ದೆಹಲಿ –
ಧಾರವಾಡದ ಜಿಲ್ಲಾ ಪಂಚಾಯತ ಸದಸ್ಯ ಯೊಗೀಶಗೌಡ ಕೊಲೆ ಪ್ರಕರಣದಲ್ಲಿನ ಸಿಬಿಐ ನ ತನಿಖೆಯನ್ನು ಪ್ರಶ್ನೆ ಮಾಡಿ ಮಾಜಿ ಸಚಿವ ವಿನಯ ಕುಲಕರ್ಣಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾ ಲಯ ವಜಾಗೊಳಿಸಿದೆ.ಹೌದು ಮಾಜಿ ಸಚಿವ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಿಚಾ ರಣೆ ಮಾಡಿ ಇಂದು ವಜಾಗೊಳಿಸಿದೆ.ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಗೆ ಮತ್ತೊಂದು ಭಾರೀ ಹಿನ್ನೆಡೆಯಾದಂತಾಗಿದೆ.ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಂಡಿದೆ

ಸಿಬಿಐ ತನಿಖೆಯ ಆದೇಶವನ್ನು ಪ್ರಶ್ನಿಸಿ ಈ ಒಂದು ಅರ್ಜಿ ಯನ್ನು ಮಾಜಿ ಸಚಿವ ವಿನಯ ಕುಲಕರ್ಣಿ ಸಲ್ಲಿಸಿದ್ದರು. ಈ ಹಿಂದೆ ಸಿಬಿಐ ತನಿಖೆಗೆ ಆದೇಶಿಸಿತ್ತು ರಾಜ್ಯ ಸರ್ಕಾರ ಹೀಗಾಗಿ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ರಿಟ್ ಸಲ್ಲಿಸಿದ್ದರು ವಿನಯ ಕುಲಕರ್ಣಿ. ಸುಪ್ರೀಂ ಕೋರ್ಟ್‌ನಿಂದ ವಿನಯ ರಿಟ್ ಅರ್ಜಿ ವಜಾಗೊಂಡಿದೆ. ಬೆಂಗಳೂರು ಕೋರ್ಟ್ ಆದೇಶವನ್ನು ಮತ್ತೆ ಎತ್ತಿ ಹಿಡಿದಿದೆ ಸುಪ್ರೀಂ ಕೋರ್ಟ್.ಇನ್ನೂ ಈ ಮುಂಚೆ ಸುಪ್ರೀಂಗೆ ಅರ್ಜಿ ಸಲ್ಲಿಸಿ ದ್ದರು ಈಗ ಮತ್ತೆ ವಿನಯ ಅವರಿಗೆ ಸುದೀರ್ಘ ವಿಚಾರ ಣೆಗೆ ಹೈಕೋರ್ಟ್‌ಗೆ ಸೂಚಿಸಿದ್ದು ಸುಪ್ರೀಂ ಆಗ ವಿನಯ ಅರ್ಜಿಯನ್ನು ವಜಾಗೊಳಿಸಿತ್ತು ಹೈಕೋರ್ಟ್ ರಾಜ್ಯ ಸರ್ಕಾ ರದ ಆದೇಶ ಎತ್ತಿ ಹಿಡಿದಿದ್ದು ಹೈಕೋರ್ಟ್‌ನ ಈ ತೀರ್ಪು ಪ್ರಶ್ನಿಸಿ ಪುನಃ ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು ವಿನಯ ಕುಲಕರ್ಣಿ. ಸುಪ್ರೀಂ ಕೋರ್ಟ್‌ನಲ್ಲಿಯೂ ವಿನಯಗೆ ಹಿನ್ನೆಡೆಯಾಗಿದ್ದು ಪ್ರಕರಣದಲ್ಲಿ ಈಗಾಗಲೇ ಜಾಮೀನಿನ ಮೇಲೆ ಹೊರಗಿದ್ದಾರೆ.