ಧಾರವಾಡ –
ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಷನ್ (ರಿ)ನವದೆಹಲಿ ಮತ್ತು ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ(ರಿ) ಧಾರವಾಡ ವತಿಯಿಂದ ಧಾರವಾಡ ಜಿಲ್ಲಾ ಆದರ್ಶ ಶಿಕ್ಷಕ ದಂಪತಿ ಪುರಸ್ಕೃತರಾದ,ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಉಪನಿರ್ದೇಶಕರ ಕಾರ್ಯಾಲಯ ದಲ್ಲಿ ಜಿಲ್ಲಾ ಯೋಜನಾ ಸಮನ್ವಯ ಅಧಿಕಾರಿಗಳಾದ ಎಸ್.ಎಂ. ಹುಡೆದಮನಿ ಹಾಗೂ ಶ್ರೀಮತಿ ತಹಮೀನಾ ದಂಪತಿಗೆ ರಾಷ್ಟ್ರ ಹಾಗೂ ರಾಜ್ಯ ಘಟಕದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸ ಲಾಯಿತು.
2024 ನೇ ಶೈಕ್ಷಣಿಕ ಬಲವರ್ಧನ ವರ್ಷದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿವಗಂಗಾ ವೀರಪ್ಪ ರಾಮಪುರ ದತ್ತಿ ನಿಮಿತ್ತ ಶಿಕ್ಷಣ, ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ನೀಡುವ ಆದರ್ಶ ಶಿಕ್ಷಕ ದಂಪತಿ ಪುರಸ್ಕಾರಕ್ಕೆ ಶ್ರೀಮತಿ ತಹಮೀನಾ ಹಾಗೂ S.M. ಹುಡೇದಮನಿ ದಂಪತಿಗಳು ಭಾಜನಾರಾಗಿದ್ದಾರೆ.
ಸಾವಿರಾರು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾರ್ಗ ದರ್ಶನವನ್ನು ನೀಡುತ್ತಿರುವ ಈ ದಂಪತಿಗಳಿಗೆ, ಡಾ .ಲತಾ. ಎಸ್.ಮುಳ್ಳೂರ ಕರ್ನಾಟಕ ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯ ಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಅಧ್ಯಕ್ಷರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಶಿಕ್ಷಕಿಯರ ಫೆಡರೇಶನ್ (ರಿ) ನವದೆಹಲಿ ಇವರು ಶ್ರೀಯುತ ದಂಪತಿಗಳಿಗೆ ಸನಿವಾಸದಲ್ಲಿ, ಗೌರವಿಸಿ ಅಭಿನಂದನೆಗ ಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಶಶಿಕಲಾ ರಾಠೋಡ. ಧಾರವಾಡ ಜಿಲ್ಲಾ ಅಧ್ಯಕ್ಷರು ಶ್ರೀಮತಿ ಉಮಾ. ಅಳಗವಾಡಿ ಅಧ್ಯಕ್ಷರು ಧಾರವಾಡ ಶಹರ .ಶ್ರೀಮತಿ ಪುಷ್ಪಾ. ಖನ್ನಿನಾಯಕರ್ ಜಿಲ್ಲಾ ಪ್ರಧಾನ ಕಾರ್ಯ ದರ್ಶಿಗಳು ಬೆಳಗಾವಿ ಉಪಸ್ಥಿತರಿದ್ದರು
ಸುದ್ದಿ ಸಂತೆ ನ್ಯೂಸ್ ಧಾರವಾಡ…..