ಹುಬ್ಬಳ್ಳಿ –
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡ ಕವನ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಪೊಲೀಸ್ ಅಧಿಕಾರಿಗೆ ದ್ವೀತಿಯ ಬಹುಮಾನ ಲಭಿಸಿದೆ.ಹೌದು ನವೆಂಬರ್ ತಿಂಗಳದ ಹಿನ್ನೆಲೆಯಲ್ಲಿ ಉಸಿರಾಗಲಿ ಕನ್ನಡ ಎಂಬ ವಿಷಯದ ಮೇಲೆ ಕೊಡಗಿನ ಓಂ ಬಳಗ ಕವನ ಸ್ಪರ್ಧೆಯನ್ನು ಆಯೋಜಿಸಿತ್ತು. ಸ್ಪರ್ಧೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅನೇಕ ಸಾಹಿತ್ಯ ಮನಸ್ಸುಗಳು ತಮ್ಮ ತಮ್ಮ ಕವನಗಳನ್ನು ಕಳಿಸಿದ್ದರು.ಇದರಲ್ಲಿ ಹುಬ್ಬಳ್ಳಿಯ E&C ವಿಭಾಗದ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಮಾಳಗೊಂಡ ಕೂಡಾ ತಮ್ಮ ಕವನವನ್ನು ರಚನೆ ಮಾಡಿ ಕಳಿಸಿದ್ದರು.
ನೂರಕ್ಕೂ ಹೆಚ್ಚು ಸಾಹಿತ್ಯ ಮನಸ್ಸುಗಳು ಈ ಒಂದು ಸ್ಪರ್ಧೆಯಲ್ಲಿ ತಮ್ಮ ತಮ್ಮ ಕವನಗಳನ್ನು ಕಳಿಸಿ ಕೊಟ್ಟಿದ್ದರು.ಇನ್ನೂ ಕಳೆದ 13 ವರುಷಗಳಿಂದ ಬಿಡುವಿಲ್ಲದ ಕೆಲಸದ ನಡುವೆಯೂ ಸಮಯವನ್ನು ಬಿಡುವು ಮಾಡಿಕೊಂಡು ಆಗಾಗ್ಗೆ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸತೀಶ್ ಮಾಳಗೊಂಡ ಬಿಡುವಿಲ್ಲದ ವೃತ್ತಿಯ ನಡುವೆ ಕವನ ರಚನೆ ಮಾಡಿಕೊಂಡು ಬರುತ್ತಿದ್ದಾರೆ.ಕಥೆ ಕವನ ಸಂಕಲನ ರಚನೆ ಮಾಡಿಕೊಂಡು ಬರುತ್ತಾ ತಮ್ಮಲ್ಲಿನ ಸಾಹಿತ್ಯದ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.ಇವರ ಪ್ರತಿಭೆಗೆ ದೂರದ ಕೊಡಗಿನ ಓಂ ಬಳಗದ ಕುಲತಿಲಕೆ ಕೂಗು ಎಂಬ ಕವನ ಸಂಕಲನಕ್ಕೆ ದ್ವೀತಿಯ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಶಸ್ತಿಯನ್ನು ಇನ್ನೆರಡು ದಿನಗಳಲ್ಲಿ ಓಂ ಬಳಗ ನೀಡಿ ಗೌರವಿಸಲಿದೆ.
ಪ್ರಶಸ್ತಿಗಳ ವಿವರ ಹೀಗಿದೆ
??? ಓಂ ಬಳಗ ???
??? ಆತ್ಮೀಯ ಕವಿಮಿತ್ರರೇ ಎಲ್ಲರಿಗೂ ನಮಸ್ಕಾರ???
Dr. ಸುಭಾಷ್ ನಾಣಯ್ಯಕೊಡಗು ಪ್ರಾಯೋಜಕತ್ವದಲ್ಲಿ
8/11/2020 ನೇ ಭಾನುವಾರ ನಡೆದ “ಉಸಿರಾಗಲಿ ಕನ್ನಡ ” ಕವನ ರಚನೆ ಸ್ಪರ್ಧೆಯ ಫಲಿತಾಂಶ ಹೀಗಿದೆ.
? ಪ್ರಥಮ ಸ್ಥಾನ ?
? ಮೋಹಿನಿ ದಾಮ್ಲೆ
? ದ್ವಿತೀಯ ಸ್ಥಾನ ?
? ಸತೀಶ್ ಮಾಳಗೊಂಡ
? ತೃತೀಯ ಸ್ಥಾನ ?
? ಮಂಜುನಾಥ್ ಮರವಂತೆ
?️ ಮೆಚ್ಚುಗೆಗೆ ಪಾತ್ರರಾದವರು ?️
- ಅಮೃತ. ಕೆ .
- ರಶ್ಮಿ ಸನಿಲ್
- ಬಿಟ್ಟೀರ ಚೊಂದಮ್ಮ ಶಂಭು
- ರತ್ನಾ.ಎಂ.ಅಂಗಡಿ
- ಜಯಲಕ್ಷ್ಮಿ.ಎಂ.ಬಿ .
??????????
? ವಿಜೇತರೆಲ್ಲರಿಗೂ ಅಭಿನಂದನೆಗಳು?
??? ಓಂ ತೀರ್ಪುಗಾರರ ಬಳಗ ???
*ಕವನ*
ಸ್ಪರ್ಧೆಗಾಗಿ:ಓಂ ಬಳಗ ಕೊಡಗು
ಕುಲತಿಲಕೆ ಕೂಗು
ಕೇಳಿಸುತಿಲ್ಲವೆ ಕನ್ನಡದ ಕಂದರಿರಾ
ಕನ್ನಡಮ್ಮನ ಕೊರಗಿನ ಕೊರಳ ಕೂಗು
ಬೆರಗಾಗಿ ಬಿಟ್ಟಿದ್ದೇವೆ ಬೇರೆ
ಅಮ್ಮಂದಿರ ಬೇರಗಕ್ಕೆ ಇಂದು
ಎಲ್ ಕೆಜಿ, ಯು ಕೆಜಿ, ಪಾವ್ ಕೆಜಿ
ಎಂದು, ಮಕ್ಕಳನ್ನು ಕಳಿಸುತ್ತೇವೆ
ನಾ ಮುಂದು ನೀ ಮುಂದು
ಕೂಗಿಟ್ಟು ಕರೆಯುತ್ತಿದ್ದಾಳೆ ಕನ್ನಡಮ್ಮ
ಬೆಂದು, ಕಂಗೆಟ್ಟು ನೋಡುತ್ತೇವೆ
ಹಡೆದ ತಾಯಿಯನ್ನೇ ಕೊಲ್ಲಲು ಇಂದು
ಮೇರೆ ಮೀರಿ ಮಿರಿ ಮಿರಿ ಬೆಳೆದಿದ್ದಳು
ರಾಷ್ಟ್ರಕೂಟ-ಚಾಲುಕ್ಯರ ಕಾಲದಲ್ಲಿ
ಅಂದು, ಕಂಡಳು ಕನ್ನಡಮ್ಮ ವಿಜಯ
ನಗರ ಆಳ್ವಿಕೆಯಲ್ಲಿ ವಿಜಯ ಸಿಂಧು
ನೀಚರ ಕೈಯಿಂದ ಬಿಡಿಸಿ ಬೆಳೆಸಿದರು
ವಚನಕಾರರು ಉತ್ತುಂಗಕ್ಕೆ ಕನ್ನಡ
ಬಿಂದು, ರಾಜ-ರಾಣಿಯರು ಕುಲತಿಲಕೆ
ಕಾವಲಕ್ಕಾಗಿ ಪ್ರಾಣವನ್ನು ಅರ್ಪಿಸಿದರು
ಶತ್ರುಗಳನ್ನು ಕೊಂದು
ಕಲ್ಪ ಕನ್ನಡ ಕಡಲೊಳು ಜನನ
ಏಕಾದೇವು ಅವಳೊಡಲಿಗೆ ರಾವಣ
ಮಾತೃ ಭಾಷೆಯ ಜೀವಂತ ಸಮಾಧಿ
ನಾವೇ ನಮ್ಮ ಬದುಕಿನ ಹಾದಿಗೆ ವ್ಯಾಧಿ
ರಚನೆ:ಸ.ಭೀ.ಮಾಳಗೊಂಡ (ಪೊಲೀಸ್
ಇನ್ಸ್ಪೆಕ್ಟರ್ ಹುಬ್ಬಳ್ಳಿ