ನವದೆಹಲಿ –
ಶಿಕ್ಷಣ ಕ್ಷೇತ್ರದಲ್ಲಿನ ಮತ್ತೊಂದು ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು ಇದರಿಂದಾಗಿ ದೇಶದ ಹಲವಾರು ಶಾಲೆಗಳಿಗೆ ಲಾಭವಾಗಲಿದೆ.ಹೌದು ಸಮಗ್ರ ಶಿಕ್ಷಣ ಯೋಜನೆ’ ಯನ್ನು ಮತ್ತೆ ಐದು ವರ್ಷಗಳ ಅವಧಿಗೆ ಮುಂದುವ ರಿಸುವುದಕ್ಕೆ ಕೇಂದ್ರ ಸಚಿವ ಸಂಪುಟ ಇಂದು ಅನುಮೋದನೆ ನೀಡಿತು.’ಈ ಯೋಜನೆ ಕಳೆದ ಏಪ್ರಿಲ್ 1ರಿಂದ 2026 ರ ಮಾರ್ಚ್ 31ರ ವರೆಗೆ ಜಾರಿಯಲ್ಲಿರುವುದು.ಯೋಜನೆಯನ್ನು ಸಮಗ್ರ ಶಿಕ್ಷಣ ಯೋಜನೆ-2 ಎಂಬುದಾಗಿ ಕರೆಯಲಾಗು ವುದು ಎಂದು ಸಚಿವರಾದ ಧರ್ಮೇಂದ್ರ ಪ್ರಧಾನ್ ಹಾಗೂ ಅನುರಾಗ್ ಠಾಕೂರ್ ತಿಳಿಸಿದರು.
ದೇಶದಲ್ಲಿರುವ ಸರ್ಕಾರಿ ಮತ್ತು ಅನುದಾನಿತ ಒಟ್ಟು 11.60 ಲಕ್ಷ ಶಾಲೆಗಳು, 57 ಲಕ್ಷ ಶಿಕ್ಷಕರು ಹಾಗೂ 15.6 ಕೋಟಿ ವಿದ್ಯಾರ್ಥಿಗಳು ಈ ಯೋಜನೆಯ ಲಾಭ ಪಡೆಯಲಿದ್ದು, ಉತ್ತಮ ಶಿಕ್ಷಣ ಹಾಗೂ ಕೌಶಲ ಅಭಿವೃದ್ಧಿ ಗುರಿ ಹೊಂದಿದೆ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಟ್ವಿಟರ್ನಲ್ಲಿ ತಿಳಿಸಿದೆ.
ಯೋಜನಾ ಗಾತ್ರ ₹ 2,94,283.04 ಕೋಟಿ ಇದ್ದು, ಇದರಲ್ಲಿ ಕೇಂದ್ರ ಪಾಲು ₹ 1,85,398.32 ಕೋಟಿ ಇದೆ