ಬೆಂಗಳೂರು –
ಶಾಲಾ ಕಾಲೇಜುಗಳು ಆರಂಭಗೊಂಡ ತಕ್ಷಣ ವಿದ್ಯಾರ್ಥಿ ಗಳಿಗೆ ದೊಡ್ಡ ತಲೆನೋವಿನ ಕೆಲಸವಾಗುತ್ತಿದ್ದ ಬಸ್ ಪಾಸ್ ವಿತರಣೆಯನ್ನು ಈ ಬಾರಿ ರಾಜ್ಯ ಸರ್ಕಾರ ಸರಳಗೊಳಿ ಸಿದ್ದು ಈ ವರ್ಷದಿಂದ ಈ ಒಂದು ಬಸ್ ಪಾಸ್ ಗಳನ್ನು ಗ್ರಾಮ ಒನ್ ಕೇಂದ್ರ ಗಳಲ್ಲಿಯೇ ವಿತರಣೆ ಮಾಡಲು ಮುಂದಾಗಿದ್ದು ಹೀಗಾಗಿ ರಾಜ್ಯಾದಾದ್ಯಂತ ಗ್ರಾಮ ಒನ್ ಯೋಜನೆಯ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸ ಲಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳು ಆರಂಭವಾಗಿವೆ.
ಹೀಗಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ಪಾಸ್ ಗೆ ಸಂಬಂಧಿಸಿದಂತೆ ಬಸ್ ಪಾಸ್ ಸೌಲಭ್ಯವನ್ನು ಪಡೆಯಲು ಗ್ರಾಮ ಒನ್ ಕೇಂದ್ರಗಳಲ್ಲಿಯೇ ಅರ್ಜಿಯನ್ನು ಸಲ್ಲಿಸಬೇ ಕೆಂದು ಕಂದಾಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಈಗಾಗಲೇ ಈ ಒಂದು ಗ್ರಾಮ ಒನ್ ಕೇಂದ್ರ ಗಳಲ್ಲಿ ಪ್ರಕ್ರಿಯೆ ಮಾಡಲು ಸೂಚನೆ ಮಾಡಲಾಗಿದ್ದು ಸೂಕ್ತ ವಾದ ದಾಖಲೆಗಳೊಂದಿಗೆ ಮಾಹಿತಿಯನ್ನು ಸಲ್ಲಿಸಿ ಲಾಭ ವನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡ ಲಾಗಿದೆ.