ಇಂಡಿ –
ರಾಜ್ಯದ ಬಜೆಟ್ ನಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ಸಿಗಲಿದೆ ಎಂಬ ಸುಳಿವನ್ನು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ನೀಡಿದ್ದಾರೆ.ಇಂಡಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕೇಂದ್ರ ಸರ್ಕಾರಿ ನೌಕರರಿಗೆ ಸಿಗುವ ವೇತನವು ರಾಜ್ಯ ಸರ್ಕಾರಿ ನೌಕರರಿ ಗೂ ನೀಡುವುದಾಗಿ ರಾಜ್ಯ ಸರ್ಕಾರ ಈ ಒಂದು ಬಜೆಟ್ ನಲ್ಲಿ ಘೋಷಣೆ ಮಾಡಲಿದೆ ಎಂದರು.

ಕೇಂದ್ರ ಸಮಾನ ವೇತನ ರಾಜ್ಯ ಸರ್ಕಾರಿ ನೌಕರರಿಗೆ ಈ ಬಜೆಟ್ ನಲ್ಲಿ ನೀಡದಿದ್ದರೆ ರಾಜ್ಯದ್ಯಂತ ಉಗ್ರವಾದ ಹೋರಾಟವನ್ನು ಮಾಡಿ ಅದನ್ನು ಪಡೆಯೊದಾಗಿ ಹೇಳಿದರು.ಇನ್ನೂ ಕಳೆದ ಅನೇಕ ವರ್ಷಗಳಿಂದ ಮಹಿಳಾ ನೌಕರರ ಸಾಕಷ್ಟು ಪ್ರಮಾಣದಲ್ಲಿ ಸಮಸ್ಯೆಗಳಿದ್ದು ಅವುಗಳ ಕುರಿತಂತೆ ಬಜೆಟ್ ನಲ್ಲಿ ಸಿಗುವ ಭರವಸೆಯನ್ನು ಅಧ್ಯಕ್ಷರು ಹೇಳಿದರು.