ಮಂಗಳೂರು –
ಮಹಿಳೆ ಮತ್ತು ಮಗುವಿದ್ದ ಕಾರಿನ ಟೈರ್ ಪಂಕ್ಚರ್ ಆಗಿದ್ದು, ಅದನ್ನು ಗಮನಿಸಿದ ಮಂಗಳೂರು ದಕ್ಷಿಣ ಸಂಚಾರ (ನಾಗುರಿ) ಠಾಣೆ ಪೊಲೀಸರು ಬೇರೆ ಟೈರ್ ಅಳವಡಿಸಿ ಮಾನವೀಯತೆ ಮೆರೆದರು.
ರವಿವಾರ ಸಂಜೆ 7 ಗಂಟೆಯ ಸುಮಾರಿಗೆ ಕುಂದಾಪುರ ಮೂಲದ ಮಹಿಳೆ ನಾಗುರಿ ಕಡೆಯಿಂದ ಮಂಗಳೂರು ನಗರದ ಕಡೆಗೆ ಎಳೆಯ ಮಗುವಿನ ಜೊತೆಗೆ ಕಾರಿನಲ್ಲಿ ತೆರಳುತ್ತಿದ್ದರು
ಈ ಸಂದರ್ಭ ಪಂಪ್ ವೆಲ್ ಸಮೀಪ ಟೈರ್ ಪಂಕ್ಚರ್ ಆಗಿತ್ತು.ಇದೇ ಸಂದರ್ಭ ಹೈವೇ ಪ್ಯಾಟ್ರಲ್ ಸ್ಥಳದಲ್ಲಿದ್ದು, ಮಹಿಳೆಯ ಅಸಹಾಯಕತೆಯನ್ನು ಗಮನಿಸಿದ ಸಂಚಾರ ಪೊಲೀಸರು ತಕ್ಷಣ ಕಾರಿನತ್ತ ಧಾವಿಸಿ ಟೈರ್‌ನ್ನು ಬದಲಿಸಿ ಮಾನವೀಯತೆ ಮೆರೆದರು.ಈ ಸಂದರ್ಭ ಸಂಚಾರ ಠಾಣೆ ಎಎಸ್‌ಐ ಅಲ್ಬರ್ಟ್ ಲಸ್ರಾದೋ, ಸಿಬ್ಬಂದಿ ಮಹೇಶ್ ಹಾಗೂ ಹೋಂಗಾರ್ಡ್ ಆಸೀಫ್ ಇದ್ದರು.
ಕರ್ತವ್ಯ ಅಷ್ಟೇ ಜವಾಬ್ದಾರಿ ಅಲ್ಲದೇ ಇದರೊಂದಿಗೆ ಇದು ಕೂಡಾ ಅದಕ್ಕಿಂತ ದೊಡ್ಡ ಸೇವೆ ಎಂದು ಕೊಂಡು ಸಹಾಯ ಮಾಡಿರುವ ಕೆಲಸ ಮೆಚ್ಚುವಂ ತಹದ್ದು