ಬೆಂಗಳೂರು –
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಈ ಹಿಂದೆ ಮಾಧ್ಯಮ ಸಲಹೆಗಾರರಾಗಿದ್ದ ಹಿರಿಯ ಪತ್ರಕರ್ತ ಮಹದೇವ ಪ್ರಕಾಶ್ (65) ಕೋವಿಡ್ ಗೆ ಬಲಿಯಾಗಿದ್ದಾರೆ.ಹೌದು ರಾಜ್ಯದಲ್ಲಿ ಹಿರಿಯ ಪತ್ರ ಕರ್ತರಾಗಿದ್ದ ಇವರು ಮುಖ್ಯಮಂತ್ರಿ ಯಡಿಯೂರ ಪ್ಪ ಅವರಿಗೆ ಮಾಧ್ಯಮ ಸಲಹೆಗಾರ ಆಗಿ ಈ ಹಿಂದೆ ಕೆಲಸವನ್ನು ಮಾಡ್ತಾ ಇದ್ದರು ಕಳೆದ ಹಲವಾರು ದಿನಗಳಿಂದ ಹಿಂದೆಯಷ್ಟೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು.

ಇನ್ನೂ ಕಳೆದ ಹತ್ತು ದಿನಗಳ ಹಿಂದೆ ಇವರಿಗೆ ಕೋವಿ ಡ್ ಸೋಂಕು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿ ದ್ದರು.ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದ ಇವರು ಇಂದು ಚಿಕಿತ್ಸೆ ಫಲಿಸದೇ ನಿಧ ನರಾಗಿದ್ದಾರೆ.ಇನ್ನೂ ಇವರ ಅಗಲಿಕೆಗೆ ನಾಡಿನ ಮೂಲೆ ಮೂಲೆಗಳಿಂದ ಪತ್ರಕರ್ತ ಮಿತ್ರರು ಮುಖ್ಯ ಮಂತ್ರಿ ಸೇರಿದಂತೆ ಹಲವರು ಭಾವಪೂರ್ಣ ನಮನ ವನ್ನು ಸಲ್ಲಿಸಿ ಸಂತಾಪವನ್ನು ಸೂಚಿಸಿದ್ದಾರೆ