ಬೆಂಗಳೂರು –
ಹೌದು ಕರೋನ ನಡುವೆ ಶಾಲೆಗಳಿಂದ ಹಿಡಿದು ಹೈಫೈ ಶಾಲೆಗಳ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ನುರಿತ ಶಿಕ್ಷಕರಿ ಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹುಡುಕಾಟ ನಡೆಸಿದ್ದು ಪರದಾಡುವ ಸ್ಥಿತಿ ಎದುರಾಗಿದೆ.ಇತ್ತ ಹಲವು ವರ್ಷಗ ಳಿಂದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನ ತೊಡಗಿಸಿಕೊಂಡಿದ್ದ ಶಿಕ್ಷಕರಿಗೆ ಇದೀಗ ಬೇರೆ ಕೆಲಸ ಮಾಡಲು ಮನಸ್ಸು ಒಪ್ಪುತ್ತಿಲ್ಲ.ಆದರೂ ಬದುಕು ಹಾಗೂ ಕುಟುಂಬ ನಿರ್ವಹ ಣೆಗೆ ಸಂಬಳ ಬೇಕೇ ಬೇಕು.ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆ ಶಿಕ್ಷಣ ವೃತ್ತಿಯನ್ನ ತೊರೆಯೋದು ಅನಿವಾರ್ಯ ಅನ್ನೋದು ಕೆಲ ಶಿಕ್ಷಕರ ಅಭಿಪ್ರಾಯವಾಗಿದೆ.ಇದೇ ಆಗಿದೆ ಈ ಹಿನ್ನೆಲೆಯಲ್ಲಿ ಮಣಿಪುರ,ತ್ರಿಪುರ, ನಾಗಾಲ್ಯಾಂಡ್, ಕೇರಳ,ಆಂಧ್ರಪ್ರದೇಶ, ಉತ್ತರ ಪ್ರದೇಶದಂತಹ ಭಾಗಗ ಳಿಂದ ಶಿಕ್ಷಕರರನ್ನ ಕರೆಸಿ ಕೊಳ್ಳಲಾಗ್ತಿದೆ.ಸದ್ಯ ಬಹುತೇಕ ಖಾಸಗಿ ಶಾಲೆಗಳಿಗೆ ಇಂಗ್ಲೀಷ್,ಸಮಾಜ ವಿಜ್ಞಾನ,ಗಣಿತ ವಿಷಯಗಳಿಗೆ ಶಿಕ್ಷಕರ ಕೊರತೆ ಕಾಡುತ್ತಿದೆ.ಮತ್ತೆ ಕೋವಿಡ್ ಬಂದು ಅರ್ಧ ಸಂಬಳ ಅಥವಾ ಕೆಲಸಕ್ಕೆ ಕುತ್ತು ತರುವ ಭೀತಿ ಈಗಿರುವ ಹಾಗೂ ವೃತ್ತಿಯನ್ನ ತೊರೆದವರನ್ನ ಕಾಡ್ತಿದೆ.ಈ ಹಿನ್ನೆಲೆ ಶಿಕ್ಷಕ ವೃತ್ತಿಯೇ ಬೇಡ ಅಂತ ಸ್ವಂತ ಊರುಗಳಲ್ಲೇ ಸೆಟಲ್ಡ್ ಆಗ್ತಿದ್ದಾರೆ.
ಒಟ್ಟಿನಲ್ಲಿ ಇಷ್ಟು ದಿನ ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಶಿಕ್ಷಕರ ಕೊರತೆ ಎದ್ದು ಕಾಣುತ್ತಿತ್ತು.ಆದರೆ ಇದೀಗ ಖಾಸಗಿ ಶಾಲೆಗಳಿಗೂ ಶಿಕ್ಷಕರ ಕೊರತೆಯ ಗಾಳಿ ಬೀಸಿದ್ದು ಆಡಳಿತ ಮಂಡಳಿಗಳಿಗೆ ದೊಡ್ಡ ಹೊಡೆತವೇ ಬಿದ್ದಿದೆ.