ಹಾವೇರಿ –

ಹಾವೇರಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಿರೇಕೆರೂರು ತಾಲೂಕ ವಿಜಯ ಕರ್ನಾಟಕ ದಿನಪತ್ರಿಕೆಯ ವರದಿಗಾರರಾದ ರಾಮು ಮುದಿಗೌಡರು (55) ತಡ ರಾತ್ರಿ ಹಿರಿಯೂರು ಬಳಿ ರಸ್ತೆ ಅಪಘಾತದಲ್ಲಿ ನಿಧನ ರಾಗಿದ್ದಾರೆ.ಹೌದು ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಅವರ ಸಹೋದರಿಯನ್ನು ಆ್ಯಂಬು ಲೆನ್ಸ್ ನಲ್ಲಿ ಹಿರೆಕೆರೂರಿಗೆ ತೆಗೆದುಕೊಂಡು ಹೋಗುತ್ತಿ ದ್ದಾಗ ಹಿಂಬದಿಯಲ್ಲಿದ್ದ ವಾಹನ ಅಪಘಾತವಾಗಿ ಈ ದುರಂತ ಸಂಭವಿಸಿದೆ.ಇದರೊಂದಿಗೆ ಸಹೋ ದರ & ಸಹೋದರಿ ಸಾವಾಗಿರುವುದು ನೋವಿನ ಸಂಗತಿಯ ವಿಚಾರವಾಗಿದೆ

ಪತ್ನಿ ಮತ್ತು ಇಬ್ಬರು ಮಕ್ಕಳು,ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಹಿರೇಕೆರೂರ ತಾಲೂಕು ಕಸಾಪ ಅಧ್ಯಕ್ಷರಾಗಿದ್ದ ರಾಮು, ಹಿರೇಮೊರಬ ಗ್ರಾಮದ ವಿಎಸ್ಎಸ್ ಬ್ಯಾಂಕ್‌ನ ಅಧ್ಯಕ್ಷರಾಗಿ, ಹಿರೇಕೆರೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರಾಗಿ ಕೆಲಸ ಮಾಡುತ್ತಿ ಹಾವೇರಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾಗಿ,ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು.ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಹಾಗೂ ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡ ಲೆಂದು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮತ್ತು ಹಾವೇರಿ ಹುಬ್ಬಳ್ಳಿಯ ಎಲ್ಲಾ ಪತ್ರಕರ್ತ ರು ಪ್ರಾರ್ಥಿಸಿದ್ದಾರೆ.
