ಶಿಶುವಿನಹಾಳ –
ಶಿವಾನಂದ ಬಸಪ್ಪ ಅಂಗಡಿ ಅಂದರೆ ಸಾಕು ಶಿಶುವಿನಹಾಳ ಮತ್ತು ಅತ್ತಿಗೇರಿ ಗ್ರಾಮದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಪ್ರತಿಯೊಬ್ಬರು ಇವರ ಬಗ್ಗೆ ಹೇಳುತ್ತಿದ್ದರು.ಅಷ್ಟೊಂದು ಚಿರಪರಿಚತರಾಗಿದ್ದ ಅಂಗಡಿ ಗುರುಗಳು ಇನ್ನೂ ನೆನಪು ಮಾತ್ರ ಹೌದು 86ನೇ ವಯಸ್ಸಿನಲ್ಲಿ ಇವರು ಇಂದು ನಮ್ಮನ್ನಗಲಿದ್ದಾರೆ.
ವಯಸ್ಸಾಗಿದ್ದರು ತುಂಬಾ ಉತ್ಸಾಹದಿಂದ ಎಲ್ಲರೊಂದಿಗೆ ನಗು ನಗುತ್ತಾ ಇದ್ದ ಇವರು ಸಂಜೆ ಲಿಂಗೈಕ್ಯರಾಗಿದ್ದಾರೆ. ಹಾವೇರಿ ಜಿಲ್ಲೆಯ ಶಿಶುವಿನಹಾಳ ಗ್ರಾಮದಲ್ಲಿನ ಶ್ರೀ ಶರೀಫ ಶಿವಯೋಗೀಶ್ವರ ಪ್ರೌಢ ಶಾಲೆಯ ಪ್ರಥಮ ಮುಖ್ಯೋಪಾಧ್ಯರರಾಗಿ ಸೇವೆಯನ್ನು ಆರಂಭ ಮಾಡಿದ ಇವರು ಸುಧೀರ್ಘವಾಗಿ 26 ವರ್ಷಗಳ ಕಾಲ ವೃತ್ತಿಯೊಂ ದಿಗೆ ಶಾಲೆಯನ್ನು ಕಟ್ಟಿ ಬೆಳೆಸಿ ಹೆಸರನ್ನು ಮಾಡಿದರು.
ವಿದ್ಯೆಯನ್ನು ಅರೆಸಿ ಬಂದ ವಿದ್ಯಾರ್ಥಿಗಳಿಗೆ ವಿದ್ಯಾಧ್ಯಾನ ಅನ್ನದಾನದ ಮೂಲಕ ರಾಜ್ಯದ ಮೂಲೆ ಮೂಲೆಗಳಲ್ಲಿ ನೂರಾರು ಪ್ರತಿಭಾವಂತ ವಿದ್ಯಾರ್ಥಿಗಳನ್ನ ಹುಟ್ಟು ಹಾಕಿ ದರು.ಸಾಕಷ್ಟು ಪ್ರಮಾಣದಲ್ಲಿ ಶಿಷ್ಯ ಬಳಗವನ್ನು ಹೊಂದಿ ರುವ ಇವರು ಮುಖ್ಯೋಪಾಧ್ಯಯರಾಗಿ ನಿವೃತ್ತರಾದ ನಂತರ ಇದೇ ಶಾಲೆಯಲ್ಲಿ ಚೇರಮನ್ ರಾಗಿ ಕರ್ತವ್ಯವನ್ನು ಮಾಡುತ್ತಿದ್ದರು.
ಇದರೊಂದಿಗೆ ಚುಟುಕು ಸಾಹಿತ್ಯಕ ಸಾಹಿತಿಯಾಗಿದ್ದರು. ವಯಸ್ಸಾಗಿದೆ ಎನ್ನೊದನ್ನು ಬಿಟ್ಟರೆ ಈಗಲೂ ಕೂಡಾ ತುಂಬಾ ಉತ್ಸಾಹದಿಂದ ಎಲ್ಲರೊಂದಿಗೆ ಇದ್ದರು.ದಿನಾಂಕ 02-08-2022 ರಂದು ಮಧ್ಯಾಹ್ನ 12 ಗಂಟೆಗೆ ಸ್ವಗ್ರಾಮ ಅತ್ತಿಗೇರಿಯಲ್ಲಿ ಅಂತಿಮ ಯಾತ್ರೆ ನೆರವೇರಿಸಲಾಗುವುದು ಹೆಸ್ಕೂಲ್ ಪ್ರಾರಂಭಗೊಂಡ ಪ್ರಥಮ ಮುಖ್ಯೋಪಾಧ್ಯ ಯರಾಗಿ 28 ವರ್ಷಗಳ ಸುಧೀರ್ಘ ಹೆಡ್ ಮಾಸ್ಟರ್ ಆಗಿ ಸಾಕಷ್ಟು ಪ್ರಮಾಣದಲ್ಲಿ ಕಷ್ಟ ಪಟ್ಟು ಸಾಧನೆ ಮಾಡಿ ಶಾಲೆ ಯನ್ನು ಕಟ್ಟಿ ಜಿಲ್ಲೆ ಸೇರಿದಂತೆ ರಾಜ್ಯಾಧ್ಯಂತ ಅಪಾರ ಶಿಷ್ಯ ಬಳಗವನ್ನು ಕಟ್ಟಿ ಬೆಳೆಸಿದ್ದಾರೆ
ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸರಳ ವ್ಯಕ್ತಿತ್ವದ ಮಾದರಿಯಾಗಿದ್ದ ಇವರು ದೊಡ್ಡ ಕುಟುಂಬದಲ್ಲಿ ಬೆಳೆದು ಬಂದಿದ್ದರು. 86 ವಯಸ್ಸಿನಲ್ಲೂ ತುಂಬಾ ಉತ್ಸಾಹದಿಂದ ಇದ್ದರೂ ವಿದ್ಯಾರ್ಥಿ ಜೀವನಕ್ಕೆ ಮಾದರಿಯಾಗಿದ್ದರು ಮನು ಬಳಿಗೇರ ಸೇರಿದಂತೆ ದೊಡ್ಡ ದೊಡ್ಡ ಹುದ್ದೆಯಲ್ಲಿರುವ ವ್ಯಕ್ತಿಗಳು ಇವರ ಶಿಷ್ಯರಾಗಿದ್ದು ಒರ್ವ ಪುತ್ರಿ ಪತ್ನಿ ಅಪಾರ ಕುಟುಂಬದವನ್ನು ಅಗಲಿದ್ದಾರೆ.
ಅಲ್ಲದೇ ಎಲ್ಲದಕ್ಕಿಂತ ಮುಖ್ಯವಾಗಿ ಶಿಶುವಿನಹಾಳ ಮತ್ತು ಅತ್ತಿಗೇರಿ ಎರಡು ಗ್ರಾಮಗಳ ಜಿಲ್ಲೆಯ ಬಂಧು ಬಳಗವನ್ನು ಅಗಲಿದ್ದು ಇವರ ನಿಧನಕ್ಕೆ ಎಲ್ಲರೂ ಕಂಬನಿ ಮೀಡಿಯುತ್ತಿ ದ್ದಾರೆ.ಇವರ ನಿಧನಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ. ಬಿಜೆಪಿ ಯುವ ಮುಖಂಡ ಶರಣು ಅಂಗಡಿ ಸೇರಿದಂತೆ ಹಲವರು ಸಂತಾಪವನ್ನು ಸೂಚಿಸಿದ್ದಾರೆ.