ಬೆಂಗಳೂರು –
ಸಿಡಿ ಲೇಡಿ ಮತ್ತೊಮ್ಮೆ ಬೆಂಗಳೂರಿನ ಪೊಲೀಸ್ ಆಯುಕ್ತರಿಗೆ ಪತ್ರವನ್ನು ಬರೆದಿದ್ದಾಳೆ. ಹೌದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಸಂತ್ರಸ್ತೆ ಯುವತಿ ಮತ್ತೆ ಸಿಡಿದೆದ್ದಿದ್ದಾರೆ.

ತನ್ನನ್ನು ಮಾತ್ರ ದಿನವೂ ವಿಚಾರಣೆ ಮಾಡಿ, ಆರೋಪಿ ರಮೇಶ್ ಜಾರಕಿಹೊಳಿಯವರನ್ನು ವಿಚಾರಣೆ ಮಾಡಲಾಗುತ್ತಿರುವುದು ಎಷ್ಟು ಸರಿ ಎಂದು ಲೇಡಿ ಪತ್ರದಲ್ಲಿ ಉಲ್ಲೇಖ ಮಾಡಿದ್ದಾಳೆ.

ಇನ್ನೂ ಪ್ರಮುಖವಾಗಿ ಆರೋಪಿಯನ್ನು ಕೇವಲ ಮೂರು ಗಂಟೆ ಮಾತ್ರ ವಿಚಾರಣೆ ನಡೆಸಲಾಗಿದೆ. ನನ್ನ ಹೆಸರು ಉಲ್ಲೇಖವಾಗದಿದ್ದರೂ ಪಿಜಿಯಲ್ಲಿ ಪರಿಶೀಲನೆ ನಡೆಸಲಾಗಿದೆ. ಪಿಜಿಯಲ್ಲಿನ ಸಾಕ್ಷ್ಯ ನಾಶ ಮಾಡಿದ್ದಾರೆ ಎಂದು ಬರೆದು ಆಕ್ರೋಶವನ್ನು ವ್ಯಕ್ತಪಡಿಸಿದರು

ಇದರೊಂದಿಗೆ ಎಸ್‌ಐಟಿ ಅಧಿಕಾರಿಗಳು ರಾಜ್ಯ ಸರ್ಕಾರದ ಒತ್ತಡಕ್ಕೆ ಮಣಿದಿದ್ದಾರೆ ಎಂಬುದಾಗಿ ಆರೋಪಿಸಿ ಬೆಂಗಳೂರು ನಗರ ಕಮೀಷನರ್ ಗೆ ಪತ್ರದಲ್ಲಿ ಕಿಡಿಕಾರಿದ್ದಾರೆ.


ಈ ಕುರಿತಂತೆ ಸಿಡಿ ಸಂತ್ರಸ್ತ ಯುವತಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಗೆ 3 ಪುಟಗಳ ಪತ್ರ ಬರೆದಿದ್ದು, ಆರೋಪಿಯನ್ನು ರಕ್ಷಿಸು ವುದಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ.

ಒಟ್ಟಾರೆ ಈಗಾಗಲೇ ಸತತವಾಗಿ ವಿಚಾರಣೆ ಎದುರಿ ಸಿರುವ ಸಿಡಿ ಲೇಡಿ ಈಗ ಮತ್ತೆ ಪತ್ರವನ್ನು ಬರೆದು ಸಿಡಿದೆದ್ದಿದ್ದಾಳೆ ಇನ್ನೂ ಮತ್ತೆನು ಬೆಳವಣಿಗೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕು.
