ಮಂಡ್ಯ –
ವಿದ್ಯಾರ್ಥಿಗಳಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನಲೆಯಲ್ಲಿ ಒಂದು ವಾರಗಳ ಕಾಲ ಶಾಲೆಯನ್ನು ಸೀಲ್ಡ್ ಡೌನ್ ಮಾಡಲಾಗಿದೆ.ಹೌದು ಮಂಡ್ಯದ ಮದ್ದೂರು ತಾಲ್ಲೂಕಿನ ಹಳ್ಳಿಕೆರೆ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಈ ಒಂದು ಕರೋನಾ ಸ್ಪೋಟ ಕಂಡು ಬಂದಿದೆ.ಶಾಲೆಯಲ್ಲಿ ಐದು ಮಕ್ಕಳಲ್ಲಿ ಪಾಸಿಟಿವ್ ಕಂಡು ಬಂದಿದ್ದು ಹೀಗಾಗಿ ಶಾಲೆಯನ್ನು ಒಂದು ವಾರ ಸೀಲ್ಡ್ ಡೌನ್ ಮಾಡಲಾಗಿದೆ.
ಸಧ್ಯ ಶಾಲೆಯನ್ನು ಸಂಪೂರ್ಣವಾಗಿ ಸ್ಯಾನಿಟೈಜಿಂಗ್ ಮಾಡಿ ನಂತರ ಅದನ್ನು ಸೀಲ್ಡ್ ಡೌನ್ ಮಾಡಿದ್ದಾರೆ ಗ್ರಾಮ ಪಂಚಾಯತ ಸಿಬ್ಬಂದಿಗಳು.ಇಂದಿನಿಂದ ಒಂದು ವಾರ ಶಾಲೆ ಸೀಲ್ಡ್ ಡೌನ್ ನ್ನು ಮಾಡಿದ್ದಾರೆ.
ಹಳ್ಳಿಕೆರೆ ಗ್ರಾಮದ ಸರ್ಕಾರಿ ಶಾಲೆಯನ್ನು ಮಾಡಿದ್ದು ಕರೊನಾ ಸ್ಫೋಟ ಗೊಂಡ ಹಿನ್ನಲೆಯಲ್ಲಿ ಈ ಒಂದು ಕ್ರಮವನ್ನು ಮಾಡಲಾಗಿದೆ
ಸಾಮೂಹಿಕ ಪರೀಕ್ಷೆ ವೇಳೆ ಐದು ಮಕ್ಕಳಲ್ಲಿ ಸೋಂಕು ದೃಢವಾಗಿ ಕಂಡು ಬಂದಿದೆ. ಶಾಲೆಗೆ ಸ್ಯಾನಿಟೈಸ್ ಮಾಡಿ ಸೀಲ್ ಡೌನ್ ಮಾಡಿದ ಗ್ರಾಮ ಪಂಚಾಯಿತಿ ಸಿಬ್ಬಂದಿ ಸಧ್ಯ ಸೋಂಕಿತ ಮಕ್ಕಳನ್ನ ಮನೆಗಳಲ್ಲೇ ಐಸೋಲೇಷನ್ ಮಾಡಿದ್ದಾರೆ ಅಧಿಕಾರಿಗಳು.ಸೋಂಕಿತ ಮಕ್ಕಳ ಕುಟುಂಬ ದವರಿಗೂ ಕರೊನ ಟೆಸ್ಟ್ ಮಾಡಲಾಗಿದೆ.
ಇನ್ನೂ ಸದ್ದಿಲ್ಲದೇ ಮತ್ತೆ ಹಳ್ಳಿ ಹಳ್ಳಿಗೂ ಹಬ್ಬುತ್ತಿದೆ ಮಹಾ ಮಾರಿ ಎಂಬ ಅನುಮಾನ ಕಾಡುತ್ತಿದೆ.ಹಳ್ಳಿಕೆರೆ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಕರೊನಾ ಸ್ಫೋಟ ದಿಂದಾಗಿ ಹಳ್ಳಿಕೆರೆ ಗ್ರಾಮದಲ್ಲಿ ಆತಂಕದಲ್ಲಿ ಇದ್ದಾರೆ ಜನರು.
ಇನ್ನೂ ಸಾಮೂಹಿಕ ಪರೀಕ್ಷೆ ವೇಳೆ ಐದು ಮಕ್ಕಳಲ್ಲಿ ಸೋಂಕು ದೃಢ.ಮಕ್ಕಳಲ್ಲಿ ಸೋಂಕು ದೃಡಪಟ್ಟ ಬಳಿಕ ಗ್ರಾಮದ ಜನರಲ್ಲಿ ಆತಂಕ ಉಂಟಾಗಿದ್ದು ಸೋಂಕಿತ ಮಕ್ಕಳಿಗೆ ಸಣ್ಣ ಪುಟ್ಟ ಲಕ್ಷಣಗಳಿದ್ದು ಎಲ್ಲರೂ ಗುಣ ಮುಖ ರಾಗುತ್ತಿದ್ದಾರೆ