ಶಾಲಾ ವಾಹನ ಅಪಘಾತ ನಾಲ್ವರು ಮಕ್ಕಳು ಸಾವು – ಶಾಲಾ ವಾಹನಕ್ಕೆ ಡಿಕ್ಕಿಯಾದ ಟ್ರ್ಯಾಕ್ಟರ್…..

Suddi Sante Desk
ಶಾಲಾ ವಾಹನ ಅಪಘಾತ ನಾಲ್ವರು ಮಕ್ಕಳು ಸಾವು – ಶಾಲಾ ವಾಹನಕ್ಕೆ ಡಿಕ್ಕಿಯಾದ ಟ್ರ್ಯಾಕ್ಟರ್…..

ಬಾಗಲಕೋಟೆ

ಶಾಲಾ ವಾಹನಕ್ಕೆ ಟ್ರ್ಯಾಕ್ಟರ್ ವೊಂದು ಡಿಕ್ಕಿ ಯಾದ ಪರಿಣಾಮ ನಾಲ್ವರು ಮಕ್ಕಳು ಸಾವಿ ಗೀಡಾದ ಘಟನೆ ಬಾಗಲಕೋಟೆ ಯಲ್ಲಿ ನಡೆದಿದೆ ಹೌದು ಅಪಘಾತದಲ್ಲಿ ನಾಲ್ವರ ಮಕ್ಕಳ ದುರ್ಮ ರಣವಾಗಿದ್ದು ಗಾಯಗೊಂಡಿದ್ದ ಕೆಲವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸ್ಥಳಕ್ಕೆ ಬಾಗಲಕೋಟೆ ಎಸ್.ಪಿ. ಭೇಟಿ ನೀಡಿ ಪರಿಶೀಲನೆ ನಡೆಸಿದರು.ಘಟನಾ ಸ್ಥಳಕ್ಕೆ ಭೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಶ್ವೇತಾ ಪಾಟೀಲ (16) , ಸಾಗರ ಕಡಕೋಳ (17), ಗೋವಿಂದ ಜಂಬಗಿ (13) & ಬಸವರಾಜ್ ಕೊಟಗಿ (17) ಮೃತ ವಿದ್ಯಾರ್ಥಿ ಗಳಾಗಿದ್ದಾರೆ.

ಗಾಯಗೊಂಡ ಎಂಟು ಮಕ್ಕಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಜಮಖಂಡಿ ತಾಲ್ಲೂಕಾ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿದೆ.ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಆಲಗೂರು ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ ಶಾಲಾ ಬಸ್ ಗೆ ಟ್ರ್ಯಾಕ್ಟರ್ ಡಿಕ್ಕಿ ಯಾದ ಘಟನೆ ನಡೆದಿದೆ.

ಶಾಲೆಯ ಒಂದು ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ ಆಗುವ ವೇಳೆ ಈ ಒಂದು ದುರ್ಘಟನೆ ಸಂಭವಿಸಿದೆ.ಮೃತ ವಿದ್ಯಾರ್ಥಿಗಳು ಬಾಗಲ ಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕವಟಗಿ ಗ್ರಾಮದವರಾಗಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬಾಗಲಕೋಟೆ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.