ರಾಜ್ಯದ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ನೀಡಿದ ಷಡಾಕ್ಷರಿ ಅವರು ಏಳನೇ ವೇತನದ ನಿರೀಕ್ಷೆ ಯಲ್ಲಿದ್ದ ನೌಕರರಿಗೆ ಸಿಹಿ ಸುದ್ದಿ…..

Suddi Sante Desk

ಬೆಂಗಳೂರು –

ರಾಜ್ಯ ಸರ್ಕಾರಿ ನೌಕರರಿಗೆ ಖುಷಿ ಸುದ್ದಿಯೊಂದನ್ನು ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ನೀಡಿದ್ದಾರೆ ಹೌದು ಬಹು ದಿನಗಳಿಂದ ನಿರೀಕ್ಷೆಯ ಲ್ಲಿದ್ದ ಏಳನೇ ವೇತನ ಆಯೋಗದ ಶಿಫಾರಸ್ಸಿನಡಿ ಹೊಸ ವೇತನ ಶ್ರೇಣಿ 2023ರ ಜನವರಿಯಿಂದ ಜಾರಿಯಾಗಲಿದೆ ಅದರ ನಿರೀಕ್ಷೆ ಯಲ್ಲಿ ನಾವಿದ್ದೇವಿ ಎಂದರು.

ಷಡಾಕ್ಷರಿ ಅವರು ಹೊಳಲ್ಕೆರೆ ಪಟ್ಟಣದಲ್ಲಿ ನಡೆದ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡುವ ವೇಳೆ ಈ ವಿಷಯ ತಿಳಿಸಿದರು.ಆಗಸ್ಟ್ ನಲ್ಲಿ ಏಳನೇ ವೇತನ ಆಯೋಗ ರಚಿಸಿ ವಿಧಾನಸಭಾ ಚುನಾವಣೆಯೊಳಗಾಗಿ ಹೊಸ ವೇತನ ಶ್ರೇಣಿ ಜಾರಿಗೊಳಿ ಸುವ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಹೇಳಿದರು.

ಅಲ್ಲದೆ ಶೀಘ್ರವೇ ಇ ಸೇವಾ ಪುಸ್ತಕ ವ್ಯವಸ್ಥೆ ಜಾರಿಗೆ ಬರಲಿದ್ದು ಇದರ ಜೊತೆಗೆ ಸರ್ಕಾರಿ ನೌಕರರ ಮೊಬೈಲ್ ಗೆ ವೇತನ ಮಾಹಿತಿ ಸಂದೇಶ ಬರಲಿದೆ ಎಂದರು

ಹಾಗೂ ಒಂದು ಕೋಟಿ ರೂಪಾಯಿವರೆಗಿನ ಉಚಿತ ಚಿಕಿತ್ಸೆ ಸೌಲಭ್ಯದ ಯೋಜನೆಗೂ ಸದ್ಯದಲ್ಲೇ ಚಾಲನೆ ಸಿಗಲಿದೆ ಎಂದು ಷಡಾಕ್ಷರಿ ತಿಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.