ಬೆಂಗಳೂರು –
CM ಭೇಟಿಯಾದ ರಾಜ್ಯ ಸರ್ಕಾರಿ ನೌಕರರ ಸಂಘ ನಿಯೋಗ – 7ನೇ ವೇತನ ಆಯೋಗ ಜಾರಿಗೆ ಸೇರಿದಂತೆ ಹಲವಾರು ವಿಚಾರಗಳ ಕುರಿತಂತೆ ಮುಖ್ಯಮಂತ್ರಿಗೆ ಒತ್ತಾಯ ಮಾಡಿದ ಷಡಾಕ್ಷರಿ ನೇತ್ರತ್ವದಲ್ಲಿನ ಟೀಮ್
ರಾಜ್ಯದ ಸರ್ಕಾರಿ ನೌಕರರ ಕೆಲವೊಂದಿಷ್ಟು ಬೇಡಿಕೆಗಳ ಕುರಿತಂತೆ ರಾಜ್ಯದ ಮುಖ್ಯಮಂತ್ರಿ ಯವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ವರು ಭೇಟಿಯಾಗಿ ಚರ್ಚೆಯನ್ನು ಮಾಡಿದರು. ಹೌದು ಮುಖ್ಯಮಂತ್ರಿಯಾದ ನಂತರ ಮೊದಲ ಬಾರಿಗೆ ಷಡಾಕ್ಷರಿ ಅವರ ನೇತ್ರತ್ವದಲ್ಲಿನ ಟೀಮ್ ನ ಸದಸ್ಯರು ಮುಖ್ಯಮಂತ್ರಿ ಅವರನ್ನು ಭೇಟಿ ಯಾಗಿ ಕೆಲ ಬೇಡಿಕೆಗಳ ಕುರಿತಂತೆ ಮಾತುಕತೆ ಯನ್ನು ಮಾಡಿದರು.
ಇದೇ ವೇಳೆ ಮುಖ್ಯಮಂತ್ರಿಗಳಿಗೆ ಸರ್ಕಾರಿ ನೌಕರರ ಸಂಘದಿಂದ ಅಭಿನಂದನೆಗಳನ್ನು ಸಲ್ಲಿಸಲಾಯಿತು.ಸಿ ಎಸ್ ಷಡಾಕ್ಷರಿ ಅವರ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಅವ ರನ್ನು ಭೇಟಿಯಾಗಿ ಸಂಘದಿಂದ ಅಭಿನಂದಿಸಿ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಮನವಿ ಸಲ್ಲಿಸಲಾಯಿತು.
ಹೌದು ಪ್ರಮುಖವಾಗಿ 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಲು ಬಜೆಟ್ ನಲ್ಲಿ ಅನುದಾನ ಕಾಯ್ದಿರಿಸಬೇಕು.OPS ಯೋಜನೆ ಯನ್ನು ಜಾರಿಗೊಳಿಸಬೇಕು.ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊ ಳಿಸಬೇಕು.
ಸರ್ಕಾರಿ ನೌಕರರ ಅಂತರಜಿಲ್ಲಾ ವರ್ಗಾವಣೆಗೆ ಸಂಬಂಧಿಸಿದಂತೆ 16ಎ ನಿಯಮಗಳಿಗೆ ತಿದ್ದು ಪಡಿ ಮಾಡಿ ವರ್ಗಾವಣೆಗೆ ಅವಕಾಶ ಕಲ್ಪಿಸ ಬೇಕು ಸೇರಿದಂತೆ ಇನ್ನೂ ಕೆಲ ವಿಚಾರಗಳ ಕುರಿತಂತೆ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪರವಾಗಿ ಮುಖ್ಯಮಂತ್ರಿಯವರಿಗೆ ಮನವಿಯ ನ್ನು ಸಲ್ಲಿಸಲಾಯಿತು.
ಇನ್ನೂ ಸರ್ಕಾರಿ ನೌಕರರ ಸಂಘದ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ದರು.ಈ ಒಂದು ಸಮಯದಲ್ಲಿ ರಾಜ್ಯಾಧ್ಯಕ್ಷರೊಂ ದಿಗೆ ರಾಜ್ಯ ಘಟಕದ ಸರ್ವ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..