ಸಾಂಸ್ಕೃತಿಕ ಸ್ಪರ್ಧೆಯ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಶಿಕ್ಷಕಿ – ಲಕ್ಷ್ಮಿ ಎಸ್ ಅವರಿಗೆ ಸಾವಿತ್ರಿ ಬಾಯಿ ಪುಲೆ ಶಿಕ್ಷಕಿಯರ ಸಂಘದಿಂದ ಅಭಿನಂದನೆ…..

Suddi Sante Desk

ದಾವಣಗೆರೆ –

ದಾವಣಗೆರೆ ಯಲ್ಲಿ ನಡೆದ ರಾಜ್ಯ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ದಲ್ಲಿ ಸಾಂಸ್ಕೃತಿಕ ಸ್ಪರ್ಧೆಯ ಶಾಸ್ತ್ರೀಯ ನೃತ್ಯ ವಿಭಾಗದ ಭರತ ನಾಟ್ಯದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕ್ಷಕಿ ಹಾಗೂ ಸಾವಿತ್ತಿ ಬಾಯಿ ಪುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ಜಿಲ್ಲೆಯ ಕೋಶಾಧ್ಯಕ್ಷರು ಲಕ್ಷ್ಮಿ ಎಸ್ ಅವರೇ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ

ಹೌದು 2021 ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಶಾಸ್ತ್ರೀಯ ನೃತ್ಯ ಭರತನಾಟ್ಯ ಹಾಗೂ ಕೂಚಿಪುಡಿ ವಿಭಾಗದಲ್ಲಿ ರಾಜ್ಯಮಟ್ಟ ದಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.

ಲಕ್ಷ್ಮಿ ಎಸ್ ಶಿಕ್ಷಕಿ ಶಿವಮೊಗ್ಗ ಆಯ್ಕೆಯಾಗಿದ್ದು ರಾಜ್ಯ ಮಟ್ಟದ ದಾವಣಗೆರೆಯಲ್ಲಿನ ಸ್ಪರ್ಧೆಯಲ್ಲಿ ವಿಜೇತರಾಗಿ ದ್ದಾರೆ. 8000 ನೌಕರರು ಈ ಒಂದು ಸ್ಪರ್ಧೆಯಲ್ಲಿ ಭಾಗವ ಹಿಸಿದ್ದು ಅತಿ ಹೆಚ್ಚು ಸ್ಪರ್ಧಾಳುಗಳಿಂದ ಕೂಡಿದ್ದು ಎಲ್ಲರೂ ತಮ್ಮ ತಮ್ಮ ಪರಿಶ್ರಮ ದಿಂದ ಉತ್ತಮ ಪ್ರದರ್ಶನ ಕೊಡುವ ಮೂಲಕ ಯಶಸ್ವಿ ಗಳಿಸಿರುತ್ತಾರೆ.ಇನ್ನೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ನಮ್ಮ ಜಿಲ್ಲೆಯಿಂದ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ ಲಕ್ಷ್ಮಿ ಎಸ್ ಶಿಕ್ಷಕಿ ಹಾಗೂ ಕರ್ನಾಟಕ ರಾಜ್ಯ ಸಾವಿತ್ರಿ ಬಾಪುಲೆ ಶಿಕ್ಷಕಿಯರ ಸಂಘ ಶಿವಮೊಗ್ಗ ಕೋಶಾಧ್ಯಕ್ಷರು ಪ್ರಥಮ ಸ್ಥಾನವನ್ನು ಪಡೆದಿದ್ದು ಹೆಮ್ಮೆ ಹಾಗೂ ಅಭಿನಂದನೆಗಳನ್ನು ಶಿಕ್ಷಕ ಶಿಕ್ಷಕಿಯರು ಹೇಳಿದ್ದು ಇತ್ತ ಸಂಘದ ರಾಜ್ಯಾಧ್ಯಕ್ಷರು ಪ್ರಧಾನ ಕಾರ್ಯದರ್ಶಿ ಅವರು ಸರ್ವ ಸದಸ್ಯರ ಪರವಾಗಿ ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.