ಆನೇಕಲ್ –
ಪಂಚಾಯಿತಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ತರಗತಿಯೊಳಗೆ ಪಾಠ ಕೇಳುತ್ತಿದ್ದ ಮಕ್ಕಳಿಗೆ ತೊಂದರೆ ಯಾಗಿದೆ.ಹೌದು ಆನೇಕಲ್ ತಾಲೂಕಿನ ಮಂಟಪ ಗ್ರಾಮ ಪಂಚಾಯತಿ ವತಿಯಿಂದ ಶಾಲೆಯ ಆವರಣದಲ್ಲಿ ಗ್ರಾಮ ಸಭೆ ಆಯೋಜನೆ ಮಾಡಿದ್ದರು ತರಗತಿ ನಡೆಯುತ್ತಿದ್ದರೂ ಆವರಣದಲ್ಲಿ ಜೋರಾಗಿ ಮೈಕ್ ಬಳಸಿದ್ದಾರೆ.ಇದರಿಂದ ಮಕ್ಕಳ ಪಾಠ ಕೇಳಲು ಸಾಧ್ಯವಾಗದೆ ಪರದಾಟ ಅನುಭವಿ ಸುತ್ತಿದ್ದಾರೆ.
ಶಾಲೆಯ ಆವರಣದಲ್ಲಿ ಗ್ರಾಮಸಭೆ ನಡೆಸಲು ಬಿಇಒ ಯಾವುದೇ ಅನುಮತಿ ನೀಡಿಲ್ಲ.ಮುಖ್ಯ ಶಿಕ್ಷಕರಿಗೂ ಸರಿಯಾದ ಮಾಹಿತಿ ನೀಡದೆ ಗ್ರಾಮಸಭೆ ಆಯೋಜನೆ ಮಾಡಿದ್ದಾರೆ.ಪಂಚಾಯತಿ ಪಿಡಿಓ ನಿರ್ಲಕ್ಷದಿಂದ ಗ್ರಾಮಸ ಭೆ ನಡೆದಿದೆ.ಗ್ರಾಮ ಸಭೆಯಲ್ಲಿದ್ದ ಜನಪ್ರತಿನಿಧಿಗಳ ನಿರ್ಲಕ್ಷವೂ ಕಾರಣವಾಗಿದೆ.