ಸಿಂಧನೂರು –
ಹುಳು ಮಿಶ್ರಿತ ತೊಗರಿ ಬೆಳೆಯನ್ನು ಸರ್ಕಾರಿ ಶಾಲೆಗೆ ಪೂರೈಕೆ ಮಾಡಿದ ಘಟನೆ ಸಿಂಧನೂರಿನಲ್ಲಿ ನಡೆದಿದೆ. ಹಲವು ಸರ್ಕಾರಿ ಶಾಲೆಗಳಿಗೆ ಪೊರೈಕೆ ಮಾಡಿದ್ದು ಗಮನಕ್ಕೆ ಬರುತ್ತಿದ್ದಂತೆ ಅವುಗಳನ್ನು ಮರಳಿ ಆಯಾ ಶಾಲಾ ಮುಖ್ಯಸ್ಥರೇ ವಾಪಸ್ ಮಾಡಲಾರಂಭಿಸಿದ್ದಾರೆ. ತಾಲೂಕಿ ನಲ್ಲಿ ಅಕ್ಷರ ದಾಸೋಹ ಯೋಜನೆಯಡಿ ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ಬೇಕಾಗುವ ಬೆಳೆಯಲ್ಲೂ ನಡೆದ ವ್ಯವಹಾರ ಇಂತಹ ಬೆಳವಣಿಗೆಗೆ ಕಾರಣವಾಗಿದೆ.ಆಯಾ ಶಾಲೆಗಳಿಗೆ ಆಹಾರ ನಾಗರಿಕ ಸರಬರಾಜು ನಿಗಮದಿಂದ ಪೂರೈಕೆಯಾಗಿದ್ದ ಬೇಳೆ ಗುಣಮಟ್ಟ ಸರಿಯಿಲ್ಲವೆಂದು ವಾಪಸ್ ಕಳಿಸಲಾಗಿದೆ.ಅದನ್ನು ಸ್ವೀಕರಿಸಿ ಬೇರೆ ಬೆಳೆಯ ನ್ನು ಆಹಾರ ನಿಗಮದವರು ವರ್ಗಾಯಿಸಿ ಕೊಡಲಾರಂಭಿ ಸಿದ್ದಾರೆ.ತಾಲೂಕಿನ 348 ಸರಕಾರಿ ಶಾಲೆಗಳಿಗೆ ಬಿಸಿಯೂ ಟಕ್ಕಾಗಿ 310 ಕ್ವಿಂಟಾಲ್ ತೊಗರಿ ಬೇಳೆಗೆ ಬೇಡಿಕೆಯಿದೆ.
54,084 ವಿದ್ಯಾರ್ಥಿಗಳು ಅಕ್ಷರ ದಾಸೋಹ ಯೋಜನೆ ಪ್ರಯೋಜನ ಪಡೆಯುತ್ತಿದ್ದಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಕಲಬುರಗಿ ಶಿವಶಕ್ತಿ ಏಜೆನ್ಸಿಯವರ ಮೂಲಕ ತೊಗರಿ ಬೆಳೆಯನ್ನು ಪೂರೈಕೆ ಮಾಡಲಾಗಿದೆ.ಈ ಬೆಳೆಯನ್ನು ನೋಡುತ್ತಿದ್ದಂತೆ ತಾಲೂಕಿನ ಗೊಬ್ಬರಕಲ್,ಜವಳಗೇರಾ, ಸಿಂಗಾಪುರ ಶಾಲೆಯ ಸಿಬ್ಬಂದಿ, ಬಿಸಿಯೂಟಕ್ಕೆ ಬಳಸಲು ಸೂಕ್ತವಾಗಿಲ್ಲವೆಂದು ವಾಪಸ್ ಮಾಡಿದ್ದಾರೆ.ಇನ್ನೂ ಅಕ್ಷರ ದಾಸೋಹ ಯೋಜನೆಗೆ ಸಂಬಂಧಿಸಿ ಹಂಚಿಕೆಯಾದ ತೊಗರಿ ಬೆಳೆಯ ಪೈಕಿ 140 ಚೀಲಗಳನ್ನು ತೆಗೆದು ಇರಿಸಲಾ ಗಿದೆ.70 ಕ್ವಿಂಟಾಲ್ನ್ನು ಟೆಂಡರ್ ಪಡೆದುಕೊಂಡಿರುವ ಸಂಸ್ಥೆಗೆ ವಾಪಸ್ ಕಳುಹಿಸಲಾಗಿದೆ.ಶಾಲಾ ಸಿಬ್ಬಂದಿ ಇದನ್ನು ಸ್ವೀಕರಿಸಿದ ಹಿನ್ನೆಲೆಯಲ್ಲಿ ಸಮಸ್ಯೆ ಬೆಳಕಿಗೆ ಬಂದಿದೆ. ಈಗಾಗಲೇ ಶಾಲೆಗಳಿಗೆ ತಲುಪಿರುವ ದಾಸ್ತಾನು ವಾಪಸ್ ನೀಡುತ್ತಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. 1,400 ಕ್ವಿಂಟಾಲ್ ಬೇಳೆಯನ್ನು ಕೊಟ್ಟಿರುವ ಸಂಸ್ಥೆಗೆ ಇದರಿಂದ ಬಿಸಿ ತಟ್ಟಲಾರಂಭಿಸಿದೆ.ಇದು ಒಂದು ವಿಚಾರ ವಾದರೆ ಇನ್ನೂ ದರದಲ್ಲೂ ಕೂಡಾ ವ್ಯತ್ಯಾಸವಾಗುತ್ತಿದೆ ಮುಕ್ತ ಮಾರುಕಟ್ಟೆಯಲ್ಲಿ ಗ್ರಾಹಕರು ಖರೀದಿ ಮಾಡುತ್ತಿ ರುವ ತೊಗರಿ ಬೆಳೆಯ ಬೆಲೆ ಪ್ರತಿ ಕೆಜಿಗೆ 95-110 ರೂ.ದರ ವಿದೆ.ಆದರೆ, ಸರಕಾರದ ಅಕ್ಷರ ದಾಸೋಹ ಯೋಜನೆಗೆ ಪೂರೈಕೆ ಮಾಡುವ ಏಜೇನ್ಸಿಯವರು 84.50 ರೂ.ಗೆ ಸರಬರಾಜು ಮಾಡುತ್ತಿದ್ದಾರೆ. ಈ ಮಧ್ಯೆ ಉಳಿಕೆ ಮಾರ್ಗ ಅನುಸರಿಸಿದ ಪರಿಣಾಮ ಕಳಪೆ ಬೆಳೆ ಶಾಲೆಗಳಿಗೆ ತಲುಪಿವೆ.ಆಹಾರ ನಿಗಮದ ಉಗ್ರಾಣದಲ್ಲಿ ಗೋಧಿ ಪಕ್ಕದಲ್ಲಿ ಬೇಳೆ ಇಟ್ಟಿರುವುದರಿಂದ ಹುಳು ಬಂದಿದ್ದು. ನಾನು ಭೇಟಿಗೆ ಹೋದಾಗ ಎಲ್ಲ ಕಡೆ ದೂರುಗಳಿಲ್ಲ ಸಮಸ್ಯೆ ಇದ್ದ ಕಡೆಗಳಲ್ಲಿ ಆಹಾರ ನಿಗಮ ವ್ಯವಸ್ಥಾಪಕರು ತಕ್ಷಣವೇ ಬದಲಾವಣೆ ಮಾಡಿ ಕೊಟ್ಟಿದ್ದಾರೆ ಎಂಬ ಮಾತನ್ನು ಅಕ್ಷರ ದಾಸೋಹ ಯೋಜನೆ ಅಧಿಕಾರಿಗಳು ಹೇಳುತ್ತಿದ್ದಾರೆ.