ಬೆಂಗಳೂರು –
ಶಿಕ್ಷಕರ ವರ್ಗಾವಣೆ ಆರಂಭಗೊಂಡಿದ್ದು ಈ ಒಂದು ವರ್ಗಾವಣೆ ಶಿಕ್ಷಕರಿಗೆ ಸಾಕಷ್ಟು ಪ್ರಮಾಣದಲ್ಲಿ ಅನುಕೂಲ ಆಗದ ಹಿನ್ನೆಲೆಯಲ್ಲಿ ವರ್ಗಾವಣೆ ಆರಂಭವಾಗಿದ್ದರು ಕೂಡಾ ವರ್ಗಾವಣೆ ಸಿಗದ ಹಿನ್ನೆಲೆಯಲ್ಲಿ ತುರ್ತಾಗಿ ಶಿವಮೊಗ್ಗ ಜಿಲ್ಲಾ ಶಿಕ್ಷಕರ ಸಂಘದವರು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು
ಹೌದು ಪ್ರಾ ಶಾ ಶಿ ಸಂಘ ಶಿವಮೊಗ್ಗ ಇವರು ಭೇಟಿಯಾಗಿ ಮಾತುಕತೆ ನಡೆಸಿದರು. ಪ್ರಮುಖವಾಗಿ ವರ್ಗಾವಣೆ ವಿಷಯ ಹಾಗೂ ಪದವೀದರ ಸಮಸ್ಯೆ ಕುರಿತು ಮಾತನಾ ಡಿದರು.ಏಪ್ರಿಲ್ ತಿಂಗಳಿನಲ್ಲಿ ತಾಲ್ಲೂಕಿನ ಒಳಗಡೆ ಸ್ಥಳ ಬದಲಾವಣೆಗೆ ಖಂಡಿತವಾಗಿಯೂ ಬದಲಾವಣೆಗೆ ಅವಕಾಶ ಕೊಡಿಸುತ್ತೇವೆ ಹಾಗೂ ಪರಸ್ಪರ ವರ್ಗಾವಣೆಗೂ ಅವಕಾಶ ಕೊಡಿಸುತ್ತೇವೆ ಹಾಗೂ ಒನ್ ಟೈಂ ಸೆಟ್ಲಮೆಂಟಗೆ ಜಿಲ್ಲೆಯಿಂದ ಜಿಲ್ಲೆಗೆ ಅವಕಾಶ ಕೊಡಿಸುತ್ತೇವೆ ಎಂದು ತಿಳಿಸಿದರು.ಇದರೊಂದಿಗೆ ಪಧವೀದರ ವಿಷಯವಾಗಿ ಗಂಭೀರ ಚರ್ಚೆ ನಡೆದು ಅದು ಸಧ್ಯದಲ್ಲಿಯೇ ಹಲವು ಬದಲಾವಣೆಯೊಂದಿಗೆ ಅನುಕೂಲಕರವಾಗುವ ರೀತಿಯಲ್ಲಿ ಬದಲಾವಣೆಯಾಗುತ್ತದೆ ಎನ್ನುವ ಭರವಸೆ ಕೊಟ್ಟರು.ಈ ಸಮಯದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಪದಾಧಿಕಾರಿಗಳು ತಾಲ್ಲೂಕು ಸಂಘದ ಅಧ್ಯಕ್ಷರು ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಹಾಜರಿದ್ದರು.