ಮಂಡ್ಯ –
ಮೊಬೈಲ್ ನ್ನು ಶಾಲೆಗೆ ತಗೆದುಕೊಂಡು ಬಂದಿದ್ದ ವಿದ್ಯಾರ್ಥಿ ನಿಯೊಬ್ಬಳಿಗೆ ಮುಖ್ಯ ಶಿಕ್ಷಕಿ ಯೊಬ್ಬರು ಬಟ್ಟೆ ಬಿಚ್ಚಿ ರೂಮ್ ನಲ್ಲಿ ಕೂಡಿ ಹಾಕಿರುವ ಘಟನೆ ಮಂಡ್ಯದಲ್ಲಿ ನಡೆದಿದೆ ಹೌದು ಜಿಲ್ಲೆಯ ಗಣಂಗೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ.ವಿದ್ಯಾರ್ಥಿನಿ ಬಟ್ಟೆ ಬಿಚ್ಚಿ ರೂಂನಲ್ಲಿ ಕೂಡಿಹಾಕಿದ್ದಾರೆ ಈ ಒಂದು ಶಾಲೆಯ ಮುಖ್ಯ ಶಿಕ್ಷಕಿ
ಇತ್ತೀಚಿಗೆ ಶಾಲೆಗಳಲ್ಲಿ ಒಬ್ಬರು ಇಬ್ಬರು ಶಿಕ್ಷಕರು ಮಾಡಿದ ಇಂತಹ ಅನಾಗರಿಕತೆಯ ವರ್ತಿಸುತ್ತಿರುವ ಘಟನೆ ಯಿಂದಾಗಿ ಸಮುದಾಯಕ್ಕೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಾರೆ ಇದಕ್ಕೆ ಇಂತಹದೇ ಘಟನೆಯೊಂದು ಜಿಲ್ಲೆಯ ಗಣಂಗೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದಿದೆ ಶಾಲೆಗೆ ಮೊಬೈಲ್ ತಂದ ಒಂದೇ ಕಾರಣಕ್ಕೆ ಮುಖ್ಯ ಶಿಕ್ಷಕಿ ಸ್ನೇಹಲತಾ ವಿದ್ಯಾರ್ಥಿನಿಗೆ ಬಟ್ಟೆ ಬಿಚ್ಚಿಸಿ ಕೊಠಡಿಯಲ್ಲಿ ಕೂಡಿ ಹಾಕಿದ್ದಾರಂತೆ
ಪ್ರಸ್ತುತ ವಿದ್ಯಾರ್ಥಿನಿಯು ಎಂಟನೇ ತರಗತಿಯಲ್ಲಿ ಓದುತ್ತಿದ್ದು ಘಟನೆಯು ಕಳೆದ ಒಂದು ವಾರದ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಮೊಬೈಲ್ ತಂದಿ ರೋದನ್ನ ಗಮನಿಸಿದ ಮುಖ್ಯ ಶಿಕ್ಷಕಿ ವಿದ್ಯಾರ್ಥಿನಿಯನ್ನು ಬೇರೆ ಕೊಠಡಿಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿ ದ್ದಾರೆ ಎಂದು ವಿದ್ಯಾರ್ಥಿನಿಯು ಮುಖ್ಯ ಶಿಕ್ಷಕಿ ವಿರುದ್ದ ಆರೋಪ ಮಾಡಿದ್ದಾರೆ.
ಸದ್ಯ ಮುಖ್ಯ ಶಿಕ್ಷಕಿಯ ವಿರುದ್ದ ದೂರು ನೀಡಲು ಪೋಷ ಕರು ಮುಂದಾಗಿದ್ದಾರೆ.ಬಾಲಕಿಯನ್ನು ಅಮಾನವೀಯ ವಾಗಿ ನಡೆಸಿಕೊಂಡಿರೊ ಮುಖ್ಯಶಿಕ್ಷಕಿಯ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಪೋಷಕರು ಒತ್ತಾಯಿಸುತ್ತಿದ್ದಾರೆ.