ಜಮಖಂಡಿ –
ಶೈಕ್ಷಣಿಕ ವರ್ಷ ಶಾಲೆಗಳು ಆರಂಭಗೊಂಡರು ನಾಡಿನ ಶಿಕ್ಷಕರನ್ನು ಇಲಾಖೆ ಮತ್ತು ಅಧಿಕಾರಿ ಗಳು ಮಾತ್ರ ಬಿಡುತ್ತಿಲ್ಲ. ಹೌದು ಈವರೆಗೆ ಕೋವಿಡ್ ಮಹಾಮಾರಿಯಿಂದಾಗಿ ಕಂಗಾಲಾಗಿರುವ ಶಿಕ್ಷಕರ ಈಗಷ್ಟೇ ಶಾಲೆಗಳತ್ತ ಮುಖ ಮಾಡಿದ್ದು ಬಿಡುವಿಲ್ಲದ ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಇದು ಒಂದು ವಿಚಾರವಾದರೆ ಇನ್ನೂ ಇದರ ನಡುವೆಯೂ ಇಲಾಖೆಯ ಅಧಿಕಾರಿಗಳು ಶಿಕ್ಷಕರಿಗೆ ಮತ್ತೊಂದು ಕೆಲಸವನ್ನು ಹಚ್ಚಿದೆ.
ಹೌದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಜಮಖಂಡಿ ಇಲಾಖೆ ಸಧ್ಯ ಶಿಕ್ಷಕರಿಗೆ ಮತ್ತೊಂದು ಕರ್ತವ್ಯಕ್ಕೆ ನಿಯೋಜನೆ ಮಾಡಿದೆ.ಜಮಖಂಡಿ ತಾಲೂಕಿನ ಬರುವ ಸರಕಾರಿ,ಅನುದಾನಿತ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖ್ಯ ಗುರುಗಳು ಹಾಗೂ ವಲಯ ಸಂಪನ್ಮೂಲ ವ್ಯಕ್ತಿಗಳು, ನೋಡಲ್ ಅಧಿಕಾರಿಗಳು.ಕೃಷ್ಣ ನದಿಗೆ ಮಹಾಪೂರ ಬಂದ ಹಿನ್ನಲೆಯಲ್ಲಿ ಹಲವಾರು ಹಳ್ಳಿಗಳು ಮುಳುಗಡೆಯಾಗಿರುತ್ತವೆ.ಮುಳುಗಡೆಯಾದ ಗ್ರಾಮಗಳಲ್ಲಿ ಹಾಗೂ ಪಕ್ಕದ ವಸತಿ ಪ್ರದೇಶಗಳಲ್ಲಿ ಕಾಳಜಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.ಆ ಸ್ಥಳದಲ್ಲಿ ಶಿಕ್ಷಕರನ್ನು ಹಾಗೂ ಮುಖ್ಯೋಪಾಧ್ಯಾಯ ರನ್ನು ನಿಯೋಜಿಸಲಾಗಿದೆ. ಕಾರಣ ನಿಯೋಜನೆ ಗೊಂಡ ಶಿಕ್ಷಕರು ಕಡ್ಡಾಯವಾಗಿ ಹಾಜರಿದ್ದು ಎಲ್ಲ ಕಾರ್ಯವನ್ನು ವ್ಯವಸ್ಥಿತವಾಗಿ ನಡೆಸಿಕೊಂಡು ಹೋಗಲು ಆದೇಶಿಸಿದೆ ಹಾಗೂ ಶಿಕ್ಷಕರಿಗೆ ವಹಿಸಿ ಕೊಟ್ಟು ಕಾರ್ಯಗಳನ್ನು ವ್ಯವಸ್ಥಿತವಾಗಿ ನಿಭಾಯಿ ಸಲು ಜಮಖಂಡಿ ಬಿಇಒ ಅವರು ಸೂಚಿಸಿದ್ದಾರೆ. ಈಗಾಗಲೇ ಒಂದು ಕಡೆಗೆ ಶಿಕ್ಷಕರ ವರ್ಗಾವಣೆ ಮತ್ತೊಂದು ಕಡೆ ಶೈಕ್ಷಣಿಕ ಚಟುವಟಿಕೆಗಳು ಇದರ ನಡುವೆ ಈ ಒಂದು ಕೆಲಸ ಹೀಗಾಗಿ ಶಿಕ್ಷಕರು ದಾರಿ ಕಾಣದೆ ಕಂಗಾಲಾಗಿದ್ದಾರೆ
ಶಿಕ್ಷಕರ ಪರವಾಗಿ ಧ್ವನಿ ಎತ್ತ ಬೇಕಾದ ಸಂಘದ ಮುಖಂಡರು ಮೌನವಾಗಿದ್ದಾರೆ ಇತ್ತ ನಮ್ಮ ಗೋಳು ಯಾರಿಗೆ ಹೇಳೊಣ ಎಂದುಕೊಂಡು ಶಿಕ್ಷಕರಿದ್ದಾರೆ