ಏಳನೇ ವೇತನ ಆಯೋಗ ವರದಿ ಬೇಗ ಜಾರಿಯಾಗಲಿದೆ 40% ಫಿಟ್ ಮೆಂಟ್ ಗೆ ಮನವಿ ಏನಾಯಿತು ಷಡಾಕ್ಷರಿ ಅವರೇ – ಮಧ್ಯಂತರ ಪರಿಹಾರದ ಮಾತು ಇಲ್ಲ ಫಿಟ್ ಮೆಂಟ್ ವಿಚಾರವು ಎಲ್ಲಿಗೆ ಬಂತು ರಾಜ್ಯಾಧ್ಯಕ್ಷರೇ…..

Suddi Sante Desk
ಏಳನೇ ವೇತನ ಆಯೋಗ ವರದಿ ಬೇಗ ಜಾರಿಯಾಗಲಿದೆ 40% ಫಿಟ್ ಮೆಂಟ್ ಗೆ ಮನವಿ ಏನಾಯಿತು ಷಡಾಕ್ಷರಿ ಅವರೇ – ಮಧ್ಯಂತರ ಪರಿಹಾರದ ಮಾತು ಇಲ್ಲ ಫಿಟ್ ಮೆಂಟ್ ವಿಚಾರವು ಎಲ್ಲಿಗೆ ಬಂತು ರಾಜ್ಯಾಧ್ಯಕ್ಷರೇ…..

ಏಳನೇ ವೇತನ ಆಯೋಗ ವರದಿ ಬೇಗ ಜಾರಿ ಯಾಗಲಿದೆ ಎಂಬ ಒತ್ತಾಯವನ್ನು ರಾಜ್ಯದ ಸರ್ಕಾರಿ ನೌಕರರು ಮಾಡತಾ ಇದ್ದಾರೆ ಹೌದು 40% ಫಿಟ್ ಮೆಂಟ್ ಗೆ ಮನವಿಯನ್ನು ಕೂಡಾ ಈ ಹಿಂದೆ ಷಡಾಕ್ಷರಿ ಅವರು ಮಾಡಿಕೊಂಡಿದ್ದರು ಇದು ಕೂಡಾ ಈವರೆಗೆ ಮಾತೆ ಇಲ್ಲ ಹೀಗಾಗಿ ಏನಾಯಿತು ಎಂಬ ಮಾತು ಕೇಳಿ ಬರುತ್ತಿವೆ

ಈ ಹಿಂದೆ ವೇತನ ಆಯೋಗವನ್ನು ಮೊದಲು ಐದು ವರ್ಷಗಳಿಗೆ ಘೋಷಣೆ ಮಾಡ್ತಿದ್ದರು ಆದರೆ ಮೊದಲ ಬಾರಿಗೆ ಈ ಬಾರಿ ನಾಲ್ಕು ವರ್ಷ ಏಳು ತಿಂಗಳಿಗೇ ಆಯೋಗ ರಚನೆಯಾಗಿದೆ. ಮೊದಲು ಐದು ವರ್ಷಕ್ಕೆ ಆಯೋಗ ರಚನೆಯಾ ದರೂ ಅದು ಕಾರ್ಯರೂಪಕ್ಕೆ ಬರಲು ಏಳೆಂಟು ವರ್ಷಗಳೇ ಆಗ್ತಿದ್ದವು.ಆದರೆ ಸರ್ಕಾರ ಈ ಬಾರಿ ಅವಧಿ ಮುನ್ನವೇ ಆಯೋಗವನ್ನು ರಚನೆ ಮಾಡಿದ್ದು ಅವಧಿ ಮುನ್ನವೇ ಆಯೋಗವನ್ನು ಅನುಮೋದನೆ ಮಾಡಲಿದೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿಎಸ್ ಷಡಾಕ್ಷರಿ ಹೇಳಿದ್ದಾರೆ.

ಇನ್ನೂ ಶೇ 40 ಫಿಟ್ ಮೆಂಟ್ ಲಾಭ ನೀಡಿದರೆ 11 ಲಕ್ಷ ಕುಟುಂಬಗಳಿಗೆ ಅನುಕೂಲವಾಗುತ್ತೆ ಎಂಬ ಒತ್ತಾಯವನ್ನು ಈ ಹಿಂದೆ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದ್ದರು ಈ ಒಂದು ವಿಚಾರವು ಕೂಡಾ ಇನ್ನೂ ಹಾಗೆ ಇದೆ ಏಳನೇ ವೇತನ ಆಯೋಗ ರಚನೆ ಮಾಡಿರು ವುದಕ್ಕೆ ರಾಜ್ಯ ಸರ್ಕಾರಿ ನೌಕರರು ಸಂತಸಗೊಂಡಿದ್ದು ಮಧ್ಯಂತರ ಪರಿಹಾರದ ಮಾತು ಇಲ್ಲ ಫಿಂಟ್ ಮೆಂಟ್ ವಿಚಾರವು ಇಲ್ಲ.  ಸರ್ಕಾರಿ ನೌಕರರಿಗೆ ಏಳನೇ ರಾಜ್ಯ ವೇತನ ಆಯೋಗ ರಚನೆ ಆಗಿದೆ 1952 ರಿಂದ ಈ ತನಕ ರಚನೆಯಾದ ಎಲ್ಲಾ ಆಯೋಗಗಳೂ ಸಹ ವಿಳಂಭವಾಗಿ ಜಾರಿಯಾಗಿವೆ.ನೌಕರರಿಗೆ ಸುಧಾರಣೆ,ಮೂಲಸೌಕರ್ಯ,ಹೊಸ ತಂತ್ರಜ್ಞಾನ ಬಳಕೆ ಹಿಂದಿನ ಪೇ ಕಮಿಷನ್ ಲ್ಲಿ ಸೇರಿಸಲಾಗಿತ್ತು

ಈ ವೇತನ ಆಯೋಗದಲ್ಲಿ ಅದ್ಯಾವುದನ್ನೂ ಸೇರಿಸಿಲ್ಲ.ಕೇವಲ ಸರ್ಕಾರಿ ನೌಕರರ ವೇತನ, ಭತ್ಯೆ ಹಾಗೂ ಪರಿಷ್ಕರಣೆಗೆ ಮಾತ್ರ ಅವಕಾಶ ನೀಡಲಾಗಿದೆ.ಈ ಆಯೋಗದಲ್ಲಿ ಕೇವಲ ನೌಕರರ ವೇತನ ಪರಿಷ್ಕರಣೆ ಅಂಶವನ್ನ ಮಾತ್ರ ಸೇರಿಸಲಾಗಿದೆ. ತುಂಬಾ ಸಮಯ ತೆಗೆದು ಕೊಳ್ಳೊದಿಲ್ಲ ಎಂಬ ಮಾತಿನ ನಡುವೆ ವೇತನ ಆಯೋಗವು ಚಟುವಟಿಕೆ ಗಳನ್ನು ಆರಂಭ ಮಾಡಿದೆ

ಯಾವ್ಯಾವ ಕೇಡರ್ ಗೆ ಎಷ್ಟು ವೇತನ ಹೆಚ್ಚು ಮಾಡಬೇಕು ಎಂಬುದನ್ನ ಚರ್ಚೆಯ ನಡುವೆ ವೇತನ ಸಮಿತಿ ಕಾರ್ಯವನ್ನು ಆರಂಭ ಮಾಡಿದೆ ಇಲಾಖಾವಾರು ಮುಖ್ಯಸ್ಥರೂ ಸೇರಿ ಇವತ್ತಿನ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಎಷ್ಟು ಪ್ರತಿಶತ ಫಿಟ್ ಮೆಂಟ್(ಫಿಟ್ ಮೆಂಟ್ ಫ್ಯಾಕ್ಟರ್) ನೀಡ ಬೇಕು ಎಂಬ ಚರ್ಚೆಯ ನಡುವೆ ಈ ಎಲ್ಲಾ ಕೆಲಸ ಗಳು ಬೇಗನೆ ಮುಗಿಯಲಿ ಸರ್ಕಾರಿ ನೌಕರರಿಗೆ ಇದರಿಂದ ಅನುಕೂಲ ಆಗಲಿ ಎಂಬ ಒತ್ತಾಯ ವನ್ನು ಸರ್ಕಾರಕ್ಕೆ ಮಾಡಲಾಗಿದೆ.

ಈ ಸಲ 40% ಫಿಟ್ ಮೆಂಟ್ ನೀಡಿದರೆ ಸುಮಾರು 12 ಸಾವಿರ ಕೋಟಿ ಹೆಚ್ಚುವರಿ ಹೊರೆಯಾಗಲಿದೆ.22% ಫಿಟ್ ಮೆಂಟ್ ಬೆನಿಫಿಟ್ ನೀಡಿದ್ರೆ ಸಿದ್ದರಾಮಯ್ಯ ಸರ್ಕಾರ 30% ಕೊಟ್ಟಿತ್ತು.ಈಗ ಬಸವರಾಜ್ ಬೊಮ್ಮಾಯಿ ಶೇ.40 ಫಿಟ್ ಮೆಂಟ್ ಲಾಭ ನೀಡಿದರೆ ಅನು ಕೂಲವಾಗುತ್ತೆ. ಐದು ಲಕ್ಷ ಸರ್ಕಾರಿ ನೌಕರರು, ಮೂರು ಲಕ್ಷ ನಿಗಮ ಮಂಡಳಿಯಲ್ಲಿ ಕೆಲಸ ಮಾಡುವ ನೌಕರರು ಹಾಗೂ ನಾಲ್ಕು ಲಕ್ಷದಷ್ಟು ನಿವೃತ್ತ ನೌಕರರೂ ಸೇರಿ ಸುಮಾರು 11 ಲಕ್ಷ ಕುಟುಂಬಗಳಿಗೆ ಅನುಕೂಲವಾಗುತ್ತೆ ಎಂದರು.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.