ಬೆಂಗಳೂರು –
ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸೆಕೆಂಡ್ ಡಿವಿಷನ್ ಕ್ಲರ್ಕ್ ರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಂಗಳೂರಿನಲ್ಲಿ ನಡೆದಿದೆ ಶಶಿಕುಮಾರ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾರೆ.ಶಶಿಕುಮಾರ್ ಫುಡ್ ಸೇಫ್ಟಿ ಡಿಪಾರ್ಟ್ಮೆಂಟ್ ನ FDA ನೌಕರ ರಾಗಿದ್ದು 50 ಸಾವಿರ ಲಂಚ ಪಡೆಯುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ.
ಕೆ.ಆರ್ ಸರ್ಕಲ್ ನ ಬಳಿಯಲ್ಲಿರೋ ಫುಡ್ ಸೇಫ್ಟಿ ಕಚೇರಿಯಲ್ಲಿ ಲಾಕ್ ಆಗಿದ್ದಾರೆ.ಗುತ್ತಿಗೆದಾರ ವಿಜಯ್ ಕುಮಾರ್ ಬಳಿ 50 ಸಾವಿರಕ್ಕೆ ಡಿಮಾಂಡ್ ಮಾಡಿದ್ದ ಶಶಿಕುಮಾರ್ 5 ಲಕ್ಷದ ಗುತ್ತಿಗೆಯ ಹಣ ಬಿಡುಗಡೆಗೆಯಲ್ಲಿ 10 ಪರ್ಸೆಂಟ್ ಕೇಳಿದ್ದು ಫುಡ್ ಸೇಫ್ಟಿಯ ಡೆಪ್ಯುಟಿ ಕಮೀಷನರ್ ಅಡ್ಮಿನ್ ಗೆ ಸಂದಾಯವಾಗ್ಬೇಕು ಅಂತ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಇದೀಗ ಶಶಿಕುಮಾರ ಲೋಕಾ ಬಲೆಯಲ್ಲಿ ತಗಲ್ಲಾಕ್ಕೊಂಡಿದ್ದಾರೆ.ಇನ್ನೂ ಸಧ್ಯ ಈ ಕುರಿತು ವಶಕ್ಕೆ ತೆಗೆದುಕೊಂಡಿದ್ದು ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ