ಬೆಂಗಳೂರು –
ದೂರದ ರಷ್ಯಾ- ಉಕ್ರೇನ್ ಯುದ್ಧದ ಪರಿಣಾಮ ರಾಜ್ಯದ ಸರ್ಕಾರಿ ಶಾಲೆಗಳ ಮೇಲೂ ಬೀರಿದೆ.ಯುದ್ಧ ಆರಂಭ ವಾದ ಬಳಿಕ ಉಕ್ರೇನ್‌ನಿಂದ ಬರುತ್ತಿದ್ದ ಸೂರ್ಯಕಾಂತಿ ಎಣ್ಣೆ ರಫ್ತು ಸ್ಥಗಿತಗೊಂಡಿದೆ ಪರಿಣಾಮವಾಗಿ.ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಕೊಡುವ ಬಿಸಿಯೂಟಕ್ಕೆ ಬಳಸುವ ಸೂರ್ಯಕಾಂತಿ ಎಣ್ಣೆ ಬೆಲೆ ದುಬಾರಿಯಾಗಿದ್ದು ಮುಖ್ಯ ಶಿಕ್ಷಕರ ಜೇಬಿಗೆ ಕತ್ತರಿ ಬೀಳುತ್ತಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯ ಲೆಕ್ಕಾಚಾರದ ಪ್ರಕಾರ ಕಿರಿಯ ಪ್ರಾಥ ಮಿಕ ಶಾಲೆಯ ಮಗುವಿಗೆ ಸರಾಸರಿ ಘಟಕ ವೆಚ್ಚ ರೂ.42 ಪೈಸೆ. ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಘಟಕ ವೆಚ್ಚ 67 ಪೈಸೆ.ಇದರ ಪ್ರಕಾರ ಒಂದು ಲೀಟರ್ ಸೂರ್ಯಕಾಂತಿ ಎಣ್ಣೆಗೆ ಕೇವಲ 86 ರೂ. ವೆಚ್ಚ ಮಾಡಬೇಕು.ವಾಸ್ತವದಲ್ಲಿ ಉಕ್ರೇನ್ – ರಷ್ಯಾ ಯುದ್ಧದಿಂದ ಸೂರ್ಯಕಾಂತಿ ಎಣ್ಣೆ ಲೀಟರ್ ಬೆಲೆ 200 ರೂ. ಗಡಿ ದಾಟಿದೆ.


ಒಂದು ಲೀಟರ್ ಗೆ ಹೆಚ್ಚುವರಿಯಾಗಿ 114 ರೂ. ನಂತೆ ಕನಿಷ್ಠ 300 ಮಕ್ಕಳು ಇರುವ ಶಾಲೆಯಲ್ಲಿ ತಿಂಗಳಿಗೆ 3,900 ರೂ. ಹೆಚ್ಚುವರಿಯಾಗಿ ಭರಿಸಬೇಕಾಗಿದೆ.ಈ ಹೊರೆ ಯನ್ನು ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರೇ ಭರಿಸುವಂತಾ ಗಿದೆ.ಸೂರ್ಯಕಾಂತಿ ಎಣ್ಣೆ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿರುವ ಬಗ್ಗೆ ಎಚ್ಚೆತ್ತ ಸಾರ್ವಜನಿಕ ಶಿಕ್ಷಣ ಇಲಾಖೆ ಫೆ. 22 ರಿಂದ ಏಪ್ರಿಲ್ ತಿಂಗಳವರೆಗೂ ಬಿಸಿ ಯೂಟ ಕಾರ್ಯಕ್ರಮ ನಿಲ್ಲದಂತೆ ಅಗತ್ಯ ಕ್ರಮ ಜರುಗಿಸು ವಂತೆ ಜ್ಞಾಪನಾ ಪತ್ರ ಹೊರಡಿಸಲಾಗಿದೆ.ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಹೊರಡಿಸಿ ರುವ ಜ್ಞಾಪನಾ ಪತ್ರದ ಪ್ರಕಾರ ಕಾರಣಾಂತರಗಳಿಂದ ಸೂರ್ಯಕಾಂತಿ ಎಣ್ಣೆ ಜಿಲ್ಲಾವಾರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಶಾಲೆಗಳಲ್ಲಿ ಬಿಸಿಯೂಟ ಕಾರ್ಯಕ್ರಮ ನಿಲ್ಲದಂತೆ ಅಡುಗೆ ಎಣ್ಣೆ ವ್ಯತ್ಯಯವಾ ದರೂ ಲಭ್ಯವಿರುವ ಪರಿವರ್ತನಾ ವೆಚ್ಚ ಬಳಿಸಿಕೊಂಡು ನಿಯಾಮನುಸಾರ ಮುಕ್ತ ಮಾರುಕಟ್ಟೆಯಲ್ಲಿ ದೊರೆಯುವ ಖಾದ್ಯ ತೈಲ ಅಡುಗೆ ಎಣ್ಣೆ ಖರೀದಿಸಲು ಸೂಚಿಸಲಾಗಿದೆ. ಈ ಮೂಲಕ ಬಿಸಿಯೂಟ ಕಾರ್ಯಕ್ರಮ ನಿಲ್ಲದಂತೆ ಕ್ರಮ ಜರುಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಲಾಗಿದೆ.



ವಾಸ್ತವದಲ್ಲಿ ಬಿಸಿಯೂಟ ಯೋಜನೆ ಜಾರಿಗೊಳಿಸಲು ಸೂರ್ಯಕಾಂತಿ ಎಣ್ಣೆ ಖರೀದಸಲಾಗದೇ ಶಾಲಾ ಮುಖ್ಯ ಶಿಕ್ಷಕರು ಪರಿತಪಿಸುವಂತಾಗಿದೆ. ಶಿಕ್ಷಣ ಇಲಾಖೆ ನಿಗದಿ ಪಡಿಸಿರುವ 86 ರೂ.ನಿಂದ ಯಾವ ಅಡುಗೆ ಎಣ್ಣೆ ಖರೀದಿ ಸಲಾಗದ ಸ್ಥಿತಿ ನಿರ್ಮಾಣವಾಗಿದೆ.ಪಾಮ್ ಆಯಿಲ್ ಲೀಟರ್ ದರ 175 ರೂ. ಇದೆ, ಇನ್ನು ಕಡಲೆಕಾಯಿ ಎಣ್ಣೆ (ಶುದ್ಧ ) ಲೀಟರ್ 300 ರ ಆಜುಬಾಜಿನಲ್ಲಿದೆ.ಕಡಿಮೆ ದರಕ್ಕೆ ಸಿಗುತ್ತಿದ್ದ ಸೂರ್ಯಕಾಂತಿ ಎಣ್ಣೆ ದರ ಲೀಟರ್ 200 ರೂ. ಗಡಿ ದಾಟಿದ್ದು, ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರು ಹೊರೆ ಭರಿಸುವಂತಾಗಿದೆ.ಈ ಬಗ್ಗೆ ಸರ್ಕಾರಿ ಶಾಲಾ ಮುಖ್ಯ ಶಿಕ್ಷಕರು ಸುದ್ದಿ ಸಂತೆಯ ಜೊತೆಗೆ ತಮ್ಮ ಅಳಲನ್ನು ತೋಡಿ ಕೊಂಡಿದ್ದಾರೆ.ಕೊರೊನಾ ದಿಂದ ಶಾಲೆಗಳು ಪೂರ್ಣ ಪ್ರಮಾಣದಲ್ಲಿ ತೆರೆದಿರಲಿಲ್ಲ.ಹೀಗಾಗಿ ಮಾ.31 ಕ್ಕೆ ಮುಗಿ ಯುತ್ತಿದ್ದ ಶೈಕ್ಷಣಿಕ ವರ್ಷವನ್ನು ಈ ಭಾರಿ ಏ.15 ರ ವರೆಗೆ ವಿಸ್ತರಿಸಿ ಶಿಕ್ಷಣ ಇಲಾಖೆ ಆದೇಶಿಸಿದೆ ಹೀಗಾಗಿ ಏ. 10 ರ ವರೆಗೂ ಶಾಲೆಗಳು ಕಾರ್ಯ ನಿರ್ವಹಿಸಲಿದ್ದು, ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಮುಂದುವರೆಸಬೇ ಕಿದೆ. ಶಾಲೆಗಳಿಗೆ ಸೂರ್ಯಕಾಂತಿ ಎಣ್ಣೆ ಸರಬರಾಜು ಮಾಡುವ ಗುತ್ತಿಗೆಯನ್ನು ಅದಾನಿ ವಿಲ್ಮಾರ್, ಕರ್ನಾಟಕ ಪ್ರಾದೇಶಿಕ ಎಣ್ಣೆ ಬೀಜ ಬೆಳೆಗಾರರ ಒಕ್ಕೂಟಕ್ಕೆ ನೀಡಲಾ ಗಿದೆ.ರಷ್ಯಾ – ಉಕ್ರೇನ್ ಯುದ್ಧದ ನೆಪ ಇಟ್ಟುಕೊಂಡು ಸೂರ್ಯಕಾಂತಿ ಎಣ್ಣೆ ಸರಬರಾಜು ಮಾಡುವಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಹೀಗಾಗಿ ಸರ್ಕಾರಿ ಮುಖ್ಯ ಶಾಲಾ ಶಿಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ. ಪರಿವರ್ತನಾ ವೆಚ್ಚ ಸರಿದೂಗಿಸಲು ಜ್ಞಾಪನಾ ಪತ್ರದಲ್ಲಿ ಉಲ್ಲೇಖಿಸಿದ್ದರೂ, ಅದರ ಬಗ್ಗೆ ಸ್ಪಷ್ಟತೆ ಇಲ್ಲದಿರವುದು ಈ ಸಮಸ್ಯೆಯ ಮೂಲವಾಗಿದೆ.