ಮುಂದೆ ಇಟ್ಟಿದೆ ಪ್ರತಿ ಶನಿವಾರ ರಜೆ ನೀಡುವಂತೆ ಸರ್ಕಾರಿ ನೌಕರರ ಮನವಿ ಮಾಡಿ ದ್ದಾರೆ.
ರಾಜ್ಯ ಸರ್ಕಾರ ನೌಕರರ ಸಂಘದಿಂದ 7ನೇ ವೇತನ ಆಯೋಗ ಸಮಿತಿಗೆ ಬೇಡಿಕೆ ಸಲ್ಲಿಸ ಲಾಗಿದೆ .ಈಗಾಗಲೇ 2ನೇ ಮತ್ತು 4ನೇ ಶನಿವಾರ ರಾಜ್ಯ ಸರಕಾರಿ ಕಚೇರಿಗಳಿಗೆ ರಜೆ ಇದ್ದು ತಿಂಗಳ ಮೊದಲ ಮತ್ತು ಮೂರನೇ ಶನಿವಾರವೂ ಸಾರ್ವತ್ರಿಕ ರಜೆ ಘೋಷಣೆಗೆ ಮಾಡುವಂತೆ ಮನವಿ ಮಾಡಿದೆ.
ಕಚೇರಿ ವೇಳೆಯನ್ನು ಬೆಳಗ್ಗೆ 10 ಗಂಟೆ ಬದಲಿಗೆ 9.30 ಕ್ಕೆ ಹಾಗೂ ಕಚೇರಿ ಮುಗಿಯುವ ವೇಳೆ ಯನ್ನು ಸಂಜೆ 5.30ಕ್ಕೆ ಬದಲಾಗಿ 6 ಗಂಟೆ ವರೆಗೆ ನಡೆಸಬೇಕು ಎಂದು ತಿಳಿಸಿ ಒತ್ತಾಯ ವನ್ನು ಮಾಡಿದ್ದು ರಾಜ್ಯ ಸರ್ಕಾರ ಇದಕ್ಕೆ ಹೇಗೆ ಸ್ಪಂದಿ ಸುತ್ತದೆ ಎಂಬೊದನ್ನು ಕಾದು ನೋಡ ಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..