ಧಾರವಾಡ –
ಧಾರವಾಡದ ಹೊಸ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ ಎಂಬೊದಕ್ಕೆ ಬೆಳ್ಳಂ ಬೆಳಿಗ್ಗೆ ಕಂಡು ಬಂದ ಚಿತ್ರಣವೇ ತಾಜಾ ಸಾಕ್ಷಿ.ಹೌದು ಸ್ವಚ್ಚತೆ ಕಾಣದೇ ಬಸ್ ನಿಲ್ದಾಣ ಗಲೀಜು ಆಗಿ ಕಾಣುತ್ತಿದೆ ಎನ್ನೊದಕ್ಕೆ ಎಲ್ಲೆಂದರಲ್ಲಿ ಬಿದ್ದ ಕಸ ಸತ್ತ ಇಲಿಗಳು ನೀರಿನ ಖಾಲಿ ಬಾಟಲ್ ಗಳು ಸಾಕ್ಷಿ
ಬೆಳಗಾಗುತ್ತಿದ್ದಂತೆ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರು ಇಲ್ಲಿಗೆ ಬರುತ್ತಾರೆ ಹೋಗುತ್ತಾರೆ ಹೀಗಿರುವಾಗ ಬಸ್ ನಿಲ್ದಾಣ ವನ್ನು ಸ್ವಚ್ಚತೆ ಮಾಡಬೇಕು ಕ್ಲೀನ್ ಆಗಿ ಇಡಬೇಕು ಎಂಬೊಂದನ್ನು ಅಧಿಕಾರಿಗಳು ಮರೆತಂತೆ ಕಾಣುತ್ತಿದೆ ಎಲ್ಲೆಂದರಲ್ಲಿ ಕಸ ಸಾರ್ವಜನಿಕರು ತಿರುಗಾಡುವ ಜಾಗದಲ್ಲಿ ಸತ್ತ ಇಲಿ ಗಳು ಬಿದ್ದಿರುವ ಚಿತ್ರಣ ಧಾರವಾಡದ ಹೊಸ ಬಸ್ ನಿಲ್ದಾಣ ದಲ್ಲಿ ಕಂಡು ಬಂದಿತು
ಇಲ್ಲಿಗೆ ಬರುವ ಇಲ್ಲಿಗೆ ಬಂದು ಇಳಿದುಕೊಂಡು ಹೋಗುವ ಸಾರ್ವಜನಿಕರು ಮೂಗಿನ ಮೇಲೆ ಕೈ ಇಟ್ಟುಕೊಂಡು ಇದೇನಾ ಧಾರವಾಡದ ಹೊಸ ಬಸ್ ನಿಲ್ದಾಣ ದ ವ್ಯವಸ್ಥೆ ಎನ್ನುತ್ತಾ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಹೋಗಿರುವ ಚಿತ್ತಣ ಬೆಳ್ಳಂ ಬೆಳಿಗ್ಗೆ ಕಂಡು ಬಂದಿತು
ಸುದ್ದಿ ಸಂತೆ ನ್ಯೂಸ್ ಧಾರವಾಡ…..























