ಹಾಸನ –
ಸ್ನೇಹಿತನಿಗೆ ವಂಚಿಸಿದ್ದ ಖತರ್ನಾಕ್ ಕಿಲಾಡಿ ಆರೋಪಿಯನ್ನು ಹಾಸನದಲ್ಲಿ ಬಂಧಿಸಲಾಗಿದೆ. ಆರೋಪಿಯ ಖತರ್ನಾಕ್ ಕೃತ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ. ಹೌದು ಗೆಳೆಯನ ಬಳಿ ಕಾಳು ಮೆಣಸು ಖರೀದಿಸಿ ನಂತರ ಅವುಗಳನ್ನು ಮಾರಾಟ ಮಾಡಿ ಈಗ ಪೊಲೀಸರ ಕೈಗೆ ಸಿಕ್ಕಿ ಅತಿಥಿಯಾಗಿದ್ದಾನೆ ತಾರಿಕ್. ತಾರಿಕ್ ಅರೆಹಳ್ಳಿಯ ನಿವಾಸಿ ಇನ್ನೂ ದಿನೇಶ್ ಸಕಲೇಶಪುರ ನಿವಾಸಿ. ತುಂಬಾ ದಿನಗಳಿಂದ ಇಬ್ಬರು ಸ್ನೇಹಿತರಾಗಿದ್ದರು. ದಿನೇಶ್ ಗೆಳೆಯನಾದ ತಾರೀಕ್ ಗೆ ತಾನು ಬೆಳೆದ ಕಾಳು ಮೆಣಸನ್ನು ನೀಡಿದ್ದಾರೆ. ತನ್ನ ಗೆಳೆಯ ದಿನೇಶನ ಬಳಿ ಕಾಳು ಮೆಣಸನ್ನು ಖರೀದಿ ಮಾಡಿದ ತಾರೀಕ್ ನಂತರ ಮಾರಾಟ ಮಾಡಿ ಅದರಿಂದ ಬಂದ 16 ಲಕ್ಷ ರೂಪಾಯಿಯನ್ನು ದಿನೇಶ್ ಗೆ ಕೊಡದೆ ವಂಚನೆಗೆ ಸ್ಕೆಚ್ ಹಾಕಿದ್ದ ದುಷ್ಟ ಗೆಳೆಯ ತಾರಿಕ್ ನ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಕಾಳು ಮೆಣಸು ಖರೀದಿ ಮಾಡಿದ್ದ ಬೇಲೂರು ತಾಲ್ಲೂಕಿನ ಅರೆಹಳ್ಳಿಯ ಮೊಹಮ್ಮದ್ ತಾರೀಕ್ ಮೆಣಸು ಮಾರಾಟ ಮಾಡಿ ವಾಪಸ್ ಬರೋ ವೇಳೆ ಕಾರು ಅಪಘಾತವಾಗಿ ಹಣ ಕಳೆದುಕೊಂಡು ನಾಟಕವನ್ನು ಮಾಡಿದ್ದ.
ತಾರಿಕ್ ತಾನೇ ಕಾರು ಅಪಘಾತವಾದಂತೆ ನಿಲ್ಲಿಸಿ ಆಸ್ಪತ್ರೆಗೆ ಕೂಡಾ ದಾಖಲಾಗಿದ್ದ .ನಂತರ ಆಸ್ರತ್ರೆ ಸೇರಿದ ಮೇಲೆ ಕಾರು ಅಪಘಾತವಾಗಿದೆ ಆ ಒಂದು ಸಮಯದಲ್ಲಿ ಯಾರೋ ಅಪರಿಚಿತರು ಹಣವನ್ನು ಲಪಟಾಯಿಸಿಕೊಂಡು ಹೋಗಿದ್ದಾರೆ. ಎಂದು ತಾರೀಕ್ ದಿನೇಶ್ ಗೆ ಪೊನ್ ಮಾಡಿ ಹೇಳಿದ್ದಾನೆ. ತಾರೀಕ್ ನ ಮಾತಿನಲ್ಲಿ ನಂಬಿಕೆ ಕಾಣದ ದಿನೇಶ್ ಅರೆಹಳ್ಳಿಯ ಪೊಲೀಸ್ ಠಾಣೆಗೆ ಹೋಗಿ ಆಗಿರುವ ವಿಚಾರವನ್ನು ಪೊಲೀಸರ ಮುಂದೆ ಹೇಳಿದ್ದಾನೆ. ಆಯಿತು ಬಿಡಿ ಎಂದುಕೊಂಡ ಅರೆಹಳ್ಳಿಯ ಪೊಲೀಸರು ನಂತರ ತಾರೀಕ್ ನನ್ನು ಕರೆದು ವಿಚಾರಣೆ ಮಾಡಿದ್ದಾಗ ಬಣ್ಣ ಬಯಲಾಗಿದೆ. 16 ಲಕ್ಷ ರೂಪಾಯಿ ವಂಚನೆಗೆ ಸ್ಕೇಚ್ ಆಗಿದ್ದ ಖತರ್ನಾಕ್ ತಾರೀಕ್ ನ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ.
ಇನ್ನೂ ಇತ್ತ ಗೆಳೆಯನೆಂದು ನಂಬಿದ್ದ ದಿನೇಶ್ ಗೆ ತಾರೀಖ್ ನ ವಂಚನೆಯ ಪುರಾಣವನ್ನು ಪೊಲೀಸರು ಬಯಲು ಮಾಡಿ ಆರೋಪಿಯನ್ನು ಬಂಧಿಸಿರುವ ಇನಸ್ಪೇಕ್ಟರ್ ಸಿದ್ದರಾಮೇಶ್ವರ , ಪಿಎಎಸೈ ಮಹೇಶ್ ತಾರೀಕ್ ನ ವಂಚನೆಯ ಪುರಾಣವನ್ನು ಬಯಲು ಮಾಡಿ ಆರೋಪಿಯನ್ನು ಬಂಧಿಸಿ 16 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡು ಮರಳಿ ದಿನೇಶ್ ನಿಗೆ ನೀಡಿದ್ದಾರೆ.
ಖತರ್ನಾಕ್ ವಂಚಕ ಗೆಳೆಯ ತಾರೀಕ್ ನನ್ನು ಜೈಲಿಗೆ ಅಟ್ಟಿದ್ದಾರೆ.