ಬೆಂಗಳೂರು –
ಮಹಾಮಾರಿ ಕರೋನ ನಂತರ ಕಳೆದ ಒಂದೂ ವರೆ ವರ್ಷಗಳು ಕಳೆದರು ಇನ್ನೂ ಮಕ್ಕಳು ಶಾಲೆಯ ಮುಖ ನೋಡಿಲ್ಲ ಹತ್ತಿಲ್ಲ.ಏನಿಲ್ಲ ಅಂದ್ರು ಶಾಲೆಯ ಮುಖ ನೋಡಿ 15 ತಿಂಗಳಾಗಿವೆ.ದೇಶದಲ್ಲಿ ಅದರ ಲ್ಲೂ ಕೊರೊನಾ ಮೊದಲ ಅಲೆ ಕಾಣಿಸಿಕೊಂಡಾಗಿ ನಿಂದಲೂ ಶಾಲೆ ಆರಂಭವೇ ಇಲ್ಲ. ಇದೀಗ ಮೂರನೇ ಅಲೆ ಮಕ್ಕಳಿಗೆ ಡೇಂಜರ್ ಅಂತ ಹೇಳಲಾಗ್ತಿದೆ. ಹೀಗಿರುವಾಗ ಪೋಷಕರು ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸೋದಕ್ಕೆ ಭಯ ಪಡ್ತಾರೆ ಈ ಎಲ್ಲಾ ಗೊಂದಲದ ನಡುವೆಯೆ ತಜ್ಞರು ಶಾಲೆ ಆರಂಭ ಮಾಡಿ ಅಂತ ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದಾರೆ.
ಶಾಲೆ ಆರಂಭವಾಗದೆ ಆನ್ ಲೈನ್ ಕ್ಲಾಸ್ ನಡೀತಾ ಇದೆ.ಆದ್ರೆ ಗ್ರಾಮೀಣ ಭಾಗದಲ್ಲಿ ಆನ್ ಲೈನ್ ಕ್ಲಾಸ್ ಸಿಕ್ಕಾಪಟ್ಟೆ ಕಷ್ಟ ಇಂಟರ್ನೆಟ್ ಪ್ರಾಬ್ಲಮ್ ಇರುತ್ತೆ. ಹೀಗಾಗಿ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಾರೆ, ಮುಂಜಾಗ್ರತ ಕ್ರಮದೊಂದಿಗೆ ಶಾಲೆ ಆರಂಭಿಸಿ ಅಂತ ತಜ್ಞರು ಸಲಹೆ ನೀಡಿದ್ದಾರೆ.
ಶಿಕ್ಷಣ ತಜ್ಞರ ಸಲಹೆಯಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೋವಿಡ್ ತಾಂತ್ರಿಕ ಸಮಿತಿ ಸಲಹೆಯಂತೆ ಶಾಲೆ ಆರಂಭಿಸಲು ತೀರ್ಮಾನಿಸಿದೆ.ಅಂದುಕೊಂಡಂತೆ ಆದ್ರೆ ಜುಲೈ ಮೂರನೇ ವಾರದಲ್ಲಿ ಶಾಲೆ ಆರಂಭವಾಗಲಿದೆ.
ಇನ್ನು ಶಾಲೆ ಆರಂಭವಾದ ಬಳಿಕ ಮಕ್ಕಳಿಗೆ ಅನ್ನ ಭಾಗ್ಯ,ಕ್ಷೀರಭಾಗ್ಯ ಯೋಜನೆಯಡಿ ಹಾಲು, ಬಿಸಿ ಯೂಟ ನೀಡಲು ಸೂಚನೆ ನೀಡಿದೆ.ಶಾಲೆ ಆರಂಭ ವಾಗಿಲ್ಲ ಅಂದಾಗಲೂ ಮಕ್ಕಳಿಗೆ ಬಿಸಿಯೂಟದ ಬದಲಿಗೆ ಆಹಾರ ಧಾನ್ಯ ವಿತರಿಸುತ್ತಿದ್ದಾರೆ.ಇನ್ನೂ ಇದು ಒಂದೆಡೆಯಾದರೆ ಪ್ರಮುಖವಾಗಿ ಇನ್ನೂ ಶಿಕ್ಷಕರಿಗೆ ಪೂರ್ಣ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಆಗಿಲ್ಲ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿದ್ದು ಹಿಂಬಡ್ತಿ ಮುಂಬಡ್ತಿ ಎಂಬ ನಡುವೆ ಶಿಕ್ಷಕರು ಗೊಂದಲದಲ್ಲಿ ಇದ್ದಾರೆ.ಇದರ ನಡುವೆ ಮೂರನೇ ಅಲೆಯ ಭೀತಿ ಮಕ್ಕಳಿಗೆ ವ್ಯಾಕ್ಸಿನೇಷನ್ ಇಲ್ಲ ಇಂತಹ ಅವ್ಯವಸ್ಥೆಯ ನಡುವೆ ಶಾಲೆ ಆರಂಭ ಮಾಡಬೇಕು ಎಂಬ ತಜ್ಞರ ಅಭಿಪ್ರಾಯ ಸರಿನಾ ಎಂಬ ಪ್ರಶ್ನೆ ಎಲ್ಲರನ್ನೂ ಕಾಡತಾ ಇದೆ