ಹಾವೇರಿ –
ಖಾತೆ ಬದಲಾವಣೆಗಾಗಿ ಐವತ್ತೈದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ PDO ರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಹಾವೇರಿ ಯಲ್ಲಿ ನಡೆದಿದೆ.ಹೌದು ಹಾವೇರಿ ತಾಲೂಕಿನ ಆಲದಕಟ್ಟಿ ಗ್ರಾಮ ಪಂಚಾಯತಿ ಪಿಡಿಓ ಸವಿತಾ ಯರೆಸೀಮೆ ಎಸಿಬಿ ಬಲೆಗೆ ಬಿದ್ದವರಾಗಿದ್ದಾರೆ
ಪ್ಲಾಟುಗಳು ಖಾತೆ ಬದಲಾವಣೆಗೆ ಹಾವೇರಿ ನಗರದ ನಿವಾಸಿ ಮುರುಗೇಶ ಎಂಬುವರಿಂದ ಐವತ್ತೈದು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಇವರನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ.ಜಮೀನುಗಳ ಖಾತೆ ಬದಲಾವಣೆಗೆ ಮಾಡುವುದಕ್ಕಾಗಿ ತಮ್ಮಿಂದ ಇವರು ಲಂಚ ಕೇಳುತ್ತಿರುವ ಬಗ್ಗೆ ಮುರುಗೇಶ್ ಅವರು ದೂರು ದಾಖಲಿ ಸಿದ್ದರು
ಎಸಿಬಿ ಡಿವೈಎಸ್ಪಿ ಗೋಪಿ.ಬಿ.ಆರ್,ಸಿಪಿಐಗಳಾದ ಬಸವ ರಾಜ ಬುದ್ನಿ,ಪ್ರಭಾವತಿ ಶೇತಸನದಿ ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ.ಹಾವೇರಿ ಎಸಿಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.