This is the title of the web page
This is the title of the web page

Live Stream

November 2022
T F S S M T W
 12
3456789
10111213141516
17181920212223
24252627282930

| Latest Version 8.0.1 |

State News

ಶಿಕ್ಷಕ ಮತದಾರರಿಗೆ ಹಂಚಲು ತಗೆದುಕೊಂಡು ಹೋಗುತ್ತಿದ್ದ ಹಣ ವಶ – ಚುನಾವಣೆಯಲ್ಲಿ ಕುರುಡು ಕಾಂಚನಾ ಸದ್ದು…..

Join The Telegram Join The WhatsApp

 


ವಿಜಯಪುರ

ವಿಧಾನ ಪರಿಷತ್ ಚುನಾವಣೆ ಹಿಂದಿನ ದಿನ ಶಿಕ್ಷಕರಿಗೆ ಹಣ ಹಂಚಲು ಮುಂದಾಗಿದ್ದ ಕಾಂಗ್ರೆಸ್ ನವರ ನಗದು ಸಮೇತ ಸಿಕ್ಕಿಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಹಂಚಲು ವಿಜಯಪುರದ ಗೋದಾವರಿ ಹೋಟೆಲ್ ಬಳಿ ವಾಹನ ದಲ್ಲಿ ಹಣ ತೆಗೆದುಕೊಂಡು ಹೋಗುತ್ತಿರುವಾಗ ಬೆಂಬಲಿ ಗರು ಸಿಕ್ಕಿಬಿದ್ದಿದ್ದಾರೆ.ಹಣ ಹಂಚಿಕೆ ಮಾಡಿ ಈ ಒಂದು ರೂಪದಲ್ಲಿ ಪ್ರಭಾವ ಬೀರಲು ಹೊರಟ ತಂತ್ರ ಬಯಲಾ ಗಿದೆ.ಈ ಸಂದರ್ಭದಲ್ಲಿ ಸಿಕ್ಕ ಚೀಲದಲ್ಲಿ ಹಣವಿದ್ದ ಲಕೋ ಟೆಗಳು ಸಿಕ್ಕಿವೆ.ಬಹಳಷ್ಟರಲ್ಲಿ ತಲಾ 10 ಸಾವಿರ ರೂ. ಇದ್ದು ಒಟ್ಟು 17.4 ಲಕ್ಷ ರೂ. ಪತ್ತೆಯಾಗಿವೆ. ಚುನಾವ ಣೆಯ ಹಿಂದಿನ ದಿನವಾದ ಇಂದು ರಾತ್ರಿ ಇದನ್ನು ಮತ ದಾರರಿಗೆ ನೀಡಿ ಪ್ರಭಾವ ಬೀರಲು ಯೋಜನೆ ಹಾಕಿಕೊ ಳ್ಳಲಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚುನಾವಣೆ ಅಧಿಕಾರಿ (ಎಫ್‌.ಎಸ್‌.ಟಿ)ಎ.ಎಸ್‌. ಕೋಲಾರ ಖಚಿತ ಮಾಹಿತಿ ಮೇರೆಗೆ ದಾಳಿ ನಡೆದಿದೆ.ಕನ್ನೂರನಿಂದ ಬರುವಾಗ ತಹಸೀಲ್ದಾರ್‌ ಕಚೇರಿಯಿಂದ ಕರೆ ಬಂತು. ವಾಹನವೊಂ ದರಲ್ಲಿ ಹಣ ಸಾಗಿಸುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸ ಲಾಯಿತು.ವಾಹನದಲ್ಲಿ ಒಟ್ಟು 17.40 ಲಕ್ಷ ರೂ.ಇದ್ದು ಕಾಂಗ್ರೆಸ್‌ ಅಭ್ಯರ್ಥಿಯ ಫೋಟೊ ಇವೆ ಎಂದರು.ಜಿಲ್ಲಾ ಚುನಾವಣೆ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ಅವರನ್ನು ಸಂಪರ್ಕಿಸಲಾಗಿದ್ದು ಚುನಾವಣೆ ಅಧಿಕಾರಿಗಳು ದಾಳಿ ನಡೆಸಿದ್ದು ಹಣ ವಶಕ್ಕೆ ಪಡೆದಿದ್ದಾರೆ.ತನಿಖೆ ನಡೆಯುತ್ತಿದೆ. ದೂರು ದಾಖಲಿಸಿದ ಬಳಿಕವೇ ಸಮಗ್ರ ಮಾಹಿಸಿ ಸಿಗಲಿದೆ ಎಂದರು.


Suddi Sante Desk

Leave a Reply