ಧಾರವಾಡ –
ಗ್ರಾಮೀಣ ಶಿಕ್ಷಕರ ಸಂಘದ ಧಾರವಾಡ ಜಿಲ್ಲಾ ಅಧ್ಯಕ್ಷರಾಗಿ ಎಸ್ ಎಫ್ ಪಾಟೀಲ ಆಯ್ಕೆ.
ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಧಾರವಾಡ ಜಿಲ್ಲೆಯ ಜಿಲ್ಲಾ ಅಧ್ಯಕ್ಷ ರಾಗಿ ಕಲಘಟಗಿಯ ಮಿಶ್ರಿಕೋಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎಸ್ ಎಫ್ ಪಾಟೀಲ ಅವಿರೋಧವಾಗಿ ಆಯ್ಕೆಯಾದರು
ಧಾರವಾಡದ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣ ದಲ್ಲಿ ಜರುಗಿದ ಆಜೀವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾದರು ಹಿಂದಿನ ಜಿಲ್ಲಾ ಅಧ್ಯಕ್ಷ ಅಕ್ಬರಲಿ ಸೋಲಾಪುರ ಇತ್ತೀಚಿಗೆ ವರ್ಗಾವಣೆ ಯಲ್ಲಿ ನಗರ ಪ್ರದೇಶದ ಶಾಲೆಯನ್ನು ಆಯ್ಕೆ ಮಾಡಿ ಕೊಂಡಿದ್ದರಿಂದ ಅವರಿಂದ ತೆರವಾದ ಸ್ಥಾನಕ್ಕೆ ಎಸ್ ಎಫ್ ಪಾಟೀಲ ಆಯ್ಕೆಯಾದರು
ರಾಜ್ಯ ಮಹಾಪೋಷಕರುಗಳಾದ ಗೋವಿಂದ ಜುಜಾರೆ, ಎಲ್ ಐ ಲಕ್ಕಮ್ಮನವರ ರಾಜ್ಯ ಗೌರವಾದ್ಯಕ್ಷರಾದ ಮಲ್ಲಿಕಾರ್ಜುನ ಉಪ್ಪಿನ ಜಂಟಿಯಾಗಿ ಅವರ ಹೆಸರನ್ನು ಘೋಷಿಸಿದರು, ಅವರ ಜೊತೆಗೆ ಜಿಲ್ಲಾ ಗೌರವಾದ್ಯಕ್ಷರಾಗಿ ಧಾರವಾಡ ತಾಲ್ಲೂಕಿನ ಅಗಸನ ಹಳ್ಳಿ ಶಿಕ್ಷಕ ಕೆ ಎಂ ಮುನವಳ್ಳಿ, ಖಜಾಂಚಿಯಾಗಿ ಡ್ಯಾನಿಯಲ್ ಗುಂಜಾಳ, ಅಕ್ಬರ್ ಅಲಿ ಸೋಲಾಪುರ ಅವರನ್ನು ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು,
ವಿಶೇಷ ಆಮಂತ್ರಿತರಾಗಿ ಆಗಮಿಸಿದ್ದ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಸತೀಶ ಪಿ ಕೆ ವಿಶೇಷ ಆಮಂತ್ರಿತರಾಗಿ ಆಗಮಿಸಿ, ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇದು ಗ್ರಾಮೀಣ ಪ್ರದೇಶದ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಹೋಗಲಾಡಿಸಲು ಹುಬ್ಬಳ್ಳಿ ಮಹಾನಗರದಲ್ಲಿ ಆರು ವರ್ಷಗಳ ಹಿಂದೆ ಜನಿಸಿದ ಸಂಘವಾಗಿದೆ,
ಈ ಸಂಘವು ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಮತ್ತು ತಾಲೂಕು ಘಟಕಗಳನ್ನು ರಚನೆ ಮಾಡಿ ಮೇಲಿಂದ ಮೇಲೆ ಶಿಕ್ಷಕರ ಸಭೆಗಳನ್ನು ಆಯೋಜಿಸಿ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಎಂದರು, ಜಿಲ್ಲಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎಸ್ ಎಫ್ ಪಾಟೀಲ,
ಮುಖ್ಯೋಪಾಧ್ಯಾಯರ ಭಡ್ತಿ ಮತ್ತು ಮೊಟ್ಟೆ ವಿತರಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲು ಅಧಿಕಾರಿಗಳಿಗೆ ಮನವಿ ಮಾಡುವೆ NPS ಹೋಗಲಾಡಿಸಿ, ಒಪಿಎಸ್ ಜಾರಿ ಹಾಗೂ PST ಶಿಕ್ಷಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಲು ಕೆಲಸ ಮಾಡುವೆ ಎಂದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..